May 4, 2024

Bhavana Tv

Its Your Channel

ಕೆಪಿಟಿಸಿಎಲ್‌ನಿಂದ ರೈತರಿಗೆ ನೀಡಬೇಕಾಗಿರುವ ಪರಿಹಾರದ ಬಾಕಿ ಹಣ ಪಾವತಿಗೆ ಆಗ್ರಹ

ಬಾಗೇಪಲ್ಲಿ: ತಾಲ್ಲೂಕಿನ ಮಿಟ್ಟೇಮರಿ ಹೋಬಳಿ ವ್ಯಾಪ್ತಿಯ ವಿದ್ಯುತ್ ಪ್ರಸರಣ ಸ್ವೀಕರಣ ಕೇಂದ್ರದಿAದ ಗ್ರಾಮೀಣ ಪ್ರದೇಶಗಳಿಗೆ ೨೨೦ ಕೆ .ವಿ ಸ್ವೀಕರಣ ಕೇಂದ್ರದಿAದ ವಿದ್ಯುತ್ ಸರಬರಾಜು ಮಾಡಲು ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಿರುವ ಪರಿಹಾರ ಹಣವನ್ನು ರೈತರಿಗೆ ವಿತರಣೆ ಮಾಡಿಲ್ಲ ಎಂದು ಆರೋಪಿಸಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಶುಕ್ರವಾರ ಮಿಟ್ಟೇಮರಿ ವಿದ್ಯುತ್ ಸ್ವೀಕರಣ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿದರು

ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘ ತಾಲ್ಲೂಕು ಕಾರ್ಯದರ್ಶಿ ಮಂಜುನಾಥರೆಡ್ಡಿ ಮಾತನಾಡಿ, ಮಿಟ್ಟೇಮರಿ ವಿದ್ಯುತ್ ಸಬ್ ಸ್ಟೇಷನ್‌ನಿಂದ ಜೂಲಪಾಳ್ಯ ಪಾತಪಾಳ್ಯ ಹಾಗೂ ಬಾಗೇಪಲ್ಲಿ ಕಡೆಗೆ ವಿದ್ಯುತ್ ಕಂಬಗಳನ್ನು ರೈತರ ಹೊಲದಲ್ಲಿ ಹಾಕಿದ್ದು ಎರಡೂ ವರ್ಷಗಳು ಕಳೆದರೂ ರೈತರಿಗೆ ಪರಿಹಾರ ಧನ ವಿತರಣೆ ಮಾಡದೇ ವಿಳಂಬ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ರೈತರು ಮೀಟರ್ ಅಳವಡಿಕೆಯಲ್ಲಿ ಒಂದು ದಿನ ಬಿಲ್ ಪಾವತಿ ಮಾಡಿದರೆ, ಲೈನ್‌ಮೆನ್‌ಗಳು ವಿದ್ಯುತ್ ಕಡಿತ ಮಾಡುತ್ತಾರೆ. ಆದರೆ ವರ್ಷಾನುಗಟ್ಟಲೇ ರೈತರಿಗೆ ಪರಿಹಾರ ಹಣ ನೀಡದ ವಿದ್ಯುತ್ ಪ್ರಸರಣ ನಿಗಮದಿಂದ ಪರಿಹಾರ ನೀಡಿಲ್ಲ. ವಿದ್ಯುತ್ ಕಂಬಗಳನ್ನು ರೈತರ ಹೊಲದಲ್ಲಿ ಹಾಕುವ ಮುನ್ನವೇ ರೈತರಿಗೆ ಪರಿಹಾರ ಧನ ನೀಡಬೇಕಿತ್ತು. ಆದರೆ ೨ ವರ್ಷಗಳು ಕಳೆದರೂ, ರೈತರಿಗೆ ಪರಿಹಾರ ಹಣ ನೀಡಿಲ್ಲ. ಕೂಡಲೇ ರೈತರಿಗೆ ಪರಿಹಾರ ಧನ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ವಿದ್ಯುತ್ ಪ್ರಸರಣದ ಅಧಿಕಾರಿ ಕರೆ ಮಾಡಿ, ನವೆಂಬರ್ ೬ರಂದು ರೈತ ಮುಖಂಡರ ಸಭೆ ಯನ್ನು ಕರೆದು ಸಭೆಯಲ್ಲಿ ರೈತರಿಂದ ಮಾಹಿತಿ ಸಂಗ್ರಹಿಸಿ, ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀರಾಮನಾಯಕ್, ಮುಖಂಡರಾದ ಪ್ರಭಾಕರರೆಡ್ಡಿ, ಬಿ.ಶ್ರೀನಿವಾಸ್, ನಾರಾಯಣಸ್ವಾಮಿ, ಅಶ್ವತರೆಡ್ಡಿ, ವೆಂಕಟರೆಡ್ಡಿ, ಮದ್ದಿರೆಡ್ಡಿ, ಕೃಷ್ಣಮೂರ್ತಿ, ಗಂಗರಾಜಪ್ಪ, ಸಿ.ಎಂ.ಮAಜುನಾಥ, ಆರ್.ಶ್ರೀನಿವಾಸಲು, ಜಿ.ಎಂ.ವೆoಕಟರೆಡ್ಡಿ, ನಂದಗಿರಿಚಾರಿ, ಎಂ.ಆರ್.ಬಾಲಕೃಷ್ಣಪ್ಪ, ಪಿ.ಜಿ.ಕೃಷ್ಣಪ್ಪ, ಸಿ.ಪಿ.ಶ್ರೀನಿವಾಸ ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: