October 3, 2024

Bhavana Tv

Its Your Channel

ಕರ್ನಾಟಕದ ಬೆನ್ನೇರಿದ ‘ಬಾಂಬೆ ಕೊರೋನಾ’ ಭೂತ : ಇಂದು 63 ಜನರಿಗೆ ಸೋಂಕು, 1458ಕ್ಕೆ ಸೋಂಕಿತರ ಸಂಖ್ಯೆ ಏರಿಕೆ.

ಬೆಂಗಳೂರು : ರಾಜ್ಯದಲ್ಲಿ ಕಳೆದ ನಿನ್ನೆ ದಾಖಲೆಯ 149 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇಂದು ಮತ್ತೆ ಕೊರೊನಾ ಸೋಂಕಿನ ಸರಣಿ ಮುಂದುವರೆದಿದ್ದು, ರಾಜ್ಯದಲ್ಲಿ ಇಂದು ದಾಖಲೆಯ 63 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ 1458ಕ್ಕೆ ಏರಿಕೆಯಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ ವಿವಿಧ ಜಿಲ್ಲೆಗಳಲ್ಲಿ ದಾಖಲೆಯ 63 ಜನರಿಗೆ  ಕೊರೋನಾ ವೈರಸ್ ಸೋಂಕು ತಗುಲಿದೆ. ಹೀಗಾಗಿ ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.

ಇಂದು ಎಲ್ಲೆಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ..?

  • ಬೆಂಗಳೂರು ನಗರ -04
  • ಮಂಡ್ಯ -08
  • ಕಲಬುರ್ಗಿ -07
  • ಬೀದರ್ – 10
  • ಹಾಸನ – 21
  • ಉತ್ತರ ಕನ್ನಡ -01
  • ದಕ್ಷಿಣ ಕನ್ನಡ – 01
  • ಉಡುಪಿ -06
  • ತುಮಕೂರು -04
  • ಯಾದಗಿರಿ -01

ಒಟ್ಟಾರೆಯಾಗಿ ಇಂದು ಹೊಸದಾಗಿ 63 ಜನರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಆಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾಗೆ ಇದುವರೆಗೆ 40 ಜನರು ಬಲಿಯಾಗಿದ್ದಾರೆ. ಇದುವರೆಗೆ 553 ಕೊರೊನಾ ವೈರಸ್ ಸೋಂಕು ಪೀಡಿತರು ಗುಣಮುಖರಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ.

Source: News Hunt

error: