May 3, 2024

Bhavana Tv

Its Your Channel

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುಸಗುಪ್ಪಿ ಗ್ರಾಮದಲ್ಲಿ ಅನೀಷ್ಟ ಪದ್ದತಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್,

ಬೆಳಗಾವಿ ; ಮುಸಗುಪ್ಪಿ ಗ್ರಾಮದ ಹನುಮಂತದೇವರ ಗುಡಿ ಮುಂದೆ ಹಾಲು ಓಕಳಿ ಆಡಲು ಹೊಂಡ ತೆಗೆಯ ಲಾಗಿದೆ .ಆ ಹೊಂಡದಲ್ಲಿ ನೀರು ತುಂಬಿಸಿ ಸಗಣಿ ಕೆಸರು ಬೆರೆಸಿ , ಡೊಂಬರ ಜಾತಿಯ ಹೆಣ್ಣುಮಗಳನ್ನು ನಿಲ್ಲಿಸಿ ,ಊರಿನ ಮೇಲ್ವರ್ಗದ ಗಂಡಸರೆಲ್ಲಾ ಸೇರಿ ಸಗಣಿ, ಕೆಸರು ,ರಾಡಿ ,ಬಣ್ಣ, ಇತರೆ ಎಲ್ಲವನ್ನು ಎರಚಲಾಗುತ್ತದೆ. ಈ ಅಮಾನವೀಯ ಅನಿಷ್ಟ ಪದ್ಧತಿಯನ್ನು ಹಾಲು ಓಕಳಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ .
ಈ ಆಚರಣೆ ರವಿವಾರ ಸಂಜೆ ನಾಲ್ಕು ಗಂಟೆಗೆ ಚಿತ್ರೀಕರಿಸಿದ್ದು .ಹಾಗೂ ಸೋಮವಾರ ಸಂಜೆ ನಾಲ್ಕು ಗಂಟೆಗೆ ಇದೇ ಕಾರ್ಯಕ್ರಮ ಸುಮಾರು ಐದು ನೂರು ಜನ ಊರಿನ ಪ್ರಮುಖರೆಲ್ಲ ಸೇರಿ ಎರಡನೇ ದಿನವೂ ಆಚರಿಸಲಾಗಿದೆ . ಆ ಹೆಣ್ಣು ಮಗಳಿಗೆ ಪುಡಿಗಾಸಿನ ಆಸೆ ತೋರಿಸಲಾಗುತ್ತದೆ. ೫೦೦೦ ರೂಪಾಯಿಗಳ . ಹಣದಾಸೆ ತೋರಿಸಿ ಇಂತಹ ಅಮಾನವೀಯ ಆಚರಣೆಯನ್ನ ಆಚರಿಸಲಾಗುತ್ತದೆ .ಈ ಆಧುನಿಕ ಕಾಲದಲ್ಲೂ ಜನಾಂಗೀಯ ನಿಂದನೆ ಆಗುವಂತಹ,ಅಸ್ಪೃಶ್ಯತೆಯ ಪ್ರತಿರೂಪದಂತಿರುವ ಅಮಾನವೀಯ, ಅನಿಷ್ಠ -ಆಚರಣೆ ಆಚರಿಸುವುದು ಅಪರಾಧವಾಗಿದ್ದು ದಯವಿಟ್ಟು ಈ ಆಚರಣೆಯನ್ನು ತಡೆಯಬೇಕಾಗಿ ಡೊಂಬರ ಸಂಘ ಪ್ರಮುಖರು ವಿನಂತಿಸಿಕೊAಡಿದ್ದಾರೆ. ಈ ಕರೋನಾ ಸಂಕಷ್ಟದ ಸಮಯದಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಲ್ಲಿಸಿರುವಾಗ ಹಾಗೂ ನಿರ್ಬಂಧಿಸಿರುವ ಇಂತಹ ಸಂದರ್ಭದಲ್ಲಿ ಈ ಆಚರಣೆ ಆಚರಿಸುವುದು ಅಪರಾಧವಾಗಿದೆ. ಆದ್ದರಿಂದ ದಯವಿಟ್ಟು ಈ ಆಚರಣೆಗಳನ್ನು ತಡೆಯಬೇಕಾಗಿ ಸಂಬAಧಪಟ್ಟ ಪೋಲಿಸ್ ಇಲಾಖೆಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳನ್ನು , ತಹಸಿಲ್ದಾರ್ ಅವರನ್ನು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಅಲ್ಲದೆ ದೃಶ್ಯ ಮಾಧ್ಯಮ ಹಾಗೂ ಅಕ್ಷರ ಮಾಧ್ಯಮದ ಮಿತ್ರರು ಇಂತಹ ಅನಿಷ್ಠ ಪದ್ಧತಿಗಳ ತೊಡೆದುಹಾಕುವದಕ್ಕಾಗಿ ಕೈಜೋಡಿಸಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ ಎಂದು ನೊಂದ ಸಮುದಾಯದ ಪರವಾಗಿ ಡಿ .ಕುಮಾರಸ್ವಾಮಿ. ಮರ್ಲಾನಹಳ್ಳಿ. ಕಾರಟಗಿ ವಿನಂತಿಸಿದ್ದಾರೆ,.
ವರದಿ ; ಮಹೇಶ ಶರ್ಮಾ, ಬೆಳಗಾವಿ

error: