
ಇಳಕಲ್ : ನಗರದ ಸೆಂಟ್ರಿAಗ್ ಮತ್ತು ಬಾರ ಬೆಂಡಿAಗ್ ಕಾರ್ಮಿಕ ಸಂಘ ಇಳಕಲ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ “ಕಾನೂನು ಅರಿವು ಮತ್ತು ನೆರವು ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಮಿಕರಿಗೆ ಸರಕಾರದಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತವೆ.
ಅವುಗಳನ್ನ ಬಳಸಿಕೊಂಡು ನಿಮ್ಮ ಮಕ್ಕಳನ್ನು ಕಾರ್ಮಿಕ ಮಕ್ಕಳಾಗಿ ಮಾಡಬೇಡಿ.
ಅವರಿಗೆ ಸರಿಯಾಗಿ ಎಲ್ಲಾ ವ್ಯವಸ್ಥೆ ಸರಕಾರದಿಂದ ಸಿಗುತ್ತವೆ ಅವುಗಳನ್ನ ಸದುಪಯೋಗ ಮಾಡಿಕೊಂಡು ನಿಮ್ಮ ಮಕ್ಕಳ ಭವಿಷ್ಯ ಉಜ್ವಲ ವಾಗುವಂತೆ ಮಾಡಿ.
ಕಾನೂನು ಸೇವಾ ಪ್ರಾಧಿಕಾರದಿಂದ ಸಾಕಷ್ಟು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಸಾವಿರಾರು ಕಾನೂನುಗಳಿವೆ ಎಲ್ಲಾ ಕಾನೂನುಗಳನ್ನ ನಿಮಗೆ ತಿಳಿದುಕೊಳ್ಳಲು ಆಗುವುದಿಲ್ಲ. ಸ್ವಲ್ಪಮಟ್ಟಿಗಾದರು ನಿಮಗೆ ದಿನ ನಿತ್ಯ ಯಾವ ಕಾನೂನುಗಳು ಬೇಕು ಎಂಬುದು ನಾವು ತಾಲೂಕಿನ ವತಿಯಿಂದ ಇಂತಹ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತೇವೆ.
ಮನುಷ್ಯ ಹುಟ್ಟಿದಾಗಿನಿಂದ ಕಾನೂನು ಆರಂಭ. ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ಯಾಕೆ ಬೇಕು ಎಂಬದು ನಿಮಗೆ ಗೊತ್ತಿದೆ. ನಿಮ್ಮ ಮಗು ಹುಟ್ಟಿದ ಬಳಿಕ ಸಂಬಧಿಸಿದ ಅಧಿಕಾರಿಳನ್ನ ಭೇಟಿ ಮಾಡಿ ದಾಖಲಿಸಿ . ಇಲ್ಲವಾದಲ್ಲಿ ಶಾಲೆ ಸೇರಿಸುವಾಗ, ಸರಕಾರಿ ಹುದ್ದೆಗೆ ಇನ್ನಿತರ ಕೆಲಸಗಳಿಗೆ ಅವಶ್ಯಕವಾಗಿ ಬೇಕು.
ಎಂದು ವಕೀಲ ಸಂಘದ ಅಧ್ಯಕ್ಷ ಎಮ್.ಬಿ.ದೇಶಪಾಂಡೆ ಯವರು
ಕಾರ್ಮಿಕರಿಗೆ ಕಾನೂನಿನ ಬಗ್ಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಅಪರ ದಿವಾಣಿ ನ್ಯಾಯಧೀಶರಾದ ಚೇತನಾ ಅರೀಕಟ್ಟಿ, ಅಧ್ಯಕ್ಷ ಸೆಂಟ್ರಿAಗ್ ಮತ್ತುಬಾರಬೆಂಡಿಗ್ ಕಾರ್ಮಿಕ ಸಂಘ ಜಿ.ಎಮ್.ಎಪ್.ಸಿ.ಹುನಗುಂದ, ಸರಕಾರಿ ಅಭಿಯೋಜಕರು ಮತ್ತು ಕಾರ್ಯನಿರ್ವಾಹಕರು ಹುನಗುಂದರಾಘವೇAದ್ರ ಹೋಸಮನಿ, ಪಿ.ಎಸ್.ಐ ಶಿವರಾಜ ನಾಯಕವಾಡ, ರಾಜಶೇಖರ ಕುರಡಿಕೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ