July 11, 2024

Bhavana Tv

Its Your Channel

ಅನಂತ ಕುಮಾರ್ ಹೆಗಡೆ ಹೇಳಿಕೆಗೆ ವಿರೋಧ : ಕುಮಟಾದಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಕೆ

ಕುಮಟಾ / ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನ ಭಾಷಣದ ಬಗ್ಗೆ

ಹಾಲಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಕುಮಟಾದಲ್ಲಿ ಇಂದು ಕಾಂಗ್ರೇಸ್ ಕಾರ್ಯಕರ್ತರು ಮಾಜಿ ಶಾಸಕರ ನೇತ್ರತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಸಂಸದ ಅನಂತಕುಮಾರ್ ಸಹಿತ ಬಿಜೆಪಿಗರು ಗೋಡ್ಸೆ ಸಂತತಿಯವರು , ಬಿಜೆಪಿಗರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಅನಂತಕುಮಾರ್ ದೇಶದ ಇತಿಹಾಸ ಓದಿದ್ದರೆ ಹೀಗೆಲ್ಲ ಮಾತಾಡುತ್ತಿರಲಿಲ್ಲ ಎಂದು ಎಂದು ಕುಮಟಾದ ಮಾಜಿ ಶಾಸಕಿ ಶಾರದಾ ಶೆಟ್ಟಿ ವಾಗ್ದಾಳಿ ನಡೆಸಿದರು.
ಅಂಕೋಲಾಕ್ಕೆ ಉಪ್ಪಿನ ಸತ್ಯಾಗ್ರಹಕ್ಕೆ ಬಂದಿದ್ದ ಮಹಾತ್ಮಾ ಗಾಂಧಿ ಕುಮಟಾಕ್ಕೂ ಬಂದಿದ್ದರು. ಅವರು ಕೂತಿದ್ದ ಈ ಜಾಗವನ್ನು ಗಾಂಧಿ ಚೌಕ ಎಂದು ಕರೆಯುತ್ತೇವೆ. ಅದಕ್ಕಾಗಿ ನಾವು ಇಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸುತ್ತಿದ್ದೇವೆ. ಅಭಿವೃದ್ಧಿಯ ಬಗ್ಗೆ ಮಾತಾಡುವುದನ್ನು ಬಿಟ್ಟು ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ನಮ್ಮ ಸಂಸದ ಅವಹೇಳನ ಮಾಡಿರುವದರಿಂದ ಈ ಜಿಲ್ಲೆಯ ಜನರಾದ ನಾವೆಲ್ಲರೂ ತಲೆತಗ್ಗಿಸಬೇಕಾಗಿದೆ. ಅನಂತಕುಮಾರಗೆ ಬಿಜೆಪಿ ಶೋಕಾಸ್ ನೋಟಿಸ್ ಕೊಟ್ಟಿದೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ ಹೇಳಿದರು.

ಈ ಸಂದರ್ಭ ಜಿ ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಪುರಸಭಾ ಮಾಜಿ ಅಧ್ಯಕ್ಷರಾದ ಮಧುಸೂದನ ಶೇಟ್, ದೀಪಾ ದಾಮೋದರ ನಾಯ್ಕ, ದೇವರಹಕ್ಕಲದ ಪುರಸಭಾ ಸದಸ್ಯ ಎಂ ಟಿ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ ಗೌಡ, ರವಿ ಗೌಡ, ಯುವ ಮುಖಂಡರಾದ ಸಂತೋಷ್ ನಾಯ್ಕ ಬರ್ಗಿ, ಸಚಿನ್ ನಾಯ್ಕ, ಗಣಪತಿ ಶೆಟ್ಟಿ ಉಪಸ್ತಿತರಿದ್ದರು.

error: