May 21, 2024

Bhavana Tv

Its Your Channel

ರಾಮದುರ್ಗ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡುವ ಕುರಿತು ರಾಮದುರ್ಗ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಈ ಪ್ರತಿಭಟನೆ ರಾಮದುರ್ಗ ಪಟ್ಟಣದ ಹೊರ ವಲಯದ್ಲಲಿರುವ ಬಸವೇಶ್ವರ ಸರ್ಕಲ್ ನಿಂದ ಪ್ರಾರಂಭವಾಗಿ ಮಿನಿ ವಿಧಾನ್ ಸೌಧಗೆ ಬಂದು ತೆರಳಿ ಮಾನ್ಯ ತಹಶೀಲ್ದಾರರು ರಾಮದುರ್ಗ ಇವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ 14 ಸಾವಿರಕ್ಕೂ ಮೇಲ್ಪಟ್ಟ ಅತಿಥಿ ಉಪನ್ಯಾಸಕರು 430 ಕಾಲೇಜುಗಳಲ್ಲಿ ಸುಮಾರು 10 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ . ದೇಶದಲ್ಲಿಯೇ ಅತ್ಯಂತ ಕಡಿಮೆ 11 ಸಾವಿರ ಮತ್ತು 13 ಸಾವಿರ ಗೌರವಧನ ಪಡೆದುಕೊಂಡು ಅದರಲ್ಲಿಯೂ ವರ್ಷದ 6 ರಿಂದ 7 ತಿಂಗಳುಗಳು ಮಾತ್ರ ದುಡಿಯುತ್ತಿದ್ದೇವೆ . ಇತ್ತಿಚಿಗೆ ಸೆಮಿಸ್ಟರ್ ಪದ್ಧತಿಯಂತೆ ಸರ್ಕಾರ ಅತಿಥಿ ಉಪನ್ಯಾಸಕರ ಸೇವೆಯನ್ನು ಪರಿಗಣಿಸಿ ನೇಮಕಾತಿ ಆದೇಶ ಮಾಡುತ್ತಿದೆ . 1 , 3 , 5 ಸೆಮಿಸ್ಟರ್ ಗೆ ಮೊದಲ ಹಂತ 2 , 4 , 6 ಸೆಮಿಸ್ಟರ್ ಗೆ ಎರಡನೇ ಹಂತ ನೇಮಕಾತಿ ಆದೇಶಗಳು ಬರುತ್ತಿವೆ . ಇದರಿಂದಾಗಿ ಕಳೆದ 10 ರಿಂದ 15 ವರ್ಷಗಳಿಂದ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಕಾತಿ ಆದೇಶಗಳು ಬರುತ್ತಿದ್ದವು . ಈಗ ಅದರಲ್ಲಿಯೂ 2 ರಿಂದ 3 ತಿಂಗಳುಗಳ ಅತಿಥಿ ಉಪನ್ಯಾಸಕರಿಗೆ ದೊರೆಯುತ್ತಿಲ್ಲ . ಸಮಾನ ಕೆಲಸಕ್ಕೆ ಸಮಾನ ವೇತನವೆಂಬ ಉಚ್ಛನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸುವ ಸರಕಾರ ಮಾನವ ಹಕ್ಕುಗಳನ್ನು ಗಾಳಿಗೆ ತೂರುತ್ತಿವೆ . ಅತಿಥಿ ಉಪನ್ಯಾಸಕರಾಗಿ ಕೇವಲ ನಾವು ಬೋಧನಾ ಕಾರ್ಯಗಳನ್ನಷ್ಟೇ ನಿರ್ವಹಿಸದೇ ಶೈಕ್ಷಣಿಕ ಕರ್ತವ್ಯಗಳಾದ ಪರೀಕ್ಷಾ ಕೊಠಡಿ ಮೇಲ್ವಿಚಾರಣೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾಲೇಜುಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ . ಆದರೆ ಸರ್ಕಾರಕ್ಕೆ ನಮ್ಮ ಶ್ರಮದ ಬೆವರಿನ ಹನಿಯ ಬೆಲೆ ಅರ್ಥವಾಗುತ್ತಿಲ್ಲ . ನಮ್ಮನ್ನೆಲ್ಲ ಶೈಕ್ಷಣಿಕ – ಆಧುನಿಕ ಜೀತದಾಳುಗಳಂತೆ ಶೋಷಿಸುತ್ತಿವೆ . ಅಕ್ಷರಶಿಲ್ಪಿಗಳ ಮಹತ್ವವನ್ನು ಅರಿಯದ ಸರಕಾರ ಅತ್ಯಂತ ಕನಿಷ್ಠ ಗೌರವಧನದಲ್ಲಿ ಅತಿಥಿ ಉಪನ್ಯಾಸಕರನ್ನು ದುಡಿಸಿಕೊಳ್ಳುತ್ತಿದೆ . ವರ್ಷದ 12 ತಿಂಗಳು ವೇತನ ನೀಡದ ಸರಕಾರ ಅತಿಥಿ ಉಪನ್ಯಾಸಕರ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದೆ . ನಮಗೆ ಆರೋಗ್ಯ ಸೇರಿದಂತೆ ಕನಿಷ್ಠ ಸೇವಾ ಸೌಲಭ್ಯಗಳನ್ನು ಸರಕಾರ ನೀಡುತ್ತಿಲ್ಲ .ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ರೈತ ಮುಖಂಡರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

error: