September 14, 2024

Bhavana Tv

Its Your Channel

“ಅಂಗವೈಕಲ್ಯ ಶಾಪವಲ್ಲ, ದೇವರು ಕೊಟ್ಟ ವರ”

ಬೆಳಗಾವಿ : ಬೆಳಗಾವಿಯ ರೋಟರಿ ಕಾರ್ಪೊರೇಷನ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಈಜುಗಾರರ ಕ್ಲಬ್ ಬೆಳಗಾವಿ ಹಾಗೂ ಅಕ್ವೇರಿಯಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿದ್ದ ವಿಕಲಚೇತನ ಮತ್ತು ದೀನದಲಿತ ಮಕ್ಕಳ 19 ನೇ ಉಚಿತ ಈಜು ತರಬೇತಿ ಶಿಬಿರದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭಾಗವಹಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಅಕ್ವೇರಿಸ್ ಸ್ವಿಮ್ಮ್ ಕ್ಲಬ್ ಅಧ್ಯಕ್ಷರು, ಈಜು ತರಬೇತುದಾರರಾದ ಶ್ರೀ ಉಮೇಶ ಕಲಘಟಗಿ ಮುಂದಾಳತ್ವದಲ್ಲಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಶ್ರದ್ಧೆಯಿಂದ ಈಜು ಕಲಿಸಿರುವುದು ಅಭಿನಂದನೀಯ. ಈ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳ ಸಾಧನೆ ನೋಡಿ ಬೆರಗಾಗಿ. ಈ ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆಯನ್ನುಪ್ರಕಾಶಗೊಳಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಅಂಗವೈಕಲ್ಯ ಹೊಂದಿದ್ದರೂ ಕೂಡ ವಿಶೇಷ ಸಾಧನೆ ಮಾಡಿದ ಈಜುಗಾರರ ಈಜು ಕೌಶಲ್ಯ ಮತ್ತು ಅವರ ಸಾಧನೆಗಳ ನೇರ ಪ್ರದರ್ಶನ ನೋಡಿ, ವೈಕಲ್ಯವೆಂಬುದು ವೈಫಲ್ಯವಲ್ಲ, ಎಲ್ಲ ರೀತಿಯಲ್ಲೂ ಸದೃಢರಾಗಿರುವವರು ನಾಚುವಂತ ಸಾಧನೆ ಮಾಡಿದ ಇವರು ನಮಗೆಲ್ಲ ಪ್ರೆರಣೆಂದರು.

ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಶಾಸಕರಾದ ಅಭಯ ಪಾಟೀಲ, ಶ್ರೀಮತಿ ಎಮ್. ಎನ್.ಕಪಡಿಯಾ, ಬಿಜೆಪಿ ಮುಖಂಡರಾದ ಎಮ್. ಬಿ.ಜಿರ್ಲಿ, ಹಾಗೂ ಈಜುಪಟುಗಳು, ಪಾಲಕರು ಉಪಸ್ಥಿತರಿದ್ದರು.

error: