May 7, 2024

Bhavana Tv

Its Your Channel

ಹಿರಿಯ ತಲೆಮಾರಿನ ಪ್ರಸಿದ್ದ ಯಕ್ಷಗಾನ ಕಲಾವಿದ ಕರ್ಕಿ ನಾರಾಯಣ ಪರಮಯ್ಯ ಹಾಸ್ಯಗಾರ ಇವರು ತಮ್ಮ ೯೦ನೇ ವಯಸಿನಲ್ಲಿ ಇಂದು ನಿಧನ

ಹೊನ್ನಾವರ ; ಪ್ರಪಥಮವಾಗಿ ದೆಹಲಿಗೆ ರಾಷ್ಟçಪತಿ ಭವನದಲ್ಲಿ ಆಟ ಪ್ರದರ್ಶಿಸಿದ ಕರ್ಕಿ ದುರ್ಗಾಂಬಾ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರಮುಖ ಕಲಾವಿದರಾಗಿದ್ದ ಇವರು ಸುರತ್ಕಲ್ ಮೊದಲಾದ ತೆಂಕುತಿಟ್ಟನ ಯಕ್ಷಗಾನ ಮಂಡಳಿಗಳಲ್ಲಿಲ್ಲಿ ನಾಡಿನ ಬಡಗುತಿಟ್ಟಿನ ಪ್ರಸಿದ್ದ ಕಲಾವಿದರೊಂದಿಗೆ ಪಾತ್ರ ಮಾಡಿದ್ದರು. ಕರ್ಕಿ ಕುಟುಂಬದ ಪೂರ್ಣಾವಧಿ ವೃತ್ತಿ ಕಲಾವಿದರಾಗಿದ್ದ ಇವರು ಮತ್ತು ದಿವಂಗತ ಪರಮ ಹಾಸ್ಯಗಾರ ಇವರು ಇಬ್ಬರು ಕರ್ಕಿ ಮೇಳದ ಆಧಾರಸ್ತಂಭವಾಗಿದ್ದರು. ಬಡಗುತಿಟ್ಟಿನ ಯಕ್ಷಗಾನ ಪರಂಪರೆಯಲ್ಲಿ ಕರ್ಕಿ ಮೇಳ ತನ್ನ ವಿಶಿಷ್ಟ ಶೈಲಿಗಾಗಿ ಪ್ರಸಿದ್ದಿ ಪಡೆದಿತ್ತು. ಬಡೋದಯ ಮಹರಾಜರ ಎದುರು ಕರ್ಕಿ ಮೇಳದವರು ಪ್ರದರ್ಶಿಸಿದ ಯಕ್ಷಗಾನ ಮರಾಠಿ ನಾಟ್ಯ ರಂಗಭೂಮಿಗೆ ಪ್ರೇರಕವಾಗಿತ್ತು ಎಂದು ಯಕ್ಷಗಾನದ ಇತಿಹಾಸ ಸಾರುತ್ತದೆ. ಕರ್ಕಿ ಮೇಳದ ಮೂಲ ಪ್ರವೃತ್ತಕರಾದ ದಿವಂಗತ ಪರಮಯ್ಯ ಹಾಸ್ಯಗಾರರಿಗೆ, ವರದ ಹಾಸ್ಯಗಾರ, ಗಣಪತಿ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ನಾರಾಯಣ ಹಾಸ್ಯಗಾರ ಎನ್ನುವ ನಾಲ್ವರು ಮಕ್ಕಳು. ಪರಮಯ್ಯ ಹಾಸ್ಯಗಾರರು ತಮ್ಮ ನಾಲ್ವರು ಮಕ್ಕಳನ್ನು ಯಕ್ಷಗಾನ ಕಲಾವಿದರನ್ನಾಗಿ ಬೆಳೆಸಿದ್ದರು. ಕೃಷ್ಣ, ಅರ್ಜುನ, ಧರ್ಮರಾಯ, ಮೊದಲಾದ ಪಾತ್ರಗಳಿಗೆ ಪ್ರಸಿದ್ದರಾಗಿದ್ದ ನಾರಾಯಣ ಹಾಸ್ಯಗಾರರು ತಮ್ಮ ವಂಶಪಾರAರ‍್ಯವಾಗಿ ಬಂದ ಶೈಲಿಯ ಕುಣಿತದಿಂದ ಯಕ್ಷಗಾನ ಕ್ಷೇತ್ರದಲ್ಲಿ ಬಹುಕಾಲ ಮಿಂಚಿದ್ದರು. ಪತ್ನಿ ಮಗ, ಮಗಳು ಮತ್ತು ಹಾಸ್ಯಗಾರ ಕುಟುಂಬದ ಹಿರಿಯರನ್ನು ಅಗಲಿರುವ ಇವರ ನಿಧನದಿಂದ ಪರಮಯ್ಯ ಹಾಸ್ಯಗಾರ ಕುಟುಂಬದ ಕೊನೆಯ ಕೊಂಡಿ ಕಳಚಿದಂತಾಯಿತು. ಇಳಿ ವಯಸ್ಸಿನಲ್ಲಿ ದಿನವಿಡಿ ದೇವರ ಪೂಜೆ ಅನುಷ್ಟಾನದಲ್ಲಿ ತೊಡಗಿರುತ್ತಿದ್ದ ನಾರಾಯಣ ಹಾಸ್ಯಗಾರರು ಪತ್ನಿ, ಮಗ, ಮಗಳನ್ನು ಅಪಾರ ಯಕ್ಷಗಾಭಿಮಾನಿಗಳನ್ನು ಅಗಲಿದ್ದಾರೆ.

error: