ಅರ್ಜುಣಗಿ ಬಿಕೆ ಗ್ರಾಮದಲ್ಲಿ ನಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ.. ನ್ರತ್ಯ ಸಂಗೀತದ ಮೂಲಕ ಸಾಂಸ್ರ‍್ಕತಿಕ ಲೋಕ ಸ್ರಷ್ಠಿಸಿದ ಮಕ್ಕಳು ..ಬಹುಮಾನ ನೀಡಿ ಮಕ್ಕಳ ಕಲೆಯನ್ನು ಪ್ರೋತ್ಸಾಹಿಸಿದ ಪಾಲಕರು..
ಅಲ್ಲಿ ಮಕ್ಕಳ ಸಂಭ್ರಮ ಮನೆ ಮಾಡಿತ್ತು ನಿತ್ಯ ಓದು ಬರಹದಲ್ಲಿ ತಲ್ಲಿನರಾಗುತಿದ್ದ ಆ ಮಕ್ಕಳು ಇಂದು ಬಣ್ಣ ಬಣ್ಣದ ಬಳಪಿನ ಚಿತ್ತಾರದಲ್ಲಿ ಸಂಗೀತಕ್ಕೆ ಮುದ್ದು ಮಕ್ಕಳು ಮೈ ಮರೆತು ಕುಣಿದು ಶಾಲಾ ಆವರಣದಲ್ಲಿ ಸಂಗೀತ ಲೋಕದಲ್ಲಿ ಮನ ತಣಿಸಿದರು ಈ ಮೂಲಕ ಅಲ್ಲಿ ನೇರೆದಿರುವ ಜನರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು.
ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ಜ್ಯೊತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಚಾಲನೆ ನೀಡಿ ಶ್ರೀಗಂಗಾಧರ ತಾವರಖೇಡ ಶಿಕ್ಷಕರು ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯ ಏನೆಲ್ಲಾ ಸಾಧಿಸಿ ತೋರಿಸಿದರು ಕಲಿಕೆಯಲ್ಲಿ ಪರಿಪೂರ್ಣನಾಗಲು ಸಾಧ್ಯವಿಲ್ಲ ಕಲಿಯುವುದು ಗರ್ಭದಿಂದ ಪ್ರಾರಂಭವಾಗಿ ಗೊರಿಯವರೆಗೂ ಮುಂದುವರೆಯುತ್ತದೆ ಎಂದು ಹೇಳಿದರು. ಕಲಿಯುವಾಗ ಕೀಳರಿಮೆ ತೋರೆಯಬೇಕು ನಮ್ಮ ಬಗ್ಗೆ ನಮಗೆ ಆತ್ಮ ವಿಶ್ವಾಸ ಇರಬೇಕು ಸತತ ಪರಿಶ್ರಮ ಹಾಗೂ ನಿರಂತರ ಅಧ್ಯಯನದಿಂದ ನಾವೂ ಸಾಧನೆಯ ಹಾಗೂ ಯಶಸ್ಸಿನ ಮೇಟ್ಟಿಲು ಏರಬಹುದು ಭಾರತದಲ್ಲಿ ಪ್ರತಿಭೆಗೆ ಬರವಿಲ್ಲ ಆದರೆ ಈ ದೇಶದಲ್ಲಿ ಪ್ರತಿಭೆಯನ್ನು ಸರಿಯಾಗಿ ಗುರುತಿಸುವ ಕೆಲಸ ಆಗುತ್ತಿಲ್ಲ, ಕಿರಿ ವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡಲು ಮಕ್ಕಳಿಗೆ ಸರಿಯಾದ ಅವಕಾಶಗಳನ್ನು ಒದಗಿಸಿ ಕೊಡುವ ಕೆಲಸ ಆಗಬೇಕು ಮಕ್ಕಳು ತಮ್ಮಲ್ಲಿರುವ ಕಿಳರಿಮೆ ಹಾಗೂ ಖಿನ್ನತೆಯನ್ನು ಬದಿಗಟ್ಟು ಶ್ರಮವಹಿಸಿ ಅಧ್ಯಯನದಲ್ಲಿ ತೋಡಗಬೇಕು ಇದರಿಂದ ಸ್ಪರ್ಧಾತ್ಮಕ ಬದುಕಿನಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
.ಜ್ಯೋತಿ ಬೆಳಗಿಸಿ ಮಾತನಾಡಿದ ಭೀಮದಾಸ ಕುಲಕರ್ಣಿ ರೈತ ಅನ್ನದಾತನಾದರೆ ಶಿಕ್ಷಕ ವಿದ್ಯಾದಾತ ಒಂದು ಮಗುವಿನ ಭವಿಷ್ಯ ಶಿಕ್ಷಕನ ಕೈಯಲ್ಲಿದ್ದು ಪ್ರಾಮಾಣಿಕವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಗುಣಮಟ್ಟದ ಕಲಿಕೆಗಾಗಿ ಅವರ ಆಸಕ್ತಿ ಅನುಗುಣವಾಗಿ ಪ್ರೊತ್ಸಾಹ ನೀಡಿ ಮಕ್ಕಳಿಗೆ ಭವಿಷ್ಯದ ಅರಿವನ್ನು ಮೂಡಿಸಿ ಆತ್ಮಿ ವಿಶ್ವಾಸ ಚೈತನ್ಯ ತುಂಬಿದಾಗ ಸಾಧಿಸುವ ಛಲ ಹೊಂದಿ ನಾಡಿನ ಸಾಧಕರಾಗುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಶಿಕ್ಷಕರಾದ ಎಲ್ ಕೆ ಇಂಗಳೆ ಸ್ವಾಗತಿಸಿದರು. ಹಣಮಂತ ಇಂಗಳಗಿ ನಿರೂಪಿಸಿದರು. ಎಸ್ ಎಸ್ ಹೊಸಪೆಟಿ ವಂದಿಸಿದರು.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ