May 4, 2024

Bhavana Tv

Its Your Channel

ಗ್ರಾಮೀಣ ಪ್ರತಿಭೆ ಬಿ.ವಿ.ಲಕ್ಷ್ಮಣರೆಡ್ಡಿ ನೀಟ್ ಫಲಿತಾಂಶದಲ್ಲಿ ೬೫ನೇ ರ‍್ಯಾಂಕ್

ಬಾಗೇಪಲ್ಲಿ : ತಾಲೂಕು ಯಲ್ಲಂಪಲ್ಲಿ ಗ್ರಾಮ ಪಂಚಾಯತಿಯ ಲಕ್ಷ್ಮೀನಾರಾಯಣಪುರ ಗ್ರಾಮದ ಬಿ.ವಿ.ಸುಬ್ಬಾರೆಡ್ಡಿ ಮತ್ತು ರಾಧ ಎಂಬ ರೈತ ದಂಪತಿಗಳ ಮಗನಾಗಿ ಜನಿಸಿರುವ ಬಿ.ವಿ.ಲಕ್ಷ್ಮಣರೆಡ್ಡಿ ೧ ರಿಂದ ೧೦ ನೇ ತರಗತಿವರೆಗೂ ಗ್ರಾಮೀಣ ಪ್ರದೇಶದ ಪುಟ್ಟ ಶಾಲೆಯಲ್ಲಿ ಕಲಿಕೆ ಕಲಿತು ೨೦೨೧ರ ನೀಟ್ ಫಲಿತಾಂಶದಲ್ಲಿ ೬೯೫ ಅಂಕಗಳನ್ನು ಪಡೆದು ಒಬಿಸಿ ವಿಭಾಗದ ಅಲ್ ಇಂಡಿಯಾ ೬೫ ನೇ ರ‍್ಯಾಂಕ್ ಗಳಿಸಿ ಬಾಗೇಪಲ್ಲಿ ತಾಲೂಕಿನ ಹೊಸ ಮೈಲುಗಲ್ಲು ಖ್ಯಾತಿಗೆ ಬಾಜನರಾಗಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ಪುಟ್ಟ ಹಳ್ಳಿಯಲ್ಲಿ ಜನಿಸಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ಲಕ್ಷ್ಮಣರೆಡ್ಡಿ ೧ ರಿಂದ ೫ ನೇ ತರಗತಿವರೆಗೆ ತೀಮಾಕಲಹಳ್ಳಿಯ ಪ್ರಗತಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅದರ್ಶ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಅದರ್ಶ ಶಾಲೆಯಲ್ಲಿ ಸೀಟು ಗಿಟ್ಟಿಸಿಕೊಂಡು ೬ ರಿಂದ ೧೦ ನೇ ತರಗತಿವರೆಗೂ ಸರ್ಕಾರದ ಉಚಿತ ಶಿಕ್ಷಣವನ್ನು ಪಡೆದುಕೊಂಡಿದ್ದಾನೆ. ಕಾಲೇಜು ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡು ೨೦೨೧ ನೇ ಸಾಲಿನ ನೀಟ್ ಪರೀಕ್ಷೆ ಬರೆದಿದ್ದಾರೆ.

೭೨೦ ಅಂಕಗಳ ನೀಟ್ ಪರೀಕ್ಷೆಯಲ್ಲಿ ೬೯೫ ಅಂಕಗಳನ್ನು ಪಡೆದುಕೊಂಡು ಬಾಗೇಪಲ್ಲಿ ತಾಲೂಕಿನ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ಒಬಿಸಿ ವಿಭಾದಲ್ಲಿ ಅಲ್ ಇಂಡಿಯಾ ೬೫ ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ.
ವ್ಯವಸಾಯ ಮಾಡಿಕೊಂಡು ಹಳ್ಳಿಯ ಜೀವನ ನಡೆಸುತ್ತಿರುವ ನಮ್ಮ ತಂದೆ ತಾಯಿರವರ ಸಹಕಾರದಿಂದ ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡಿದ್ದು, ನೀಟ್‌ನಲ್ಲಿ ಹೆಚ್ಚು ಅಂಕಗಳಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಎಂಬಿಬಿಎಸ್ ಕೋರ್ಸ್ ಮಾಡಿ ವೈಧ್ಯನಾಗಬೇಕೆಂದು ಬಯಸುತ್ತಿದ್ದೇನೆ.

ವರದಿ:ಗೋಪಾಲರೆಡ್ಡಿ ಬಾಗೇಪಲ್ಲಿ

error: