May 19, 2024

Bhavana Tv

Its Your Channel

ವಿಡಂಬಾರಿಯವರಿಗೆ ಭಾವಪೂರ್ಣ ನುಡಿನಮನ

ಪ್ರಾರ್ಥನಾ ಪ್ರತಿಷ್ಠಾನ ಭಟ್ಕಳ ಹಾಗೂ ಶ್ರೀ ರತ್ನಾ ಗಣೆಶ ಪ್ರಕಾಶನ ಚಿತ್ರಾಪುರ.ಶಿರಾಲಿ ಇವರ ಸಹಯೋಗದಲ್ಲಿ ಇತ್ತೀಚೆಗೆ ಅಗಲಿದ ನಾಡಿನ ಹಿರಿಯ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಡಂಬಾರಿಯವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮವು ಶಿರಾಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯ ಗೋಪಾಲ ಪ್ರಭು ಸಭಾಭವನದಲ್ಲಿ ನಡೆಯಿತು.

ಕಾಯಕ್ರಮದಲ್ಲಿ ಉಪಸ್ಥಿತರಿದ್ದ ಆರ್.ಕೆ.ನಾಯ್ಕ ಮಾತನಾಡಿ ವಿಡಂಬಾರಿಯವರು ಬದುಕಿನುದ್ದಕ್ಕೂ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಿ ಚುಟುಕು ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದರು. ಸಾಹಿತ್ಯದ ಮೂಲಕ ಮಾತ್ರವಲ್ಲ ತಮ್ಮ ಸರಳತೆ ಸಜ್ಜನಿಕೆಯಿಂದ ಗಳಿಸಿದ ಪ್ರೀತಿಯೇ ಇಂದಿನ ಕಾರ್ಯಕ್ರವi ಆಯೊಜನೆಗೆ ಸಾಕ್ಷಿ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಡಂಬಾರಿಯವರನ್ನು ಬಹಳ ಹತ್ತಿರದಿಂದ ಕಂಡ ಸಾಹಿತಿಗಳಾದ ಡಾ.ಆರ್.ವಿ.ಸರಾಫ್ ಮಾತನಾಡಿ ವಿಡಂಬಾರಿಯವರು ಜೀವನದಲ್ಲಿ ಅನುಭವಿಸಿದ ಅನೇಕ ಸಂಕಷ್ಟಗಳನ್ನು ಉಲ್ಲೇಖಿಸಿ ಅವುಗಳನ್ನೆಲ್ಲ ಎದುರಿಸಿದ ಅವರ ಛಲ ಎಲ್ಲರಿಗೂ ಮಾದರಿ. ಸಮಾಜದಲ್ಲಿನ ಮೂಢನಂಬಿಕೆ, ಅವ್ಯವಸ್ಥೆಗಳ ಕುರಿತು ಚುಟುಕಿನ ಮೂಲಕ ಕುಟುಕಿದರು ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ವಿಡಂಬಾರಿಯವರು ತಮ್ಮ ಹಿರಿಯ ಸಹೊದರ ಕೆ.ಎನ್.ನಾಯ್ಕ ಅವರೊಂದಿಗಿನ ಒಡನಾಟವನ್ನು ನನಪಿಸಿಕೊಂಡು ಎಲ್ಲರೊಳಗೊಂದಾಗಿ ಬದುಕಿದ ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಅರ್ಥಪೂರ್ಣ ಎಂದರು. ಶಿಕ್ಷಕರಾದ ಪಿ.ಆರ್.ನಾಯ್ಕ ಮಾತನಾಡಿ ಜೀವನದ ಸಂಕಷ್ಟಗಳ ನಡುವೆಯೂ ಜೀವನ ಪ್ರೀತಿ, ಸಮಾಜದೆಡೆಗಿನ ಕಳಕಳಿಯನ್ನು ಚುಟುಕುಗಳ ಮೂಲಕ ಕಟ್ಟಿಕೊಟ್ಟ ವಿಡಂಬಾರಿಯವರ ಸಾಹಿತ್ಯವನ್ನು ಓದುವ ಮೂಲಕ ಅವರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಿದೆ ಮಾತ್ರವಲ್ಲ ಅವರ ಜೀವನ, ಸಾಹಿತ್ಯ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದರು. ಎಂಡಿ.ಪಕ್ಕಿ, ಸುರೇಶ ಮುರ್ಡೇಶ್ವರ, ಚಿದಾನಂದ ಪಟಗಾರ ಕವನ ವಾಚನದ ಮೂಲಕ ಕಾವ್ಯ ನಮನ ಸಲ್ಲಿಸಿದರೆ ನಾಗರಾಜ ಶೇಟ್ ಭಾವಗೀತೆಯನ್ನು ಹಾಡಿ ಗೀತನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಶಂಕರ ನಾಯ್ಕ, ಎಂ.ಪಿ.ಬAಢಾರಿ, ಶಿಕ್ಷಕರಾದ ಕೆ.ಬಿ.ಮಡಿವಾಳ, ಜಿ.ಟಿ.ಭಟ್, ಪೂರ್ಣಿಮಾ ನಾಯ್ಕ, ಸಿ.ಡಿ.ಪಡುವಣಿ, ಚಿದಾನಂದ ಪಟಗಾರ, ಪ್ರಕಾಶ ಶಿರಾಲಿವಿಡಂಬಾರಿಯವರೊAದಿಗಿನ ತಮ್ಮ ನೆನಪುಗಳನ್ನು ಹಂಚಿಕೊAಡರು. ಕಾರ್ಯಕ್ರಮದಲ್ಲಿ ಪ್ರಕಾಶ ಶೇಟ್, ಅಂಥೋನಿ ಡಿಕೋಸ್ಟ, ಉಪನ್ಯಾಸಕ ಗಣೇಶ ಯಾಜಿ, ಶಿಕ್ಷಕರಾದ ಎಂ.ಜಿ.ಹೆಗಡೆ, ಡಿ.ಐ.ಮೊಗೇರ, ಗಣೇಶ ಆಗೇರ, ಮಂಜುಳಾ ಶಿರೂರು, ಶಂಕರ ನಾಯ್ಕ, ದೇವಿದಾಶ ನಾಯ್ಕ, ಹೇಮಲತಾ ರಾವ್ ಕುಮಾರಿ ಶ್ರೀಶಾ ಶೇಟ್, ಶಶಿಧರ ನಾಯ್ಕ, ಶ್ರಿಧರ ದೇವಾಡಿಗ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವಿಡಂಬಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಒಂದು ನಿಮಿಷದ ಮೌನಾಚರಣೆಯ ಮೂಲಕ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು. ಶ್ರೀ ರತ್ನಾ ಗಣೇಶ ಪ್ರಕಾಶನದ ಪ್ರಕಾಶಕ, ಸಾಹಿತಿ ಶ್ರೀಧರ ಶೇಟ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ನಾಯ್ಕ ವಂದಿಸಿದರೆ ಹಾಗೂ ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು.

error: