May 2, 2024

Bhavana Tv

Its Your Channel

ಗುಡಿಬಂಡೆ ಪ.ಪಂ.ನಲ್ಲಿ ಆಪರೇಷನ್ ಕಮಲ ವಿರೋಧಿಸಿ, ಬಾಗೇಪಲ್ಲಿಯಲ್ಲಿ ಪ್ರತಿಭಟನಾ ಸಭೆ.

ಬಾಗೇಪಲ್ಲಿ : ಗುಡಿಬಂಡೆ ಪ.ಪಂ ಯಲ್ಲಿ ಆಪರೇಷನ್ ಕಮಲ ಘಟನೆ ಖಂಡಿಸಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಪೂರ್ವಬಾವಿ ಕಾರ್ಯಕರ್ತರ ಸಮಾವೇಶವನ್ನು ಬಾಗೇಪಲ್ಲಿಪಟ್ಟಣದ ಶಾಂತಿನಿಕೇತನ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸೇರಿದಂತೆ ಮುಖಂಡರಾದ ಎಚ್.ಎಸ್.ನರೇಂದ್ರ, ಬಿ.ವಿ. ವೆಂಕಟರವಣ,
ಮAಜುನಾಥರೆಡ್ಡಿ, ನರಸಿಂಹಪ್ಪ, ಆದಿರೆಡ್ಡಿ ಮತ್ತಿತರೆ ಮುಖಂಡರು ಒಕ್ಕುರಲ ದ್ವನಿಯಾಗಿ ಮಾತನಾಡಿ, ಬಿಜೆಪಿ ಪಕ್ಷ ಪ್ರಜಾಪ್ರಭುತ್ವದ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ, ಪಟ್ಟಣ ಪಂಚಾಯತ್? ಚುನಾವಣೆ ವೇಳೆ ವಾಮ ಮಾರ್ಗದಲ್ಲಿ ಬಿಜೆಪಿ ನಡೆದುಕೊಂಡಿದ್ದು, ಪ್ರಜಾಪ್ರಭುತ್ವ ಕಗ್ಗೊಲೆ ಎಂದ ಅವರು, ಎಸ್.ಎನ್. ಸುಬ್ಬಾರೆಡ್ಡಿಗೆ ಅಗೌರವ ತೋರಲಾಗಿದೆ, ಚಿಕ್ಕಬಳ್ಳಾಪುರ ಸಿಪಿಐ ಪ್ರಶಾಂತ್? ಅಮಾನತುಗೊಳಿಸಲು ಆಗ್ರಹ ವ್ಯಕ್ತ ಪಡಿಸಿದರು.

ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸಿದ್ದು ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಸಚಿವ ಡಾ.ಕೆ.ಸುಧಾಕರ ಸೂಚನೆ ಮೇರೆಗೆ ಆಪರೇಷನ್ ಕಮಲ ನಡೆದಿದ್ದು ಈ ಸಂಬAದ ಕಾಂಗ್ರೆಸ್ ಹಿರಿಯರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ನಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದು ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ತದನಂತರ ಡಿವೈಎಸ್ಪಿ ವಾಸುದೇವ್ ಹಾಗೂ ಎಸ್.ಪಿ. ಮಿಥುನ್ ಕುಮಾರ್ ಸ್ಥಳಕ್ಕೆ ಆಗಮಿಸಿ, ಗುಡಿಬಂಡೆಯಲ್ಲಿ ನಡೆದ ಘಟನೆ ವಿಡಿಯೋಗಳನ್ನು ತರಿಸಿ ವೀಕ್ಷಣೆ ಮಾಡಿ ತದನಂತರ ತಪ್ಪಿದರೆ ಅವರ ಬಗ್ಗೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಅನಂತರ ಪೂರ್ವಬಾವಿ ಸಭೆಯನ್ನು ಮುಕ್ತಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಂಜುನಾಥ ರೆಡ್ಡಿ,
ಬಿ.ವಿ.ವೆಂಕಟರಮಣ, ಹೆಚ್.ಎಸ್. ನರೇಂದ್ರ, ಲಕ್ಷ್ಮೀ ನರಸಿಂಹಪ್ಪ ,ನರೇಂದ್ರ ಬಾಬು, ಅಮರನಾಥ ರೆಡ್ಡಿ, ಜಬೀವುಲ್ಲಾ, ನರಸಿಂಹಾರೆಡ್ಡಿ,ಹಾಗೂ ಗುಡಿಬಂಡೆ ಆದಿರೆಡ್ಡಿ ಬಾಗೇಪಲ್ಲಿ ,ಚೇಳೂರು, ಹಾಗೂ ಗುಡಿಬಂಡೆ ತಾಲ್ಲೂಕಿನ ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು.

ವರದಿ:ಗೋಪಾಲ ರೆಡ್ಡಿ ಬಾಗೇಪಲ್ಲಿ

error: