April 26, 2024

Bhavana Tv

Its Your Channel

ಕಣ್ಣು ಕಟ್ಟಿಕೊಂಡು ಸಾಧನೆ ಮಾಡಿದ ಡೀರನ್ ರೆಡ್ಡಿ

ಬೆಂಗಳೂರಿನ ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್‌ನಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 12 ವರ್ಷದ ಡೀರನ್ ಸಿ ರೆಡ್ಡಿ ಎಂಬ ಬಾಲಕ ತನ್ನ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ & ಕಲಾಂ ವರ್ಲ್ಡ್ ರೆಕಾರ್ಡ್ ದಿಂದ ಪ್ರಶಸ್ತಿ ಪಡೆದಿದ್ದಾನೆ.

ಬೆಂಗಳೂರಿನ ಜೈ ಪ್ರಗತಿ ಲೇಔಟ್ ವಾಸ್ತು ಲೇಔಟ್ ಹತ್ತಿರ ಕುಡ್ಲುದ ಚಂದರಶೇಖರ್ ರೆಡ್ಡಿ ಡಿ ಸಿ ಮತ್ತು ಉಷಾ ರೆಡ್ಡಿ ಎಸ್ ಇವರ ಮಗನಾದ ಇವನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವುದು, ಬರೆಯುವುದು, ಬಣ್ಣಗಳನ್ನು ಗುರುತಿಸುವುದು, ಟಿವಿ ಮತ್ತು ಮೊಬೈಲ್ ಆಪರೇಟಿಂಗ್, ಹೀಗೆ ಹತ್ತು ಹಲವು ಸಾಧನೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾಧನೆ ತೋರಿದ್ದಾನೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಒಂದು ನಿಮಿಷದಲ್ಲಿ 25 ಮೇಣದ ಬತ್ತಿ ಹಚ್ಚಿ ಮಾಡಿದ ಇವನ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ & ಕಲಾಂ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಿದೆ, ಇವನ ಸಾಧನೆಗೆ ಇವನ ಯೋಗ ಗುರುಗಳಾದ ಸತೀಶ ಪದ್ಮನಾಭನ್ ಮತ್ತು ತಾಯಿ ಉಷಾ ಮಾರ್ಗದರ್ಶಕರಾಗಿದ್ದಾರೆ.

error: