ಹೊನ್ನಾವರ: ತಾಲೂಕಿನ ಮೂಡ್ಕಣಿಯ ವಿನಾಯಕ ನಾಯ್ಕ, ಯುವ ಸಂಘಟನೆಯ ಮೂಲಕ ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದ್ದರು. ಶುಕ್ರವಾರ ತನ್ನ ಜನ್ಮದಿನದ ಅಂಗವಾಗಿ ಕರೊನಾ ಸಮಯದಲ್ಲಿ ಗ್ರಾಮದ ಆಶಾಕಾರ್ಯಕರ್ತೆಯರಿಗೆ ಮಾಸ್ಕ ಹಾಗೂ ಸ್ಯಾನಿಟೇಜರ್ ವಿತರಿಸುವ ಮೂಲಕ ಈ ವರ್ಷದ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಪ್ರತಿವರ್ಷವು ಜನ್ಮದಿನವನ್ನು ನೊಂದವರಿಗೆ ಅಸಹಾಯಕರಿಗೆ ನೆರವಾಗುವ ಮೂಲಕ ಆಚರಿಸಿಕೊಳ್ಳುವ ವಿನಾಯಕ ನಾಯ್ಕ ಪ್ರಸುತ್ತ ವರ್ಷ ಗ್ರಾಮದಲ್ಲಿ ಕರೊನಾ ವಾರಿಯರ್ಸಆಗಿರುವ ಆಶಾ ಕಾರ್ಯಕರ್ತೆಯರಿಗೆ ಸುರಕ್ಷಿತ ಪರಿಕರ ನೀಡಿರುವುದಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಅಲ್ಲದೇ ಕರೊನಾ ಸಮಯದಲ್ಲಿ ದೇಶಾದ್ಯಂತ ಲಾಕೌಡೌನ್ ಇರುದರಿಂದ ಪಟ್ಟಣಕ್ಕೆ ಔಷಧಿ ತೆಗೆದುಕೊಂಡು ಹೊಗಲು ಸಮಸ್ಯೆ ಉಂಟಾದಾಗ, ಗೇರುಸೊಪ್ಪ ಮಾರ್ಗದ ೫೦೦ಕ್ಕು ಹೆಚ್ಚಿನ ಮನೆಯವರಿಗೆ ಔಷಧಿಯನ್ನು ವಿತರಿಸಿದ್ದರು. ಅದರಲ್ಲಿ ನೂರಕ್ಕೂ ಅಧಿಕ ಬಡ ಜನತೆಯಿಂದ ಔಷಧಿಯನ್ನು ಉಚಿತವಾಗಿ ನೀಡುವ ಮೂಲಕ ಹಲವರಿಗೆ ಪ್ರೇರಣೆಯಾಗಿದ್ದರು.
ತಾಲೂಕಿನ ಯುವ ಒಕ್ಕೂಟದ ಮೂಲಕ ಯುವಕರಿಗೆ ಸದಾ ಕಾಲ ಪ್ರೇರಕರಾಗಿರುವ ಇವರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.