May 4, 2024

Bhavana Tv

Its Your Channel

ಎಸ್. ಎಸ್. ಎಲ್.ಸಿ ಮುಖ್ಯ ಪರೀಕ್ಷೆಗೆ ಸಕಲ ಸಿದ್ದತೆ -ಬಿಇಓ ಎಸ್ ಸಿದ್ದಪ್ಪ

ಬಾಗೇಪಲ್ಲಿ:- ಕೋವಿಡ್-೧೯ ಸಾಂಕ್ರಾಮಿಕದ ಆತಂಕದ ನಡುವೆಯೂ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಸರ್ಕಾರ ವೇಳಾಪಟ್ಟಿ ಪ್ರಕಟಿಸಿದ್ದು, ಬಾಗೇಪಲ್ಲಿ ತಾಲ್ಲೂಕು ಸುರಕ್ಷತೆ ವಿಧಾನಗಳೊಂದಿಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಬಿಇಓ ಎಸ್ ಸಿದ್ದಪ್ಪ ಮಾಧ್ಯಮಕ್ಕೆ ಮಾಹಿತಿ ನೀಡಿ ಮಾತನಾಡಿ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಒಟ್ಟು ೧೯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೨೭೩೫ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಇದರಲ್ಲಿ ೧೪೬೬ ಬಾಲಕರು ಮತ್ತು ೧೨೬೯ ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಈ ಪೈಕಿ ೧೮೦ ಖಾಸಗಿ ಅಭ್ಯರ್ಥಿಗಳಿದ್ದಾರೆ.

ಜುಲೈ ೧೯ರಂದು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಒಳಗೊಂಡ ೧೨೦ ಅಂಕಗಳ ಬಹು ಆಯ್ಕೆ ಆಧಾರಿತ ಪರೀಕ್ಷೆ ಮತ್ತು ಜುಲೈ ೨೨ರಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳನ್ನು ಒಳಗೊಂಡ ಪರೀಕ್ಷೆ ನಡೆಯಲಿದೆ.

೧೯ ಪರೀಕ್ಷಾ ಕೇಂದ್ರಗಳಿದ್ದು ಬಾಗೇಪಲ್ಲಿ ಪಟ್ಟಣದಲ್ಲಿ ೭ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು. ಪ್ರಸಕ್ತ ವರ್ಷ ಕೊಠಡಿಯೊಂದರಲ್ಲಿ ೧೨ ವಿದ್ಯಾರ್ಥಿಗಳಂತೆ ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತೆಯೊಂದಿಗೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ವಿತರಿಸಲಾಗುವುದು. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸುರಕ್ಷತೆಗೆ ಆದ್ಯತೆ:- ಕೋವಿಡ್ ಸೋಂಕಿತರು ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ಪಟ್ಟಣದ ಬಿಇಓ ಎಸ್ ಸಿದ್ದಪ್ಪ,ಬಾಗೇಪಲ್ಲಿ ತಾಲ್ಲೂಕು ಇಸಿಓ ಗಳಾದ ಕೆ.ಬಿ. ಆಂಜನೇಯ ರೆಡ್ಡಿ ,ಆರ್.ಹನುಮಂತ ರೆಡ್ಡಿ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

ವರದಿ:-ರಾ ನಾ ಗೋಪಾಲರೆಡ್ಡಿ ಬಾಗೇಪಲ್ಲಿ

error: