April 27, 2024

Bhavana Tv

Its Your Channel

ಮುರ್ಡೆಶ್ವರ ಕೇರೆಕಟ್ಟೆ ಶಾಲಾ ಮಕ್ಕಳ ಜೀವದೊಂದಿಗೆ ಚಲ್ಲಾಟ ಮಾಡುತ್ತಿರುವ ಮುರ್ಡೆಶ್ವರದ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿ

ಭಟ್ಕಳ ತಾಲೂಕಿನ ಮುರ್ಡೆಶ್ವರ ಕೇರೆಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಬಾಗದಲ್ಲಿ ರಸ್ತೆ ಅಗಲಿಕರಣದ ನೆಪದಲ್ಲಿ ಒಳ ಚರಂಡಿ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೆ ತೇರೆದ ಚರಂಡಿಯಿAದ ಶಾಲಾ ಮಕ್ಕಳ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸ್ಥಳಿಯ ಸಾರ್ವಜನಿಕರು ಗ್ರಾಮ ಪಂಚಾಯತ್ ಪಿಡಿಓ ಹಾಗು ಸಂಬAದಿಸಿದ ಅದಿಕಾರಿಗಳನ್ನು ಮಂಗಳವಾರ ಶಾಲೆಯಲ್ಲಿ ಕೂಡಿ ಹಾಕಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ಎದುರಾಗಿದೆ.



ತಾಲೂಕಿನ ಮುರ್ಡೆಶ್ವರ ದೇವಸ್ತಾನದ ಮುಂಬಾಗದ ರಸ್ತೆ ಅಭಿವೃದ್ದಿಯ ಹೆಸರಿನಲ್ಲಿ ಕೆರೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲೆ ಇರುವ ಒಳಚರಂಡಿ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದೆ ಸುಮಾರು ಎಳು ಎಂಟು ತಿಂಗಳೆ ಕಳೆದುಹೊಗಿರುತ್ತದೆ ಚರಂಡಿಯಲ್ಲಿ ಅಕ್ಕಪಕ್ಕದ ಹೊಟೆಲ್ ಹಾಗು ಲಾಡ್ಜಗಳು ತಮ್ಮಲ್ಲಿರುವ ತಾಜ್ಯ ವಸ್ತು ಹಾಗು ಶೌಚಾಲಯದ ತ್ಯಾಜ್ಯಗಳನ್ನು ಚರಂಡಿಗಳಿಗೆ ನೆರವಾಗಿ ಹರಿಯ ಬಿಟ್ಟ ಹಿನ್ನೆಲೆಯಲ್ಲಿ ಪಕ್ಕದ ಶಾಲಾಮಕ್ಕಳಿಗೆ ಚಿಕನ್ ಪಾಕ್ಸಗಳಂತ ಕಾಯಿಲೆಗಳು ಹರಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಗ್ರಾ ಪಂ ಪಿಡಿಒ ನಟರಾಜ್ ಹಾಗು ಸಂಬAದಿಸಿದ ಅಧಿಕಾರಿಗಳನ್ನು ಶಾಲೆಯಲ್ಲಿ ಕೂಡಿಹಾಕಿ ಶಾಲೆಗೆ ಬೀಗ ಜಡಿದು ಪ್ರತಿಭಟನೆಯನ್ನು ನಡೆಸಿದರು.


ಈ ಸಂದರ್ಬದಲ್ಲಿ ಸ್ಥಳಿಯ ಸಾರ್ವಜನಿಕರು ಗ್ರಾಮ ಪಂಚಾಯತ್ ಪಿಡಿಓ ನಟರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು ಈ ಸಂದರ್ಬದಲ್ಲಿ ಪ್ರತಿಕ್ರಿಯಿಸಿದ ಅವರು ಈ ಸಮಸ್ಯೆಯನ್ನು ಅತಿ ಶಿಘ್ರದಲ್ಲೆ ಪರಿಹಾರ ನೀಡಲಾಗುವುದು ಎಂಬ ಮಾತನ್ನು ಹೇಳುವುದರ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು ಆದರೆ ಇದರ ಸುಳಿವು ಮೊದಲೆ ತಿಳಿದಿದ್ದ ಸಾರ್ವಜನಿಕರು ಆಕ್ರೋಶಿತರಾಗಿ ಈ ಸಮಸ್ಯೆಗಳಿಗೆ ಪರಿಹಾರವನ್ನು ನೀಡದೆ ಇಲ್ಲಿಂದ ಹೊರ ಹೋಗುವಂತಿಲ್ಲಾ ಎಂದು ಗ್ರಾ ಪಂ ಪಿಡಿಒ ನಟರಾಜ್ ಸಮೇತ ಈ ಅವ್ಯವಸ್ಥೆಗೆ ಕಾರಣಿಭೂತರಾದ ಎಲ್ಲಾ ಅಧಿಕಾರಿಗಳನ್ನು ಶಾಲೆಯಲ್ಲಿ ಕೂಡಿಹಾಕಿ ಶಾಲೆಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದರು ಈ ಸಂದರ್ಬದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಬೇಟಿಕೊಟ್ಟು ಸಾರ್ವಜನಿಕರನ್ನು ಸಮಾದಾನಿಸಿ ಇಂದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾವುದು ಎಂದು ಬರವಸೆಯನ್ನು ನೀಡಿದ ನಂತರವಷ್ಟೆ ಶಾಲೆಯಲ್ಲಿ ಕೂಡಿಹಾಕಿದ್ದ ಅಧಿಕಾರಿಗಳು ಹೊರಬರುವಂತಾಯಿತು. ನಂತರ ಶಾಲಾ ಪಕ್ಕದಲ್ಲಿದ್ದ ಚರಂಡಿಯನ್ನು ಮಣ್ಣನ್ನು ಹಾಕಿ ಮುಚ್ಚಲಾಯಿತು

error: