May 2, 2024

Bhavana Tv

Its Your Channel

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಆಯ್ದ ಸರಕಾರಿ ಶಾಲೆಗಳಿಗೆ ಎಲೆಕ್ಟ್ರಾನಿಕ್ ಉಪಕರಣ ವಿತರಣೆ

ಗುಂಡ್ಲುಪೇಟೆ ; ತಾಲೂಕಿನ ಚಿಕ್ಕ ತುಪ್ಪುರು ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ನವ ದೆಹಲಿ ವತಿಯಿಂದ ಬಾಲ ಮಿತ್ರ ಗ್ರಾಮಗಳ ಆಯ್ದ ಸರಕಾರಿ ಶಾಲೆಗಳಿಗೆ ಲ್ಯಾಪ್ಟಾಪ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣ ವಿತರಣಾ ಕಾರ್ಯಕ್ರಮಕ್ಕೆ ಶಾಸಕರಾದ ಎಚ ಎಮ್ ಗಣೇಶ್ ಪ್ರಸಾದ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದವರು ಯಾವುದೇ ಒಂದು ಟ್ರಸ್ಟ್ ನಡೆಸುವುದು ಅಷ್ಟು ಸುಲಭದ ಮಾತಲ್ಲ ಅದರಲ್ಲೂ ದಾನಿಗಳು ಮುಂದಾದರೆ ಮಾತ್ರ ಟ್ರಸ್ಟ್ ನ ಅಭಿವೃದ್ಧಿ ಮತ್ತು ಸಾಮಾಜಿಕ ಕೆಲಸಗಳನ್ನು ನಿರ್ವಹಿಸುವ ಸಮಾಜದ ಏಳಿಗೆಗೆ ದಾರಿದೀಪ ಆಗುತ್ತದೆ ಅಲ್ಲದೆ ಈ ಟ್ರಸ್ಟ್ ನ ಯೋಜನಾ ನಿರ್ದೇಶಕರಾದ ನಾರಾಯಣಸ್ವಾಮಿ ಅವರು ನಮ್ಮ ತಾಲೂಕಿನಲ್ಲಿ ೧೨ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿಯತ್ತ ಸಾಗುತ್ತಾ ಬಂದಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟ್ನ ಯೋಜನಾ ನಿರ್ದೇಶಕರಾದ ನಾರಾಯಣಸ್ವಾಮಿ ಮಾತನಾಡಿ ನಮ್ಮ ಸಂಸ್ಥೆ ಕಳೆದ ಹತ್ತು ವರ್ಷದಿಂದ ಸೇವೆಯನ್ನ ಮಾಡಿಕೊಂಡು ಬಂದಿದೆ ಆ ನಿಟ್ಟಿನಲ್ಲಿ ನವದೆಹಲಿಯ ಕೈಲಾಶ್ ಎಂಬುವರು ಒಮ್ಮೆ ಬಂಡಿಪುರಕ್ಕೆ ಭೇಟಿ ನೀಡಿದಾಗ ಇಲ್ಲಿನ ಸಮಾಜದ ಕಟ್ಟೆ ಕಡೆಯ ವ್ಯಕ್ತಿಗಳಿಗೂ ನಮ್ಮ ಟ್ರಸ್ಟ್ ನಿಂದ ಏನೆಲ್ಲಾ ಅನುಕೂಲಗಳಾಗಬಹುದು ಎಂಬುದನ್ನ ಒಂದು ಯೋಜನೆ ರೂಪದಲ್ಲಿ ಗ್ರಾಮಗಳಿಗೆ ತರಬಹುದು ಎಂಬುದನ್ನು ಅವಲೋಕಿಸಿ ಅಂದು ತೀರ್ಮಾನಿಸಿದರು. ಬಹಳ ಮುಖ್ಯವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಎಲ್ಲಾ ರೀತಿಯ ಅನುಕೂಲಗಳನ್ನು ಮಾಡುವುದರ ಜೊತೆಗೆ ಹೆಚ್ಚಿನ ವಿಷಯವಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ0ತೆ ಮಕ್ಕಳ ಕಲಿಕಾ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಗಮನ ಹರಿಸಿ ಸಂಪೂರ್ಣವಾಗಿ ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಶಿಕ್ಷಕರ ಗುಣಮಟ್ಟವನ್ನು ಹೆಚ್ಚು ಜ್ಞಾನವನ್ನು ಬರಿಸುವಲ್ಲಿ ಆನ್ ಲೈನ್ ಶಿಕ್ಷಣವನ್ನ ನಡೆಸಲು ಬಹಳ ಮುಖ್ಯವಾಗಿ ಎಲೆಕ್ಟ್ರಾನಿಕ್ ಲ್ಯಾಪ್ಟಾಪ್ ಉಪಕರಣಗಳನ್ನು ಆಯ್ದ ಸರ್ಕಾರಿ ಪ್ರೌಢಶಾಲೆ ಗಳಿಗೆ ನಮ್ಮ ಸಂಸ್ಥೆ ವತಿಯಿಂದ ನೀಡುತ್ತಾ ಬಂದಿದ್ದೇವೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಧ್ಯಮದ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಾಯಮನಿ, ಮಕ್ಕಳ ಸಮಿತಿಯ ಸರಸ್ವತಿ, ಪಿಡಿಒ ಶಿವಸ್ವಾಮಿ ಅನಿತಾ, ಮಹೇಶ್, ಪಿನ್ನಯ್ಯ, ಮಹೇಶಪ್ಪ,,ಜ್ಯೋತಿ, ಚಂದ್ರಮ್ಮ, ಸಾಹಿತಿಗಳಾದ ಕಾಳಿಂಗ ಸ್ವಾಮಿ, ನಾಗಮ್ಮ ಭಾಗ್ಯ ಪವಿತ್ರ ಮಂಜು ಸೇರಿದಂತೆ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್ಟಿಎಂಸಿ ಸದಸ್ಯರು ಗ್ರಾಮಸ್ಥರು ಶಾಲೆಯಮಕ್ಕಳು ಸಾರ್ವಜನಿಕರು ಇದ್ದರು.
ವರದಿ ; ಸದಾನಂದ ಕನ್ನೇಗಾಲ

error: