July 14, 2024

Bhavana Tv

Its Your Channel

ಬ್ಯಾಂಕಿAಗ್ ಕ್ಷೇತ್ರದಲ್ಲಿ ವಿಶ್ವಾಸಪೂರ್ಣ, ಪ್ರಾಮಾಣಿಕ ವ್ಯವಹಾರ ಇರಬೇಕು ಎಂದು ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಪಿ.ಎಂ. ಪಿಂಜಾರ್

ಅವರು ಕುಮಟಾ ಪಟ್ಟಣದ ಕೆವಿಜಿ ವಿಭಾಗೀಯ ಬ್ಯಾಂಕ್ ಕಚೇರಿಯಲ್ಲಿ ಭಾರತೀಯ ವಿಕಾಸ ಟ್ರಸ್ಟ ಮಣಿಪಾಲ, ಸೆಲ್ಕೋ ಫೌಂಡೇಶನ್ ಬೆಂಗಳೂರು ಇವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಸಹಭಾಗಿತ್ವದಲ್ಲಿ ಸೋಮವಾರ ಕೆ.ಎಂ.ಉಡುಪ ಸಂಸ್ಮರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ‍್ಯಾ ನಂತರದ ಇಷ್ಟು ವರ್ಷಗಳಲ್ಲಿ ಕೃಷಿಗೆ ಸರಿಯಾದ ಆದ್ಯತೆ ಸಿಗಲಿಲ್ಲ. ಮೋದಿ ಸರ್ಕಾರದಲ್ಲಿ ರೈತಸ್ನೇಹಿ, ಕೃಷಿಪರ ಆಡಳಿತ ನೀಡುತ್ತಿದೆ. ಆದರೆ ಜನರ ಈ ಎಲ್ಲಾ ಯೋಜನೆಗಳು ತಮ್ಮದೆಂದು ಭಾವಿಸಿ ಪ್ರಾಮಾಣಿಕ ಫಲ ಪಡೆದಾಗ ದೇಶ ಸುಭಿಕ್ಷವಾಗುತ್ತದೆ. ಸಾಲ ನೀಡಿದ ಬ್ಯಾಂಕುಗಳು ಬೆಳೆಯುತ್ತವೆ ಎಂದರು.

ಕೆನರಾ ಕಾಲೇಜು ಸೊಸೈಟಿ ಕಾರ್ಯದರ್ಶಿ ವಿನೋದ ಪ್ರಭು ಮಾತನಾಡಿ, ಎಲ್ಲರೂ ಸಮಾಜದ ಅಂಗವಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಮಾಡಿದರೆ ಮಾತ್ರ ದೇಶ ಸುಂದರವಾಗುತ್ತದೆ. ದಿ. ಉಡುಪರನ್ನು ಆದರ್ಶವಾಗಿ ಇಟ್ಟುಕೊಂಡು ಬ್ಯಾಂಕಿAಗ್ ಕ್ಷೇತ್ರದಲ್ಲಿ ಅಭಿವೃದ್ಧಿಯ ಗುರಿ ಮುಟ್ಟಬೇಕು. ಕೃಷಿಯಲ್ಲಿ ಸೌರಶಕ್ತಿ ಬಳಕೆ ಹೆಚ್ಚಬೇಕು ಎಂದರು.

ಕೆವಿಜಿ ವಿಭಾಗೀಯ ವ್ಯವಸ್ಥಾಪಕ ಕೆ.ಎಸ್.ಭಟ್ ಮಾತನಾಡಿ, ದಿ. ಕೆ.ಎಂ.ಉಡುಪರದ್ದು ಮೇರು ವ್ಯಕ್ತಿತ್ವ. ಅವರ ಸಾಧನೆಗಳು ಚಿರಂತನ. ಗ್ರಾಮೀಣ ಬ್ಯಾಂಕಿAಗ್ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಳು, ಕೆಲಸಗಳು ತಲಸ್ಪರ್ಷಿಯಾಗಿದೆ. ಉಡುಪರು ಗ್ರಾಮೀಣ ಅಭಿವೃದ್ಧಿಯ ಹರಿಕಾರ. ಅವರು ಎಲ್ಲರಿಗೂ ಮಾದರಿ ಎಂದರು.

error: