ಕುಮಟಾ:
ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕಾ ಪಂಚಾಯತ ಕುಮಟಾ ಹಾಗೂ ತೋಟಗಾರಿಕೆ ಇಲಾಖೆ ಇವರ ಸಹಯೋಗದಲ್ಲಿ ೨೦೧೯-೨೦ ನೇ ಸಾಲಿನ ತಾಲೂಕಾ ಪಂಚಾಯತ ಯೋಜನೆಯಡಿ ಈರುಳ್ಳಿ ಬೇಸಾಯದ ಕುರಿತು ” ರೈತರ ತರಬೇತಿ ಕಾರ್ಯಕ್ರಮ “ವು ವನ್ನಳ್ಳಿಯ ಶ್ರೀ ಗೋಳಿಬೀರಪ್ಪ ದೇವಾಲಯದ ಆವಾರದಲ್ಲಿ ಸೋಮವಾರ ನಡೆಯಿತು.
ಮುಖ್ಯ ಅತಿಥಿಗಳಾದ ಮಾಜಿ ಪುರಸಭಾ ಸದಸ್ಯರಾದ ರಮೇಶ್ ಕೃಷ್ಣ ನಾಯ್ಕ ಮಾತನಾಡಿ,” ಈ ಮೊದಲೂ ಈರುಳ್ಳಿ ಬೆಳೆಗೆ ರೋಗ ಬಾಧೆ ಇತ್ತು. ಅದು ಕೆಲ ಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈ ವರ್ಷ ವಾತಾರಣದಲ್ಲಿನ ತೊಂದರೆಯಿAದಾಗಿ ಶೇ ೯೦ ರಷ್ಟು ರೈತರ ಬೆಳೆಗಳು ರೋಗಕ್ಕೆ ತುತ್ತಾಗಿದೆ. ಕಳೆದ ೧೦ ವರ್ಷದ ಹಿಂದೆಯೂ ಒಮ್ಮೆ ಈ ರೀತಿಯಾಗಿ ರೋಗ ಕಾಣಿಸಿಕೊಂಡಿತ್ತು. ಆಗ ನಾವು ವಿಜ್ಞಾನಿಗಳ ನಿರ್ದೇಶನವನ್ನು ಅನುಸರಿಸಿದ್ದೆವು. ಆದರೆ ಅದರಿಂದ ನಮಗೆ ಯಾವುದೇ ಬಗೆಯ ಪ್ರಯೋಜನವಾಗಿರಲಿಲ್ಲ. ವಿಜ್ಞಾನಿಗಳು ನಮ್ಮ ರೈತರಿಗೆ ಮಾಹಿತಿ ನೀಡಿ ತಿಳುವಳಿಕೆ ಹೆಚ್ಚಿಸಬೇಕು. ಆದರೆ ಅದನ್ನು ಬಿಟ್ಟು ನಮ್ಮ ಬೆಳೆಯ ಮೇಲೆ ಪ್ರಯೋಗ ಮಾಡಬಾರದು. ಯಾಕೆಂದರೆ ಅದರಿಂದಾಗಿ ೧೦ ವರ್ಷಗಳ ಹಿಂದೆ ನಾವು ಬೆಳೆಯನ್ನು ಕಳೆದುಕೊಂಡ ಉದಾಹರಣೆ ಇದೆ. ವನ್ನಳ್ಳಿ ಭಾಗದ ಬಹುಪಾಲು ರೈತರಿಗೆ ಈ ಈರುಳ್ಳಿ ಬೆಳೆಯೇ ಆಸರೆ. ಅಲ್ಲದೇ ಈ ಬಾರಿ ಅತಿವೃಷ್ಟಿ ಹಾಗೂ ಕಾಡು ಪ್ರಾಣಿಯ ದಾಳಿಯಿಂದಾಗಿ ಭತ್ತದ ಬೆಳೆಯೂ ರೈತನ ಕೈ ಸೇರಿಲ್ಲ. ಇದರಿಂದಾಗಿ ಈಗ ಮತ್ತೆ ಈ ಈರುಳ್ಳಿಗೆ ಬಂದಿರುವ ಹಾವುಸುಳಿ ರೋಗದಿಂದ ರೈತ ಕಂಗಾಲಾಗಿದ್ದಾನೆ “ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಪುರಸಭಾ ಸದಸ್ಯರಾದ ಆಶಾ ನಾಯ್ಕ ಉದ್ಘಾಟಿಸಿದರು.
ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಚೇತನ ನಾಯ್ಕ ಮಾತನಾಡಿ,” ಈ ಭಾಗದ ಈರುಳ್ಳಿಯ ಗುಣಮಟ್ಟ ಹಾಗೂ ಸಿಹಿ ಬೇರೆ ಯಾವ ಭಾಗದಲ್ಲಿಯೂ ಸಿಗಲಾರದು. ವನ್ನಳ್ಳಿ, ಅಳ್ವೇಕೋಡಿ, ಹಂದಿಗೋಣ ಹಾಗೂ ಗೋಕರ್ಣ ಭಾಗದ ಒಟ್ಟೂ ಅಂದಾಜು ೪೦-೫೦ ಹೆಕ್ಟೇರ್ ಭೂ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಉಳಿದ ಕಡೆಗಳಲ್ಲಿ ರೈತರು ಹೆಚ್ಚಾಗಿ ಯಂತ್ರಗಳನ್ನು ಬಳಸಿದರೆ, ಈ ಭಾಗದ ರೈತರು ಬೆಳಗಿನ ಜಾವವೇ ಎದ್ದು ತಾವೇ ಖುದ್ದಾಗಿ ಬೆಳೆಯ ಡೇಕರಿಕೆ ಮಾಡುವುದು ವಿಶೇಷ. ಆದರೆ ಈ ವರ್ಷ ವಾತಾವರಣದ ಸಮಸ್ಯೆ ಅಥವಾ ಬೇಸಾಯ ಕ್ರಮದಿಂದಾಗಿ ಈ ಹಾವುಸುಳಿ ರೋಗ ಕಾಣಿಸಿಕೊಂಡಿದೆ. ಆದ್ದರಿಂದ ಎಲ್ಲಾ ರೈತರಿಗೆ ರೋಗದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಾಗಾರವನ್ನು ಆಯೋಜಿದಲಾಗಿದೆ “ಎಂದರು. ಸಭಾಕಾರ್ಯಕ್ರಮದ ಬಳಿಕ ಶಿರಸಿ ತೋಟಗಾರಿಕಾ ಮಹಾವಿದ್ಯಾಲಯದ ಡಾ.ಶಿವಕುಮಾರ್, ಕೃಷಿ ತಜ್ಞ ಡಾ.ಶಿವಾನಂದ ಹೊಂಗಲ್, ಡಾ.ಅಶೋಕ ಅವರಿಂದ ರೈತರಿಗೆ ಬೆಳೆ ಹಾಗೂ ರೋಗ ಬಾಧೆಯ ಕುರಿತು ಕಾರ್ಯಾಗಾರ ನಡೆಯಿತು.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ