May 4, 2024

Bhavana Tv

Its Your Channel

ಪ್ರತಿಯೊಬ್ಬರೂ ಕನ್ನಡ ಭಾಷೆ ಉಳಿಸಿ, ಬೆಳೆಸಿ: ಶಾಸಕ ಎಸ್. ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:- ನಮ್ಮ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಆಚಾರ-ವಿಚಾರಗಳನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸುವ ಕರ‍್ಯದಲ್ಲಿ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಿದ್ದು, ಅದನ್ನು ಅರಿತು ಕರ‍್ಯನರ‍್ವಹಿಸುವ ಅವಶ್ಯಕತೆಯಿದೆ ಎಂದು ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಕರೆ ನೀಡಿದರು.
ಪಟ್ಟಣದ ರ‍್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ೬೬ ನೇ ಕನ್ನಡ ರಾಜ್ಯೋತ್ಸವ ಮೊದಲಿಗೆ ತಾಯಿ
ಭುವನೇಶ್ವರಿ ದೇವಿಗೆ ಪುಷ್ಪರ‍್ಚನೆ ಮಾಡಿ ತದನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇಂದಿನ ಮಕ್ಕಳಿಗೆ ಕನ್ನಡದ ಮಹತ್ವವನ್ನು ಪ್ರಾಥಮಿಕ ಶಿಕ್ಷಣದಿಂದಲೇ ತಿಳಿಸುವುದರಿಂದ ಭಾಷಾ ಉಜ್ವಲತೆಗೆ ಸಹಕಾರಿಯಾಗಲಿದೆ. ೨ ಸಾವಿರ ರ‍್ಷಗಳಷ್ಟು ಭವ್ಯವಾದ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಶ್ರೀಮಂತ ಹಾಗೂ ಸಮೃದ್ಧವಾಗಿತ್ತು.

ಈ ಭಾಷೆಯ ಮೂಲಕವೇ ಪ್ರತಿಯೊಬ್ಬರು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆವಿಗೂ ಅಭ್ಯಾಸವನ್ನು ಮಾಡಿ ಜ್ಞಾನ ಸಂಪನ್ನರಾಗುತ್ತಿದ್ದರು ಎಂದರು. ಶಿಕ್ಷಣ ವ್ಯವಸ್ಥೆ ಬದಲಾದಂತೆ ವೈಜ್ಞಾನಿಕತೆ, ವೈಚಾರಿಕತೆ, ನಾಗರಿಕತೆ ಹೆಚ್ಚಾದಂತೆ ಉದ್ಯೋಗ ಆಧಾರಿತವಾದ ಅಂಗ್ಲ ಭಾಷಾ ವ್ಯಮೋಹದ ದಟ್ಟ ಪ್ರಭಾವದಲ್ಲಿ ಕನ್ನಡ ಭಾಷೆ ಮಂಕಾಗುತ್ತಾ ಬಂತು. ಅದರಲ್ಲಿಯೂ ಜಾಗತೀಕರಣ, ಕೈಗಾರಿಕಿಕರಣ, ಉದಾರಿಕರಣ, ಸಂಸ್ಕoತಿಕರಣ, ವಾಣಿಜ್ಯೀಕರಣ, ಕಂಪ್ಯೂಟರೀಕರಣಗಳಲ್ಲಿ ಪ್ರವಾಹದಿಂದ ಕನ್ನಡ ಕಲಿಕೆಗೆ ಮತ್ತಷ್ಟು ಪೆಟ್ಟು ಬಿದ್ದಿದೆ ಎಂದು ವಿಷಾದಿಸಿದರು.

ಕನ್ನಡಿಗರಿಗೆ ಕೇವಲ ನವಂಬರ್ ತಿಂಗಳಲ್ಲಿ ಭಾಷೆ, ನಾಡು, ನುಡಿಯ ಬಗ್ಗೆ ಅಭಿಮಾನ ಮೂಡದೇ ಪ್ರತಿದಿನವೂ ಕನ್ನಡವನ್ನು ಪ್ರೀತಿಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕಿದೆ. ಇತರ ಭಾಷಿಕರಿಗೆ ಹೋಲಿಸಿದರೆ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲಿನ ಅಭಿಮಾನ ಕಡಿಮೆ. ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಗಳು ಲಭಿಸಿದ್ದು, ಕನ್ನಡ ಸಾಹಿತ್ಯಲೋಕ ಸಮೃದ್ಧವಾಗಿದೆ. ಕನ್ನಡದ ಭಾಷೆ, ನೆಲಕ್ಕೆ ಹೊರ ರಾಜ್ಯದ ಜನರ ಪ್ರಭಾವ, ಕನ್ನಡ ಭಾಷೆಗೆ ಇತರ ಭಾಷೆಯಿಂದ ದಾಳಿ ಮುಂದುವರೆದಿದ್ದು ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದರು.
ಮುಂದಿನ ರಾಜ್ಯೋತ್ಸವ ಒಳಗೆ ತಾಲ್ಲೂಕಿನಲ್ಲಿ ಕನ್ನಡ ಭವನ ಹಾಗೂ ಭಾಗ್ಯನಗರ ನಾಮಕರಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಇದೇ ಸಂರ‍್ಭದಲ್ಲಿ ಹೃದಯಾಘಾತದಿಂದ ನಿಧನ ಹೊಂದಿನ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು.

ಬಾಗೇಪಲ್ಲಿ ತಾಲ್ಲೂಕು ತಹಶಿಲ್ದಾರ್ ಮಾತನಾಡಿ ಕನ್ನಡ ನಮ್ಮ ಸಂಸ್ಕೃತಿ. ಕನ್ನಡವನ್ನು ಉಳಿಸಿ ಬೆಳೆಸಲು ದೊಡ್ಡ ಪ್ರಮಾಣದ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ಮನೆ ಮನೆಗಳಲ್ಲಿ ಹಾಗೂ ಮನ ಮನಗಳಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡ ವಾತಾವರಣ ನರ‍್ಮಾಣ ಆಗಬೇಕಿದೆ.

ಇದೇ ಸಂರ‍್ಭದಲ್ಲಿ ಶಿಕ್ಷಣ, ಸಾಹಿತ್ಯ, ನೃತ್ಯ, ಕ್ರೀಡೆ, ಸಮಾಜಸೇವೆ, ಜಾನಪದ, ಆರೋಗ್ಯ ಸೇರಿದಂತೆ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೮ ಸಾಧಕರಿಗೆ ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂರ‍್ಭದಲ್ಲಿ ಚಿಕ್ಕಬಳ್ಳಾಪುರ ಇಓ ಎಂ ಶಿವಕುಮಾರ್, ಕರ‍್ಯನರ‍್ವಾಹಣಾಧಿಕಾರಿ ಮಂಜುನಾಥ ಸ್ವಾಮಿ, ಬಿಇಓ ಎಸ್ ಸಿದ್ದಪ್ಪ, ಆರಕ್ಷಕ ವೃತ್ತ ನಿರೀಕ್ಷ ಡಿ.ಆರ್.ನಾಗರಾಜು, ಪುರಸಭೆ ಮುಖ್ಯಾಧಿಕಾರಿ ಮಧುಕರ್ ಕೆ.ಡಾ.ಸತ್ಯನಾರಾಯಣ ರೆಡ್ಡಿ, ಪ್ರಭಾವತಿ, ಆರ್.ಹನುಮಂತ ರೆಡ್ಡಿ ನಾರಾಯಣಪ್ಪ, ಬಾಲರಾಜು,ಎ.ನಂಜುಂಡಪ್ಪ, ಪಿ.ವಿ.ವೆಂಕಟರವಣ,ಸಿ.ವೆಂಕಟರಾಯಪ್ಪ, ಶ್ರೀನಿವಾಸ್ ,ಕೆ.ಎನ್.ಹರೀಶ್, ಬಿ.ಟಿ.ಶ್ರೀನಿವಾಸ್, ಬಾಬಾ ಜಾನ್, ರವೀಂದ್ರ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: