May 4, 2024

Bhavana Tv

Its Your Channel

ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಶ್ವತ ಕಲ್ಯಾಣ ನಿಧಿ ಸ್ಥಾಪನೆ

ಬಾಗೇಪಲ್ಲಿ:- ಸರ್ಕಾರಿ ಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಬಾರದೆಂದು ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಕ್ಲಸ್ಟರ್ ನ ಶಿಕ್ಷಣ ಸಂಯೋಜಕ ಡಾ.ಶಿವಪ್ಪ , ಶಿಕ್ಷಕ ಶಿಕ್ಷಕಿಯರು ಹಾಗೂ ಹಳೇ ವಿದ್ಯಾರ್ಥಿಗಳಿಂದ ದೇಣಿಗೆ ಹಾಕಿಕೊಂಡು ಮಕ್ಕಳ ಶಾಶ್ವತ ಕಲ್ಯಾಣ ನಿಧಿ ಮಾಡಿರುವುದು ಶಿಕ್ಷಣ ಇಲಾಖೆ ಗೌರವ ಘನತೆಯನ್ನು ಹೆಚ್ಚಿಸಿ ,ಇಡೀ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾದರಿಯಾಗಿದ್ದಾರೆ. ಇದೇ ರೀತಿ ೨೨ ಕ್ಲಸ್ಟರ್ ಇದನ್ನು ಮಾದರಿಯನ್ನಾಗಿ ಸ್ವೀಕರಿಸಿ ಮಕ್ಕಳ ಶಾಶ್ವತ ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದು ಹೇಳಿದರು.

ಮಿಟ್ಟೇಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಲಕ್ಷ್ಮೀ ನರಸಿಂಹಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ
ಶಿಕ್ಷಕ-ಶಿಕ್ಷಕಿಯರು ಪಠ್ಯ ವಿಷಯಗಳ ಬೋಧನೆಯ ಜೊತೆಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ, ಶಾಲಾಗಳ ಅಭಿವೃದ್ಧಿಗೆ ದೇಣಿಗೆ ನೀಡಿ ಶಾಶ್ವತ ಕಲ್ಯಾಣ ನಿಧಿ ಪರಿಹಾರ ಮಾಡಿರುವ ಮಿಟ್ಟೇಮರಿ ಕ್ಲಸ್ಟರ್ ನ ಎಲ್ಲಾ ಶಾಲಾ ಶಿಕ್ಷಕ-ಶಿಕ್ಷಕಿಯರ ಜನಪರ ಸೇವೆ ಮಾದರಿ ಆಗಿದೆ ಎಂದು ಹೇಳಿದರು

ಚಿಕ್ಕಬಳ್ಳಾಪುರದ ಬಿಇಡಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಶAಕರ್ ಮಾತನಾಡಿ, ಬಾಲ್ಯಾವ್ಯಸ್ಥೆಯಲ್ಲಿನ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಠ್ಯದ ಜೊತೆ ಸಮಾಜದಲ್ಲಿನ ಆಗು-ಹೋಗುಗಳ ಬಗ್ಗೆ, ಆಧುನಿಕ ತಂತ್ರಜ್ಞಾನ, ವಿಷಯಾಧಾರಿತ ಶಿಕ್ಷಣ ನೀಡಬೇಕಾಗಿದೆ. ವಿಷಯಗಳನ್ನು ಗ್ರಹಿಸುವ ಶಕ್ತಿ ಬಾಲ್ಯಾವ್ಯಸ್ಥೆಯಲ್ಲಿ ಇರುತ್ತದೆ. ಇದರಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಕ-ಶಿಕ್ಷಕಿಯರು ಗುಣಾತ್ಮಕ, ಪರಿಣಾಮಾತ್ಮಕ ಶಿಕ್ಷಣ ನೀಡಬೇಕಾಗಿದೆ. ಶಿಕ್ಷಕ-ಶಿಕ್ಷಕಿಯರು ಶಿಕ್ಷಣ ಪದವಿಗಳಿಗೆ ಮಾತ್ರ ಸೀಮಿತ ಬೇಡ. ಉನ್ನತ ಶಿಕ್ಷಣ, ಅಧ್ಯಯನ ಕೇಂದ್ರಗಳಲ್ಲಿ ಪಿಎಚ್ ಡಿ ಗಳನ್ನು ಮಾಡಬೇಕಾಗಿದೆ. ಶಿಕ್ಷಕ-ಶಿಕ್ಷಕಿಯರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ವಿನಯ, ಸಂಸ್ಕೃತಿ ಕಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲದ ತಾಲ್ಲೂಕು ಸಮನ್ವಾಧಿಕಾರಿ ಆರ್.ವೆಂಕಟರಾಮಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನರಸಿಂಹರೆಡ್ಡಿ, ಮಿಟ್ಟೇಮರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಶಿಕ್ಷಣ ಸಂಯೋಜಕರಾದ ಕೆ.ವಿ.ರಾಜಣ್ಣ, ಮಂಜುನಾಥ್, ಪದ್ಮಶ್ರೀ, ಮಂಜುಳ, ಕದಿರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರವಣಪ್ಪ, ಕಾರ್ಯದರ್ಶಿ ವೆಂಕಟರಾಯಪ್ಪ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುಧಾಕರ್, ಮಿಟ್ಟೇಮರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ವಿ.ಭಾಗ್ಯಮ್ಮ ಎಸ್ ಡಿಎಂಸಿ ಅಧ್ಯಕ್ಷೆ ಗೀತಾ ಸೇರಿದಂತೆ ಶಾಲಾ ಶಿಕ್ಷಕ-ಶಿಕ್ಷಕಿಯರು ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: