April 27, 2024

Bhavana Tv

Its Your Channel

ಖಾಸಗಿ ಸೀಡ್ಸ್ ಕಂಪನಿಯೊOದು ನೀಡಿರುವ ಬಾಳೆ ತಳಿ ಅದಲು ಬದಲು ರೈತ ಕಂಗಾಲು

ಬಾಗೇಪಲ್ಲಿ:- ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಬಾಳೆ ತೋಟ ಮಾಡಿ ಏಲಕ್ಕಿ ಬಾಳೆಹಳ್ಳಿನ ನಿರೀಕ್ಷೆಯಲ್ಲಿದ್ದ ರೈತ ಬಾಳೆ ಗಿಡ ಏಲಕ್ಕಿ ಬದಲಾಗಿ ಮತ್ತೊಂದು ತಳಿಯ ಬಾಳೆ ಕಾಯಿಗಳನ್ನು ಬಿಟ್ಟಿರುವುದನ್ನು ನೋಡಿ ಆತಂಕಗೊAಡಿದ್ದು ಬಿತ್ತನೆ ಗಿಡಗಳನ್ನು ಸರಬರಾಜು ಮಾಡಿದ ಸೀಡ್ಸ್ ಏಜೆನ್ಸಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ.
ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಪಂ ವ್ಯಾಪ್ತಿಯ ಪಾಕಮಾಕಲಪಲ್ಲಿ ಗ್ರಾಮದ ರೈತ ರಾಮಲಿಂಗಾರೆಡ್ಡಿ ಎಂಬುವವರು ತಮ್ಮ ಮೂರೂವರೆ ಎಕರೆ ಪ್ರದೇಶದಲ್ಲಿ ಸುಮಾರು ೮-೯ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಬಾಳೆ ತೋಟವನ್ನು ಬೆಳೆಸಿದ್ದಾರೆ. ಗೌರಿಬಿದನೂರು ಸಮೀಪದ ಕಂಕರೆ ಫಾರಂ ನಲ್ಲಿರುವ ಐಆರ್‌ಐಂ ಎಂಟರ್ ಪ್ರೈಸಸ್ ಪ್ರೈ ಲಿ.ನಿಂದ ಏಲಕ್ಕಿ
ತಳಿಯ ಸುಮಾರು ೩೧೫೦ ಗಿಡಗಳನ್ನು ಖರೀದಿಸಿ ತಮ್ಮ ಹೊಲದಲ್ಲಿ ನೆಟ್ಟಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿಯೇ ತಿಪ್ಪೆ ಗೊಬ್ಬರವನ್ನು ಹಾಕಿ ಬಾಳೆಬೆಳೆಯನ್ನು ಅತ್ಯಂತ ಸಮೃದ್ಧವಾಗಿ ಬೆಳೆಸಿದ್ದಾರೆ. ಬಾಳೆ ಗಿಡ ಸುಮಾರು ೧೨-೧೪ ಅಡಿ ಎಚ್ಚರಕ್ಕೆ ಬೆಳೆದಿದ್ದು ಬಾಳೆಗೊನೆ ಗಳನ್ನು ಬಂಪರ್ ಬೆಳೆಯ ಮಾದರಿಯಲ್ಲಿ ಬಿಟ್ಟಿದ್ದು ಇನ್ನೇನು ಬಾಳೆಗೊನೆಗಳು ಕಟಾವಿಗೆ ಬಂದು ೨೦ ಲಕ್ಷ ರೂಪಾಯಿಗಳ ಲಾಭದ ನಿರೀಕ್ಷೆಯಲ್ಲಿದ್ದ ರೈತ ಸಂತಸದ ಬದಲು ಆತಂಕಕ್ಕೆ
ಈಡಾಗುವAತೆ ಆಗಿದೆ.
ಬಯಸಿದ್ದು ಏಲಕ್ಕಿ, ಬಂದಿದ್ದು ಮತ್ತೊಂದು ತಳಿ! ರೈತ ರಾಮಲಿಂಗಾರೆಡ್ಡಿ ಏಲಕ್ಕಿ ಬಾಳೆಹಣ್ಣು ಬೆಳೆಯುವ ಉದ್ದೇಶದಿಂದಲೇ ಗಿಡಗಳನ್ನು (ಟಿಶ್ಯು ಕಲ್ಟರ್ ಪ್ಲಾಂಟ್) ನಾಟಿ ಮಾಡಿದ್ದರು ಅವು ಸುಮಾರು ಒಂದು ವರ್ಷ ಸಮೃದ್ಧವಾಗಿ ಬೆಳೆದು ದೊಡ್ಡವಾಗಿ ಫಸಲು ಕೊಡುವ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣಿನ ಬದಲಾಗಿ ಮತ್ತೊಂದು ತಳಿಯ ಗೊನೆಗಳನ್ನು ಬಿಟ್ಟಿದ್ದು ಆತಂಕಕ್ಕೆ ಈಡಾಗುವಂತೆ ಮಾಡಿದೆ. ಅತಿ ಹೆಚ್ಚು ಸಿಹಿ ಇರುವ ಏಲಕ್ಕಿ ಬದಲಾಗಿ ಹುಳಿ ಇರುವ ದೊಡ್ಡ ಗಾತ್ರದ ಬೇರೊಂದು ತಳಿ ಬಾಳೆಗೊನೆಗಳನ್ನು ಕಾಣುವಂತಾಗಿ ರೈತನಿಗೀಗ ಆಕಾಶವೆ ಕಳಚಿಬಿದ್ದಂತಹ ಅನುಭವವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಪ್ರತಿ ಕೆಜಿಗೆ ೪೦-೪೫ ರೂಪಾಯಿಗಳಿದ್ದರೆ ಈಗ ಬಿಟ್ಟಿರುವ ಬಾಳೆ ಹಣ್ಣಿನ ಬೆಲೆ ಕೇವಲ ೧೫ ರೂಪಾಯಿಗಳಿರುವುದು ಆತಂಕವನ್ನುAಟು ಮಾಡಿದೆ. ಸುಮಾರು ೩ ವರ್ಷದ ಬೆಳೆ ಇದಾಗಿದ್ದು ಪ್ರತಿವರ್ಷ ೨೦-೨೫ ಲಕ್ಷದಂತೆ ೬೦-೭೦ ಲಕ್ಷಗಳ ಲಾಭದ ನಿರೀಕ್ಷೆಯಲ್ಲಿದ್ದ ರೈತ ತೀವ್ರ ನಷ್ಟಕ್ಕೆ ಗುರಿಯಾಗಿದ್ದು ಬೆಳೆಯನ್ನು ಇಟ್ಟುಕೊಳ್ಳುವುದೋ ಕಿತ್ತುಹಾಕುವುದೋ ಎಂದ ಗೊಂದಲಕ್ಕೆ ಈಡಾಗಿದ್ದಾರೆ.
ವಿಜ್ಞಾನಿಗಳ ತಂಡ ಭೇಟಿ , ಪರಿಶೀಲನೆ; ತಳಿಯಲ್ಲಿ ಅದಲು-ಬದಲಾಗಿ ಆತಂಕಕ್ಕೆ ಒಳಗಾಗಿರುವ ಪಾಕಮಾಕಲಪಲ್ಲಿ ಗ್ರಾಮದ ರೈತ ರಾಮಲಿಂಗಾರೆಡ್ಡಿಯವರ ಬಾಳೆ ತೋಟಕ್ಕೆ ಕೋಲಾರ ಸಮೀಪದ ಹೊಳಗಗೆರೆ ತೋಟಗಾರಿಕಾ ಸಂಶೋಧನ ಕೇಂದ್ರದ ವಿಜ್ಞಾನಿಗಳ ತಂಡ ಬೇಟಿ ನೀಡಿ ಬಾಳೆ ತೋಟವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದರು. ವಿಜ್ಞಾನಿಗಳಾದ ಹೊಗಳಗೆರೆ ಕೇಂದ್ರದ ಮುಖ್ಯಸ್ಥ ಡಾ.ರಾಮಚಂದ್ರ, ಹಣ್ಣಿನ ಬೆಳೆ ತಜ್ಞ ಡಾ.ರಾಜೇಂದ್ರ ಮತ್ತು ಕೀಟ ಶಾಸ್ತ್ರ ತಜ್ಞ
ಡಾ.ಅಶ್ವತ್ಥನಾರಾಯಣರೆಡ್ಡಿ ಹಾಗು ತಾಲ್ಲೂಕಿನ ತೋಟಗಾರಿಕ ಸಹಾಯಕ ನಿರ್ದೇಶಕ ವೈ.ಬಿ.ಈಶ್ವರಪ್ಪ ಭೇಟಿ ನೀಡಿ ಬಾಳೆ ಗಿಡ ಹಾಗು ಗೊನೆ, ಬಾಳೆ ಹಣ್ಣನ್ನು ಪರಿಶೀಲಿಸಿದರಲ್ಲದೆ ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಸಂಗ್ರಹಿಸಿದರು.


ಬಾಳೆ ತೋಟದ ನಿರ್ವಹಣೆ ಬಗ್ಗೆ ಮೆಚ್ಚುಗೆ, ತಳಿಯಲ್ಲಿ ವ್ಯತ್ಯಾಸ ಪತ್ತೆ: ರೈತ ರಾಮಲಿಂಗಾರೆಡ್ಡಿಯವರು ಬಾಳೆತೋಟವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ, ತಳಿಯಲ್ಲಿ ವ್ಯತ್ಯಾಸವಾಗಿರುವುದು ರೈತನ ಆತಂಕಕ್ಕೆ ಕಾರಣವಾಗಿದ್ದು ತೋಟದಲ್ಲಿ ಎರಡು
ತಳಿಯ ಬೆಳೆಬಂದಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಒಂದು ವಾರದಲ್ಲಿ ವರದಿಯನ್ನು ಸಲ್ಲಿಸಲಾಗುವುದು. ರೈತನಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಏಲಕ್ಕಿ ಬದಲಾಗಿ ಸುಗಂದಿ, ಷೋವಂ ಸೇಲಂ ತಳಿ:
ವಿಜ್ಞಾನಿ ಡಾ.ರಾಜೇಂದ್ರ ಮಾತನಾಡಿ ತೋಟದಲ್ಲಿ ಏಲಕ್ಕಿ ಬದಲಾಗಿ ಸುಗಂದಿ ಸೋವಂ,, ಸೇಲಂ ತಳಿಗಳನ್ನು ಹೋಲುವ ಬಾಳೆಗೊನೆಗಳು ಬಿಟ್ಟಿರುವುದು ಕಂಡುಬoದಿದೆ. ಇವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ ನಂತರವೇ ಸ್ಪಷ್ಟವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಬಾಳೆ ಗಿಡದ ಕಾಂಡ, ಎಲೆ, ಕಾಯಿ ಮತ್ತು ಹಣ್ಣನ್ನು
ಸಂಗ್ರಹಿಸಿದ್ದು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದರು.
ವಂಚನೆಯಾಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ:
ನಾನು ಬಾಳೆ ಗಿಡಗಳನ್ನು ಬಿತ್ತನೆ ಮಾಡಲು ಕಂಕರೆ ಫಾರಂನಿoದ ಗಿಡಗಳನ್ನು ಏಲಕ್ಕಿ ಗಿಡಗಳೆಂದೇ ರಸೀದಿಯನ್ನು ನೀಡಿದ್ದಾರೆ. ಆದರೆ ನಾನು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಒಂದುವರ್ಷದ ನಂತರ ಬೆಳೆ ಕೈಸೇರುವ ಸಂದರ್ಭದಲ್ಲಿ ಮೋಸವಾಗಿರುವುದು ಗೋಚರವಾಗಿದೆ. ನನಗೆ ಲಕ್ಷಾಂತರ ರೂಪಾಯಿಗಳ ನಷ್ಟವಾಗಿದ್ದು ಬಿತ್ತನೆಗೆ ಗಿಡಗಳನ್ನು ನೀಡಿರುವ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು ಹಾಗು ನಷ್ಟಪರಿಹಾರವನ್ನು ನೀಡಬೇಕು ಎಂದು ರೈತ ರಾಮಲಿಂಗಾರೆಡ್ಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಿ.ರಘುನಾಥರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: