May 4, 2024

Bhavana Tv

Its Your Channel

ಅಕ್ರಮಗಳಿಗೆ ಸಂಪೂರ್ಣ ಕಡಿವಾಣವೆಂದು? ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಜಪ್ತಿ

ಬಾಗೇಪಲ್ಲಿ ತಾಲೂಕಿನ ಪಾತಬಾಗೇಪಲ್ಲಿ ಗ್ರಾಮದಲ್ಲಿ ಅಕ್ರಮ ದಾಸ್ತಾನು ಮಾಡಲಾಗಿದ್ದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ೧.೫೦ ಲಕ್ಷ ರೂ ಮೌಲ್ಯದ ಪಡಿತರ ಪದಾರ್ಥಗಳನ್ನು ಇಲಾಖೆ ಉಪ ನಿರ್ದೇಶಕಿ ಸವಿತಾ ಜಪ್ತು ಮಾಡಿ ನ್ಯಾಯಬೆಲೆ ಅಂಗಡಿ ಮಾಲೀಕ ರಾಜಗೋಪಾಲರೆಡ್ಡಿ ವಿರುದ್ದ ಪ್ರಕರಣ ದಾಖಲಿಸಿ ಪರವಾನಗಿ ಅಮಾನತ್ತುಗೆ ಶಿಪಾರಸ್ಸು ಮಾಡಿರುವ ಘಟನೆ ನಡೆದಿದೆ.

ತಾಲೂಕಿನ ಪಾತಬಾಗೇಪಲ್ಲಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ನೂರಾರು ಬಡಕುಟುಂಬಗಳಿಗೆ ಹಂಚಿಕೆ ಮಾಡುವ ಉದ್ದೇಶಕ್ಕಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯವತಿಯಿಂದ ಪಡಿತರ ಪದಾರ್ಥಗಳನ್ನು ಸರಬರಾಜು ಮಾಡಲಾಗಿದೆ. ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಪಡಿತರ ಪದಾರ್ಥಗಳನ್ನು ಪಡೆದುಕೊಳ್ಳಲು ಯಾವ ನಾಗರೀಕರು ಸಹ ಹಿಂದೇಟು ಹಾಕುವುದಿಲ್ಲ. ಪಾತಬಾಗೇಪಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕ ರಾಜಗೋಪಾಲರೆಡ್ಡಿ ಎಂಬವರು ಪ್ರತಿ ತಿಂಗಳು ಎಲ್ಲಾ ರೀತಿಯ ಕಾರ್ಡ್ದಾರರಿಗೆ ಪಡಿತರ ವಿತರಿಸಲಾಗಿದೆ ಎಂದು ಆಹಾರ ಇಲಾಖೆಗೆ ಲೆಕ್ಕ ಕೊಟ್ಟಿರುತ್ತಾರೆ. ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ಎಲ್ಲಾ ಕಾರ್ಡ್ದಾರರ ಪಡಿತರ ಪದಾರ್ಥಗಳನ್ನು ಆಹಾರ ಇಲಾಖೆಯಿಂದ ಪ್ರತಿ ತಿಂಗಳು ಎತ್ತುವಳಿ ಮಾಡಿಕೊಂಡು ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ವಿತರಿಸದೆ ಅಕ್ರಮ ವ್ಯಸಗಿ ಉಳಿದಂತಹ ಲಕ್ಷಾಂತರ ರೂ ಮೌಲ್ಯದ ಪಡಿತರವನ್ನು ಅನಧೀಕೃತವಾಗಿ ದಾಸ್ತಾನು ಮಾಡಿರುತ್ತಾರೆ. ಅನಧೀಕೃತವಾಗಿ ದಾಸ್ತಾನು ಮಾಡಿರುವ ಪಡಿತರದ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡದೆ ತಪ್ಪು ಲೆಕ್ಕಗಳನ್ನು ತೋರಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿರುತ್ತಾರೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳ ತಂಡ ಪಾತಬಾಗೇಪಲ್ಲಿ ನ್ಯಾಯಬೆಲೆ ಅಂಗಡಿ ಮೇಲೆ ಹಠಾತ್ ದಾಳಿ ನಡೆಸಿ ದಾಸ್ತಾನು ಬಗ್ಗೆ ಪರಿಶೀಲಿಸಿದಾಗ ೧.೫೦ ಲಕ್ಷ ರೂ ಮೌಲ್ಯದ ೫೦ ಕ್ವಿಂಟಾಲ್ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಬೆಳಕಿಗೆ ಬರುತ್ತದೆ. ಅಕ್ರಮ ದಾಸ್ತಾನು ಮಾಡಿರುವ ೧.೫೦ ಲಕ್ಷ ರೂ ಮೌಲ್ಯದ ಪಡಿತರವನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಅಕ್ರಮದಲ್ಲಿ ಬಾಗಿಯಾಗಿರುವ ನ್ಯಾಯಬೆಲೆ ಅಂಗಡಿ ಮಾಲೀಕ ರಾಜಗೋಪಾಲರೆಡ್ಡಿ ವಿರುದ್ದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತ್ತುಗೆ ಶಿಪಾರಸ್ಸು ಮಾಡಲಾಗಿದೆ.
ಈ ಕಾರ್ಯಚರಣೆಯಲ್ಲಿ ಆಹಾರ ನಿರೀಕ್ಷಕರಾದ ಫ್ರಭಾಕರ್, ರಮೇಶ್, ಕಸಭಾ ಕಂದಾಯ ನಿರೀಕ್ಷಕ ಕಿರಣ್‌ಕುಮಾರ್ ಮತ್ತಿತರರು ಇದ್ದರು.

ವರದಿ:ಗೋಪಾಲ ರೆಡ್ಡಿ ಬಾಗೇಪಲ್ಲಿ

error: