April 27, 2024

Bhavana Tv

Its Your Channel

ಜನರ ಆಶೀರ್ವಾದ ಇದ್ದರೆ ಮತ್ತೊಮ್ಮೆ ಶಾಸಕನಾಗುವೆ: ಮಾಜಿ ಶಾಸಕ ಎನ್.ಸಂಪOಗಿ

ಬಾಗೇಪಲ್ಲಿ: ನಾನು ಅಧಿಕಾರದಲ್ಲಿದ್ದಾಗ ಸಾಧ್ಯವಾದಷ್ಟು ಜನಸೇವೆ ಮಾಡಿ ಕಪ್ಪು ಚುಕ್ಕೆ ಇಲ್ಲದ ನಾಯಕನಾಗಿ ಆಡಳಿತ ನಡೆಸಿದ್ದೇನೆ ಹೊರತು ವ್ಯಾಪಕ ಭ್ರಷ್ಟಾಚಾರ ನಡೆಸಿ ಜನರ ಹಣ ಲೂಟಿ ಮಾಡುವ ರಾಜಕಾರಣಿ ನಾನಲ್ಲ ಎಂದು ಮಾಜಿ ಶಾಸಕ ಎನ್.ಸಂಪAಗಿ ಹಾಲಿ ಕಾಂಗ್ರೆಸ್ ಶಾಸಕರು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಬಾಗೇಪಲ್ಲಿ ಪಟ್ಟಣದ ಹೊರವಲಯದ ಪರಗೋಡು ಚಿತ್ರಾವತಿ ಅಣೆಕಟ್ಟು ಬಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರದ ಜನರು ಎರಡು ಬಾರಿ ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಆಶೀರ್ವಾದ ಮಾಡಿದಾಗ ಜನರ ಹಣ ಲೂಟಿ ಮಾಡುವ ಕೆಲಸಕ್ಕೆ ನಾನು ಎಂದು ಕೈ ಹಾಕಿಲ್ಲ, ನನಗೆ ಅಧಿಕಾರದ ಅವಕಾಶ ಸಿಕ್ಕಂತಹ ಸಮಯದಲ್ಲಿ ಸರ್ಕಾರಿ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಸಿಲ್ಲ, ರೀಯಲ್ ಎಸ್ಟೇಟ್ ಮಾಡಿಲ್ಲ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಶಾಸಕನಾಗಿ ಜನರ ಸೇವೆ ಮಾಡಿದ್ದೇನೆ. ಜನರ ಆಶೀರ್ವಾದ ಇದ್ದರೆ ಮತ್ತೆ ಶಾಸಕನಾಗುತ್ತೇನೆ. ನನ್ನ ಶಾಸಕ ಅವಧಿಯಲ್ಲಿ ಒಳಚರಂಡಿ ಕಾಮಗಾರಿಗೆ ೧೮ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ, ಪರಗೋಡು ಬಳಿ ಅಣೆಕಟ್ಟು ನಿರ್ಮಿಸಿ ಶುದ್ದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದೇನೆ, ನಾನು ಸೋತ ನಂತರ ಪಟ್ಟಣಕ್ಕೆ ಶುದ್ದ ನೀರು ನೀಡಿಲ್ಲ, ಒಳ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ ಕನಿಷ್ಠ ಒಂದು ಯೋಜನೆಯು ಅನುಷ್ಠಾನಗೊಂಡಿಲ್ಲ. ೧೮ ಕೋಟಿ ರೂಗಳ ಅನುದಾನ ಯಾರ ಜೇಬು ಸೇರಿದೆ ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿ, ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಖಾಂತರ ಬಹಿರಂಗಗೊಳಿಸುತ್ತೇನೆ ಎಂದು ಆಢಳಿತ ಯಂತ್ರಾAಗವನ್ನು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರ ಇದ್ದಂತೆ ಕಾಂಗ್ರೆಸ್‌ನ ಕೆಲ ನಾಯಕರನ್ನು ನಾವು ದೇವರು ಅಂತ ನಂಬಿರುತ್ತೇವೆ, ನಮ್ಮ ಪಾಲಿನ ದೇವರು ಎಂದು ನಂಬಿರುವAತಹ ಪಕ್ಷದ ನಾಯಕರುಗಳು ದೆವ್ವಗಳಾಗಿ ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರ ಕತ್ತು ಹಿಸುಕುವಂತಹ ಕೆಲಸ ಮಾಡಿದಾಗ ಪ್ರಾಮಾಣಿಕ ಕಾಂಗ್ರೆಸ್ಸಿಗರಿಗೆ ಅನ್ಯಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಅದರ ಫಲಿತಾಂಶವನ್ನು ಕ್ಷೇತ್ರದ ಜನರು ನೋಡಲಿದ್ದಾರೆ ಎಂದರು.
ಜೈಕಾರ ಹಾಕಬೇಡಿ ಎಂದ ಮಾಜಿ ಶಾಸಕ: ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಂಪAಗಿ ಮಹಾರಾಜ್‌ಕೀ ಜೈ, ಕಾಂಗ್ರೆಸ್ ಪಕ್ಷದ ಮುಂದಿನ ಎಂಎಲ್‌ಎ ಎನ್.ಸಂಪAಗಿ ಎಂದು ಜೈಕಾರಗಳು ಕೂಗುತ್ತಿದ್ದಂತೆ ಸ್ಥಳದಲ್ಲೆ ಇದ್ದ ಮಾಜಿ ಶಾಸಕ ಸಂಪAಗಿ ಕಾರ್ಯಕರ್ತರ ಬಾಯಿ ಮುಚ್ಚಿಸಿ ಸಮಾಧಾನಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು, ಪುರಸಭೆ ಸದಸ್ಯರಾದ ಬಿ.ಎ.ನರಸಿಂಹಮೂರ್ತಿ, ಸುಜಾತನಾಯ್ಡು, ಗ್ರಾ.ಪಂ. ಅಧ್ಯಕ್ಷ ಎಂ.ಬಿ.ನರಸಿAಹಯ್ಯ, ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ಮಿಸ್ಟ್ವಾಟರ್ ನರಸಿಂಹಪ್ಪ, ನಾರಾಯಣಪ್ಪ, ಬೋರ್‌ವೆಲ್ ಶಿವ, ರಾಮಚಂದ್ರ, ಚೇಳೂರು ಸುಬ್ರಮಣಿ ಮತ್ತಿತರರು ಇದ್ದರು.

ವರದಿ:ಗೋಪಾಲ ರೆಡ್ಡಿ ಬಾಗೇಪಲ್ಲಿ

error: