May 7, 2024

Bhavana Tv

Its Your Channel

ಹೊನ್ನಾವರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಹೊನ್ನಾವರ ಇವರ ಸಹಯೋಗದಲ್ಲಿ ರೋಟರಿ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ

ಹೊನ್ನಾವರ : ತಹಶೀಲ್ದಾರ ವಿವೇಕ ಶೇಣ್ವಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ದೇಶದ ಗಡಿಯನ್ನು ಸೈನಿಕರು ಕಾಯುತ್ತಿದ್ದರೆ, ದೇಶದೊಳಗೆ ಪತ್ರಕರ್ತರು ಸಮಾಜದ ಅಂಕುಡೊAಕು, ಅನ್ಯಾಯವನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಸೇವೆಯನ್ನು ಸ್ಮರಿಸಿದರು.
೫೦ ವರ್ಷಗಳ ಸುಧೀರ್ಘ ಕಾಲ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿ ಕೊರೋನಾ ಸಂಕಷ್ಟದಲ್ಲಿ ಸಹಜವಾಗಿಯೇ ಎಲ್ಲಾ ರಂಗದAತೆ ಮಾಧ್ಯಮ ರಂಗಕ್ಕೂ ನಷ್ಟವಾಗಿದೆ. ಪತ್ರಿಕಾ ರಂಗದಲ್ಲಿಯೂ ಪತ್ರಕರ್ತರು ಕಷ್ಟದಲ್ಲಿದ್ದಾರೆ. ಯಾವುದೇ ಭದ್ರತೆ ಇಲ್ಲದಿದ್ದರೂ ಜೀವನವನ್ನು ಪಣಕ್ಕಿಟ್ಟು ಸುದ್ದಿಯನ್ನು ಜನರಿಗೆ ತಲುಪಿಸಲು ಎಲ್ಲಡೆ ಸಂಚರಿಸುತ್ತಿದ್ದಾರೆ. ಹೊಗಳಿಕೆ, ತೆಗಳಿಕೆಯನ್ನು ಸಮನಾಗಿ ಸ್ವೀಕರಿಸುತ್ತಾ ಮುನ್ನುಗ್ಗುವವನೇ ನಿಜವಾದ ಪತ್ರಕರ್ತನಾಗಿರುತ್ತಾನೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ಮಾತನಾಡಿ ವೈಯಕ್ತಿಕ ವಿಚಾರಗಳೂ ಪತ್ರಿಕೆಗಳಿಗೆ ಆಹಾರವಾಗದಂತೆ ನೋಡಿಕೊಳ್ಳಬೇಕಾದ ಜವಬ್ದಾರಿ ಪತ್ರಕರ್ತರ ಮೇಲಿದೆ. ಪತ್ರಿಕೆಗಳಲ್ಲಿ sಸಮಸ್ಯೆಗಳ ಬಗ್ಗೆ ಬರೆಯುವಾಗ ಅಂತಿಮ ತಿರ್ಮಾನವನ್ನು ಓದುಗನ ಮೇಲೆ ಬಿಡುವ ಕೆಲಸ ಮಾಡಬೇಕು. ಸಮಾಜದ ಕಟ್ಟಕಡೆಯ ಸಮಸ್ಯೆಯನ್ನು ಗುರುತಿಸಿದಾಗ ಮಾತ್ರ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದರು.
ರೋಟರಿ ಕ್ಲಬ್ ಹಾಗೂ ತಹಶೀಲ್ದಾರ ವತಿಯಿಂದ ಎಲ್ಲಾ ವರದಿಗಾರರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ರೋಟರಿ ಅಧ್ಯಕ್ಷರಾದ ಸೂರ್ಯಕಾಂತ ಸಾರಂಗ, ತಾಲೂಕ ಪತ್ರಕರ್ತ ಸಂಘದ ಅಧ್ಯಕ್ಷರಾದ ಎಂ.ಜಿ.ಹೆಗಡೆ, ಈವಂಟ್ ಚೇರಮನ್ ಸತೀಶ ಭಟ್ಟ, ಕಾರ್ಯದರ್ಶಿ ನಸ್ರುಲ್ಲಾ ಸಿದ್ಧಿ, ತಾರಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಸ್ವಾಗತಿಸಿದರು. ನಸ್ರುಲ್ಲಾ ಸಿದ್ಧಿ ವಂದಿಸಿದರು. ಲಕ್ಷಿö್ಮಕಾಂತ ಗೌಡ ಸನ್ಮಾನ ಪತ್ರ ವಾಚಿಸಿದರೆ, ದಿನೇಶ ಕಾಮತ್ ಹಾಗೂ ವೆಂಕಟೇಶ ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು.

error: