May 19, 2024

Bhavana Tv

Its Your Channel

ಕುಮಟಾ ತಾಲೂಕಾ ಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಹರುನಗರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುರಸಭಾ ಸದಸ್ಯರಾದ ಲಕ್ಷ್ಮಿ ಗೊಂಡ ಉದ್ಘಾಟಿಸಿದರು.ಈ ವೇಳೆ ಪ್ರಾಸ್ತಾವಿಕ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಆಜ್ಞಾ ನಾಯಕ ಮಕ್ಕಳನ್ನು ಹೆಚ್ಚಾಗಿ ಬಾದಿಸುವ ಜಂತುಹುಳುಗಳನ್ನು ನಿವಾರಿಸಿ,ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವುದು ಈ ಕಾರ್ಯಕ್ರಮದ ಉದ್ದೇಶ.ಮಕ್ಕಳಲ್ಲಿ ಕಂಡುಬರುವ ಮಾನಸಿಕ,ಬೌದಿಕ,ಶೈಕ್ಷಣಿಕ ಅಭಿವೃದ್ಧಿಯ ಕುಂಠಿತಕ್ಕೆ ಆರೋಗ್ಯ ಸಮಸ್ಯೆಗಳೂ ಕಾರಣ.ಹೀಗಾಗಿ ಪ್ರತಿ ೬ ತಿಂಗಳಿಗೊಮ್ಮೆ ಜಂತುಹುಳು ನಿವಾರಣಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಿ,ಮಾತ್ರೆಗಳನ್ನೂ ನೀಡಲಾಗುತ್ತಿದೆ ಎಂದರು.
ನAತರ ತಾಲೂಕಾ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಮಾತನಾಡಿ ಆರೋಗ್ಯ ಪ್ರತಿಯೊಬ್ಬರ ಬಹುಮುಖ್ಯ ಸಂಪತ್ತು.ಉಳಿದೆಲ್ಲ ಸಂಪತ್ತುಗಳನ್ನು ಅನುಭವಿಸಲು ಆರೋಗ್ಯ ಸಂಪತ್ತು ಬೇಕಾಗುತ್ತದೆ.ಹೀಗಾಗಿ ಮಕ್ಕಳಿಗೆ ಶಾಲಾ ದಿನಗಳಲ್ಲಿಯೇ ಆರೋಗ್ಯದ ಬಗೆಗಿನ ಮಾಹಿತಿ ನೀಡಿ ಆರೋಗ್ಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸಬೇಕಿದೆ.ಜಂತಹುಳುಗಳು ಹೆಚ್ಚಾದಂತೆ ನಮ್ಮ ಆಹಾರ ಕ್ರಮ ಸರಿಯಾಗಿದ್ದರೂ ಸಹ ನಾವು ತಿಂದ ಆಹಾರದ ಪೌಷ್ಟಿಕಾಂಶ ಹೀರಿ ನಮ್ಮ ದೇಹಕ್ಕೆ ಪೌಷ್ಟಿಕಾಂಶ ನೀಡದೆ ನಮ್ಮನ್ನ ಬಲಹೀನರನ್ನಾಗಿಸುತ್ತದೆ.ಹೀಗಾಗಿ ಜಂತುಹುಳು ನಿವಾರಣೆಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಪರಿಪೂರ್ಣವಾಗಲಿದೆ ಎಂದರು.


ತಾಲೂಕಾ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ.ಮಾತನಾಡಿ ಸರ್ಕಾರದ ಇಂತಹ ಯೋಜನೆಗಳು ಪ್ರತಿಯೊಂದು ಹಳ್ಳಿ, ಗ್ರಾಮ,ಪಟ್ಟಣಗಳಲ್ಲಿನ ಜನರನ್ನು ಮುಟ್ಟುವಂತಾಗಬೇಕು.ಈ ದಿಶೆಯಲ್ಲಿ ಇವತ್ತಿನ ಜಂತುಹುಳು ನಿವಾರಣಾ ಕಾರ್ಯಕ್ರಮದ ಮಹತ್ವವನ್ನು ಮಕ್ಕಳ ಜೊತೆಗೆ ಪಾಲಕರೂ ತಿಳಿದುಕೊಳ್ಳಬೇಕು.ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ ಕೈ ತೊಳೆಯುವ ದಿನಾಚರಣಾ ಅಂಗವಾಗಿ ಕೈ ತೊಳೆಯುವ ವಿಧಾನ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಆರ್.ಸಿ ರೇಖಾ ನಾಯ್ಕ, ನೋಡಲ್ ಅಧಿಕಾರಿ ಡಾ.ಶಂಕರ,ಸಿಡಿಪಿಒ ವಿಜಯ ನಾಯ್ಕ,ಶಿಕ್ಷಣ ಇಲಾಖೆಯ ಪಿ.ಎಮ್ ಮುಕ್ರಿ ಹಾಜರಿದ್ದರು.

error: