February 14, 2025

Bhavana Tv

Its Your Channel

ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಅಂಗಡಿ ಭಸ್ಮ

ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಅಂಗಡಿ ಭಸ್ಮ ಇಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಲಚ್ಯಾಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದೆ.

ಸ್ಥಳೀಯ ನಿವಾಸಿ ಸುನೀಲ್ ಮೇಲಿನಕೇರಿ ಎಂಬುವರಿಗೆ ಸೇರಿದ ಝರಾಕ್ಸ ಮತ್ತು ಬುಕ್ ಸ್ಟಾಲ್ ಅಂಗಡಿಯಲ್ಲಿನ ೮೦ ಸಾವಿರ ಮೌಲ್ಯದ ೧ ಝರಾಕ್ಸ ಯಂತ್ರ, ೬೦ ಸಾವಿರ ರೂ. ಮೌಲ್ಯದ ೨ ಕಂಪ್ಯೂಟರ್, ೧ ಪ್ರಿಂಟರ್, ೭೦ ಫೈಲ್, ಪುಸ್ತಕ, ಸಾಮಗ್ರಿ, ಪೆನ್ ಹಾಗೂ ಪೀಠೋಪಕರಣ ಸೇರಿದಂತೆ ಒಟ್ಟು ಅಂದಾಜು ರೂ. ೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಬೆಳಿಗ್ಗೆ ಮಾಲಿಕ ಅಂಗಡಿ ತೆರಯುವ ವೇಳೆ ಈ ಬೆಂಕಿ ಸಲಕರಣೆಗಳು ಹೊತ್ತಿ ಉರಿಯುತ್ತಿರುವ ನೋಟ ಕಂಡು ಬಂದಿದೆ. ತಕ್ಷಣವೇ ಎಚ್ಷೆತ್ತ ಮಾಲಿಕ ಹಾಗೂ ಪ್ರತ್ಯಕ್ಷದರ್ಶಿಗಳು, ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

error: