May 2, 2024

Bhavana Tv

Its Your Channel

ಜ್ಞಾನ ಹಂಚುವುದರಿ0ದ ಸಮಾಜದ ಆರೋಗ್ಯ ವೃದ್ಧಿ – ಸುಭಾಷ್ ಮಾಡ್ರಹಳ್ಳಿ.

ಗುಂಡ್ಲುಪೇಟೆ : ಜ್ಞಾನ ಹಂಚುವುದರಿ0ದ ಸಮಾಜದ ಆರೋಗ್ಯ ವೃದ್ಧಿ ಆಗುತ್ತದೆ ಎಂದು ಗುಂಡ್ಲುಪೇಟೆಯ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ ಹೇಳಿದರು.
ಅವರು ಚಿಜಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಚಿಜಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ನೂತನ ನರ್ಸಿಂಗ್ ಕಾಲೇಜ್ ಮತ್ತು ಕಛೇರಿ ಪ್ರಾರಂಭೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಜಲ್ ಟ್ರಸ್ಟ್ ಶೈಕ್ಷಣಿಕ ಸೇವೆಯನ್ನು ಒದಗಿಸುವುದರ ಜೊತೆಗೆ ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತಿರುವುದು ಎಲ್ಲರು ಮೆಚ್ಚುವಂತ ಕೆಲಸ ಆಗಿದೆ. ಡಾ ಅಂಬೇಡ್ಕರ್ ರವರ ಮೊದಲ ಧ್ಯೇಯ ವಾಕ್ಯವೇ ಶಿಕ್ಷಿತರಾಗಿ ಎಂಬುದಾಗಿದೆ .ಆ ಹಾದಿಯಲ್ಲಿ ಚಿಜಲ್ ಸಂಸ್ಥೆ ಕಳೆದ ಹನ್ನೆರಡು ವರ್ಷಗಳಿಂದ ಬಹಳ ಪರಿಶ್ರಮದಿಂದ ಬೆಳೆದಿದೆ. ಇಂದು ಇಲ್ಲಿನ ಸಾವಿರಾರು ವಿಧ್ಯಾರ್ಥಿಗಳು ದೇಶದಾದ್ಯಂತ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ.
ಇದೇ ಅಲ್ಲದೇ ಆರೋಗ್ಯ , ಸಾಮಾಜಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಬುದ್ದ ,ಬಸವ ಮತ್ತು ಡಾ ಅಂಬೇಡ್ಕರ್ ಅವರು ಸಹ ಜ್ಞಾನ ವನ್ನು ಹಂಚಿದವರೆ ಆಗಿದ್ದಾರೆ .ಆ ಮೂಲಕ ಸಮಾಜದಲ್ಲಿನ ಭ್ರಷ್ಟಾಚಾರ , ಅಸಮಾನತೆ , ಹಾಗೂ ಪಿಡುಗು ಗಳನ್ನು ತೊಳೆಯುವಲ್ಲಿ ಸಫಲರಾದರು. ವಿಶೇಷವೆಂದರೆ ಆಷಾಢ ಮಾಸದಲ್ಲಿ ಚಾಲನೆ ನೀಡುತ್ತಿರುವುದು ಬುದ್ದರು ಮೊದಲ ಬಾರಿಗೆ ಗುರುಭೋಧನೆ ನೀಡಿದ ಪವಿತ್ರ ಮಾಸವಾಗಿದೆ. ಹಾಗಾಗಿ ಪ್ರೀತಿ , ಕರುಣೆ ,ಮಮತೆ ಹಂಚುವುದರಿAದ ಸಮಾಜದ ಸಾಮರಸ್ಯವನ್ನು ಕಾಪಾಡಬಹುದು ಎಂದರು.
ಈ ಸಂಧರ್ಭದಲ್ಲಿ ವೇದಿಕೆ ಯಲ್ಲಿ ಹಿರಿಯ ಮುಖಂಡರಾದ ಟಿ.ನಾಗರಾಜ್ ( ಮಾಜಿ ಉಪಾಧ್ಯಕ್ಷರು ತಾ!!ಪಂ) ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲೋಕೇಶ್ ಗೋಪಾಲಪುರ , ಅಗತಗೌಡನಹಳ್ಳಿ ಬಸವರಾಜ್ , ಕವಿ ಮತ್ತು ಉಪನ್ಯಾಸಕರಾದ ಗುಡಿಕಾರ್ ಸದಾನಂದ , ಡಿ ,ಗೋವಿಂದ ರಾಜ್ , ಸಂಸ್ಥೆಯ ಛೇರ್ಮನ್ ಮಹದೇವಮ್ಮ ಚಿಜಲ್ , ಆರ್ .ಸೋಮಣ್ಣ , ಕೆ.ಎಂ.ಮನಸ್ , ವಕೀಲರಾದ ರಾಜೇಶ್ ಹಂಗಳ ಹಾಗೂ ಚಿಕ್ಕ ನಂಜಯ್ಯ, ಮದ್ದಯ್ಯನಹುಂಡಿ ನಾಗರಾಜ್ , ಗೋವಿಂದ ಕುಣಗಳ್ಳಿ , ಗಿರೀಶ್ ಲಕ್ಕೂರು , ರಾಜೇಂದ್ರ ಪ್ರಸಾದ್ , ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಹಾಗೂ ಬುದ್ದ ಉಪಾಸಕ ಹ. ಜಲೇಂದ್ರ ರವರಿಂದ ಬುದ್ದ ವಂದನೆ ನೆರವೇರಿಸಿದರು.
ಸದಾನಂದ ಕನ್ನೆಗಾಲ, ಗುಂಡ್ಲಪೇಟೆ.

error: