May 3, 2024

Bhavana Tv

Its Your Channel

ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಹೊರ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ವತಿಯಿಂದ ಅನಿರ್ದಿಷ್ಟ ಅವಧಿ ಮುಷ್ಕರ

ಬೆಂಗಳೂರು : ನಗರದ ಫ್ರೀಡಂ ಪಾರ್ಕ್ ಬಳಿ ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಹೊರಗುತ್ತಿಗೆ ನೌಕರರ ಹಿತ ರಕ್ಷಣಾ ವೇದಿಕೆ ಮತ್ತು ಕನ್ನಡಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿವಿಧ ಭಾಗದಲ್ಲಿ ಕೆಲಸವನ್ನ ನಿರ್ವಹಿಸುವ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಹೊರಗುತ್ತಿಗೆ ನೌಕರರು ಅನಿರ್ದಿಷ್ಟಾವದಿ ಮುಷ್ಕರವನ್ನು ನಡೆಸಿದರು. ಮಾಡು ಇಲ್ಲವೇ ಮಡಿ ಎಂಬ ವಿನೂತನ ಹೋರಾಟ ವನ್ನ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ನಡೆಯುವ ಸ್ಥಳಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಇಂಧನ ಮಂತ್ರಿಗಳಾದ ಕೆ ಜೆ ಜಾರ್ಜ್ ರವರು ಆಗಮಿಸಬೇಕು ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಕೂಡ ಈ ಸ್ಥಳವನ್ನು ಬಿಟ್ಟು ಜರುಗುವುದಿಲ್ಲ ಎಂದು ಆಕ್ರೋಸಾ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಹೊರ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಲೀಲಾಸಾಗರ್ ಕಳೆದ ೧೦-೧೫ ವರ್ಷಗಳಿಂದ ಬೆಳಕನ್ನು ನೀಡುತ್ತಿರುವ ನಮ್ಮ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಹೊರಗುತ್ತಿಗೆ ನೌಕರರು ಜೀತದಾಳುಗಳಂತೆ ದುಡಿಯುತ್ತಿದ್ದಾರೆ ಆದರೆ ಸರ್ಕಾರ ಅಂಥವರಿಗೆ ಯಾವುದೇ ರೀತಿಯ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡದೆ ಮಲತಾಯಿ ಧೋರಣೆ ಮಾಡುತ್ತಿದೆ ಹಾಗಾಗಿ ನಾವು ಮತ್ತು ನಮ್ಮ ಎಲ್ಲಾ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಹೊರಗುತ್ತಿಗೆ ನೌಕರರು ಈ ದಿನ ನಗರದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟವಾದ ಮುಷ್ಕರನ್ನ ನಡೆಸುತ್ತಿದ್ದೇವೆ ನಮ್ಮ ಬೇಡಿಕೆ ನಮ್ಮನ್ನು ಕಾಯಂ ಮಾಡಬೇಕು, ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು, ಮತ್ತು ಈ ನಮ್ಮ ಕೆಲಸದ ವೇಳೆಯಲ್ಲಿ ವಿದ್ಯುತ್ ಅವಘಡದಿಂದ ಅಂಗಾAಗವನ್ನು ಕಳೆದುಕೊಂಡ ನೊಂದ ನೌಕರರಿಗೆ ಪರಿಹಾರವನ್ನ ಕಟ್ಟಿಕೊಡಬೇಕು ಮತ್ತು ಸೇವಾ ಭದ್ರತೆಯನ್ನು ಒದಗಿಸಿ ಕೊಡಬೇಕೆಂದು ಮಾಧ್ಯಮದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದರು. ಅಲ್ಲದೆ ನಮ್ಮ ಜೊತೆ ಕನ್ನಡಪರ ಸಂಘಟನೆಗಳು ನಮ್ಮ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲವನ್ನು ನೀಡಿದ್ದು ಅವರಿಗೂ ಕೂಡ ಈ ಮಾಧ್ಯಮದ ಮೂಲಕ ಧನ್ಯವಾದಗಳನ್ನ ತಿಳಿಯುತ್ತೇವೆ ಎಂದರು. ಈ ಸಂದರ್ಭದಲ್ಲಿ ರಾಜ್ಯಕೆ ಪಿ ಟಿ ಸಿ ಎಲ್ ಮತ್ತು ಹೆಸ್ಕಾಂ ಹೊರಗುತ್ತಿಗೆ ನೌಕರರು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ವಿವಿಧ ಜಿಲ್ಲೆಯ ಅಧ್ಯಕ್ಷರುಗಳು ಇದ್ದರು.

error: