July 14, 2024

Bhavana Tv

Its Your Channel

ಗಂಜಿಗೆರೆಕೊಪ್ಪಲು ಗ್ರಾಮದ ದೇವಿಕೆರೆಯ ಹೂಳೆತ್ತುವ ಕಾಮಗಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರರೈ ವೀಕ್ಷಿಸಿ ಪರಿಶೀಲನೆ

ದೇವಿಕೆರೆಯ 14ನೇ ದಿನದ ಕೆರೆಯ ಹೂಳೆತ್ತುವ ಕಾಮಗಾರಿಯಲ್ಲಿ 3 ಜೆಸಿಬಿ ಯಂತ್ರಗಳು, 3ಟಿಪ್ಪರ್ ಲಾರಿಗಳು, 25ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಭಾಗವಹಿಸಿದ್ದು ಈವರೆಗೆ 3500.ಟ್ರ್ಯಾಕ್ಟರ್ ಲೋಡ್ ಫಲವತ್ತಾದ ಗೋಡುಮಣ್ಣು ಹಾಗೂ 300ಟಿಪ್ಪರ್ ಗೋಡುಮಣ್ಣನ್ನು ಈ ಭಾಗದ ರೈತಬಾಂಧವರು ತಮ್ಮ ಹೊಲಗಳು ಹಾಗೂ ತೋಟಗಳಿಗೆ ಸಾಗಿಸಿದ್ದಾರೆ…10ಲಕ್ಷರೂಪಾಯಿಗಳ ವೆಚ್ಚದಲ್ಲಿ ಕೆರೆಯ ಹೂಳನ್ನು ತೆಗೆಸಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪುನರುಜ್ಜೀವನಗೊಳಿಸಿ ಜನಸಾಮಾನ್ಯರಿಗೆ ಕೆರೆಕಟ್ಟೆಗಳ ಮಹತ್ವ, ಅಂತರ್ಜಲದ ಮರುಪೂರಣ, ನೀರಿನ ಮಹತ್ವ ಹಾಗೂ ಜಲಸಾಕ್ಷರತೆಯ ಜಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನಮ್ಮೂರು ನಮ್ಮಕೆರೆ ಕಾರ್ಯಕ್ರಮದ ಅಡಿಯಲ್ಲಿ ಮಾಡಲಾಗುತ್ತಿದೆ. ಇದುವರೆಗೆ ರಾಜ್ಯದಾದ್ಯಂತ 178 ಕೆರೆಗಳ ಹೂಳೆತ್ತುವ ಕೆಲಸವನ್ನು ಸಂಪೂರ್ಣಗೊಳಿಸಲಾಗಿದೆ…ಗಂಜಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಜನರು ಹಾಗೂ ರೈತ ಬಾಂಧವರು ಕೆರೆ ಹೂಳೆತ್ತುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ..ರಾಜರ್ಷಿಗಳಾದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗಡೆ ಅವರ ಮಾರ್ಗದರ್ಶನದಲ್ಲಿ ಜಲಸಾಕ್ಷರತೆ ಹಾಗೂ ಜಲಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿದೆ ಎಂದು ಗಂಗಾಧರರೈ ಅಭಿಮಾನದಿಂದ ಹೇಳಿದರು….

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಡ್ಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ಸುವರ್ಣ, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಸಂಸ್ಥೆಯ ಕೃಷಿಅಧಿಕಾರಿ ನಿಂಗಪ್ಪ ಅಗಸರ್, ಮೇಲ್ವಿಚಾರಕ ರಾಜಪ್ಪ, ಗಂಜಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ವೀರಾಜಮ್ಮ, ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಗೌಡ ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು…..

error: