June 15, 2024

Bhavana Tv

Its Your Channel

ಉತ್ತರಕನ್ನಡದಲ್ಲಿ ಮುಂದುವರೆದ ಕರೋನಾ ಪಾಸಟಿವ್ ಪ್ರಕರಣ: ಹೊನ್ನಾವರ ಮತ್ತು ಯಲ್ಲಾಪುರದಲ್ಲಿ ತಲಾ ಒಂದು ಪ್ರಕರಣ ಸಾಧ್ಯತೆ?

ಕಾರವಾರ: ಜಿಲ್ಲೆಯನ್ನು ಬಿಟ್ಟು ಬಿಡದ ಕರೋನಾ ಶನಿವಾರವು ಮುಂದುವರೆದಿದ್ದು, ಇಂದು ಎರಡು ಹೊಸ ಪ್ರಕರಣ ವರದಿಯಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ೨೦ ಸೋಂಕಿತರು ಕೊರೋನಾದಿಂದ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದರೆ, ಇತ್ತ ಮತ್ತಿಬ್ಬರಿಗೆ ಸೋಂಕು ದೃಢಪಡುವ ಸಾಧ್ಯತೆ ಇದೆ.
ಹೊನ್ನಾವರದಲ್ಲಿರುವ, ಸೋಂಕಿತ ಮುಂಬೈ ರಿಟರ್ನ್ ಪತಿಯ ಸಂಪರ್ಕದಲ್ಲಿದ್ದ ೩೪ ವರ್ಷದ ಪತ್ನಿಗೆ ಹಾಗೂ ದೆಹಲಿಯಿಂದ ಯಲ್ಲಾಪುರಕ್ಕೆ ವಾಪಸ್ಸಾಗಿದ್ದ ಯುವಕನಲ್ಲಿ ಸೋಂಕು ದೃಢಪಡುವ ಸಾಧ್ಯತೆ ಇದೆ. ಮಧ್ಯಾಹ್ನ ಬಿಡುಗಡೆಯಾಗುವ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಟಿಸಿದ ಬಳಿಕ ಖಚಿತವಾಗಬೇಕಿದೆ. ಒಂದುವೇಳೆ ಈ ಎರಡೂ ಪ್ರಕರಣಗಳು ಇಂದು ದೃಢಪಟ್ಟರೆ, ಹೊನ್ನಾವರದಲ್ಲಿ ಏಳು ಹಾಗೂ ಯಲ್ಲಾಪುರದಲ್ಲಿ ಮೂರಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಲಿದೆ. ಹೊನ್ನಾವರದಲ್ಲಿ ಇನ್ನು ಹಲವು ಕ್ವಾರಂಟೈನ್ ನಿವಾಸಿಗಳ ವರದಿಗಾಗಿ ತಾಲೂಕ ಆಡಳಿತ ಕಾಯುತ್ತಿದೆ.

error: