October 5, 2024

Bhavana Tv

Its Your Channel

ವಿದ್ಯುತ್ ಗುತ್ತಿಗೆದಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸರ್ವಸದಸ್ಯರ ಸಭೆ

ಬೆಂಗಳೂರು : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. 2022-23 ನೇ ಸಾಲಿನ 10ನೇ ಸರ್ವಸದಸ್ಯರ ಸಭೆಯು ಶನಿವಾರದಂದು ಬೆಂಗಳೂರು ನಗರದ ವೈ. ಮುನಿಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಆನಂದರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮಹದೇವಸ್ವಾಮಿ.ಕೆ.ಎಸ್, ನಿರ್ದೇಶಕರುಗಳಾದ ಡಾ.ಬಿ.ಎಸ್.ಚಂದ್ರಶೇಖರ,ರವಿ ಶೆಟ್ಟಿ, ರಮೇಶ್.ಎಸ್,ಕುಮಾರ್.ಎ.ಎನ್,ವಿ.ಶಾಂತಕುಮಾರ,ಎಚ್.ಎನ್.ಮಹದೇವಯ್ಯ, ಜಿ.ರಾಮಣ್ಣ, ಬಿ.ವಿ.ನರಸಿಂಹಯ್ಯ,ಸ0ಗಪ್ಪ ದತ್ತಪ್ಪ ಕಡ್ಲಗೊಂಡ, ಬಸವರಾಜ.ದೇವಿನವರ,ಹೊನ್ನಪ್ಪ,ವೈ.ಎಸ್.ಗಂಗಮ್ಮ,ಬಿ.ಆರ್.ಪುಷ್ಪಲತರವರು ಉಪಸ್ಥಿತರಿದ್ದು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ರಮೇಶ್ ಭಂಡಾರಿ ಪ್ರಾರ್ಥಿಸಿದರು ಕಾರ್ಯದರ್ಶಿ ವಿದ್ಯಾಶ್ರೀ ಎನ್.ಎಂ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಚಾರ್ಟರ್ಡ ಅಕೌಂಟ್ ಹೆಚ್.ಆರ್.ಕೊಪ್ಪರವರು ಲೆಕ್ಕ ಪರಿಶೋಧನ ವರದಿ ಸಿದ್ಧಪಡಿಸಿ ದ್ದರು.ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಆನಂದ.ಆರ್.ರವರು ವಹಿಸಿಮಾತನಾಡಿದರು .ಶಾಂತಕುಮಾರ 2021-22ನೇ ಸಾಲಿನ ಸರ್ವ ಸದಸ್ಯರ ಸಭೆಯ ನಡಾವಳಿಗಳನ್ನು ವರದಿ ವಾಚಿಸಿದರು. ನಂತರ ಅಧ್ಯಕ್ಷರು 2023-24ರ ಸೊಸೈಟಿಯ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದರು.ಸೊಸೈಟಿಯ ಸದಸ್ಯರುಗಳ ಮಕ್ಕಳು ಎಸ್.ಎಸ್.ಎ.ಲ್ ಸಿ ಯಲ್ಲಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವರದಿ ; ವೇಣುಗೋಪಾಲ ಮದ್ಗುಣಿ

error: