April 26, 2024

Bhavana Tv

Its Your Channel

ಸುಸಂಪನ್ನಗೊOಡ ಸ್ವರ ಸಂಜೆ

ಬೆಂಗಳೂರು:- ಸಪ್ತಕ ಸಂಸ್ಥೆ ಮಲ್ಲೇಶ್ವರದಲ್ಲಿರುವ ಕೆನರಾ ಯೂನಿಯನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವರ ಸಂಜೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ಪ್ರಾರಂಭದಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆ ಗಳಾದ ಕಾರ್ತಿಕ ಹೆಗಡೆ, ಹಾನಬಿ ಅವರ ಗಾಯನ ( ರಾಗ- ಪೂರಿಯ ಕಲ್ಯಾಣ್ ಹಾಗೂ ಸಂತ ಸೂರದಾಸ ಅವರ ಭಜನ್) ಅದಕ್ಕೆ ಸಮರ್ಥವಾಗಿ ಅಕ್ಷಯ ಭಟ್ಟ, ಅಂಸಳ್ಳಿ ಅವರ ತಬಲಾ ಹಾಗೂ ಅಜಯ್ ಹೆಗಡೆ, ವರ್ಗಾಸರ ಅವರ ಹಾರ್ಮೋನಿಯಂ ವಾದನ ಶ್ರೋತೃಗಳ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ನಂತರ ಸಪ್ತಕ ಸಂಸ್ಥೆಯ ವತಿಯಿಂದ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ರಾದ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮಾ ಅವರು ಪಂಡಿತ ರವೀಂದ್ರ ಯಾವಗಲ್ ಅವರನ್ನು ಸನ್ಮಾನಿಸಿ ಗೌರವಿಸಿ,
ಯಾವಗಲ್ ಅವರಿಗೆ ಶಾಲು ಹೊದೆಸಲು ಅವಕಾಶ ಸಿಕ್ಕಿದ್ದು ತನ್ನ ಭಾಗ್ಯ ಎಂದರು. ಸಪ್ತಕ ಸಂಸ್ಥೆಯು ಹತ್ತು ಹಲವು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿಶಿಷ್ಟ ಸೇವೆ ಸಲ್ಲಿಸಿಸುತ್ತಿರುವದು ಶ್ಲಾಘನೀಯ ಎಂದರು.
ಸAಚಾಲಕರಾದ ಜಿ. ಎಸ್. ಹೆಗಡೆ ಅವರು ಮಾತನಾಡಿ ಸಪ್ತಕದ ಕಲಾ ಯಾತ್ರೆಯಲ್ಲಿ ಇದೊಂದು ಸ್ಮರಣೀಯ ಸಂಭ್ರಮ ಎಂದರು.
ಕೊನೆಯಲ್ಲಿ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮಾ ಅವರ ಮೃದಂಗ ಹಾಗೂ ಪಂಡಿತ ರವೀಂದ್ರ ಯಾವಗಲ್ ಅವರ ತಬಲಾ ಜುಗಲ್ಬಂದಿ ಹಾಗೂ ರಂಜನ್ ಬೇವುರಾ ಅವರ ವಯೋಲಿನ್ ಲೆಹರಾ,
ಶ್ರೋತ್ರಗಳನ್ನ ಲಯ ಲಾಸ್ಯ ಲೋಕದಲ್ಲಿ ತೇಲಿಸಿ ಅಪೂರ್ವ ಅನುಭವ ನೀಡಿತು.
ಕೊನೆಯಲ್ಲಿ ಸಭಾಂಗಣದ ತುಂಬಾ ಸೇರಿದ್ದ ಶ್ರೋತೃಗಳು ಎದ್ದು ನಿಂತು ಸುಧೀರ್ಘ ಕರತಾಡನ ಮಾಡಿ ಸಂತೋಷ ಅಭಿವ್ಯಕ್ತಿಸಿದ್ದು ಸಾಕ್ಷಿ ಆಯಿತು.

error: