October 5, 2024

Bhavana Tv

Its Your Channel

ಇನ್ವೇಶನ್ ಅಂಡ್‌ ಡೈವರ್ಸೆಸ್ ಸೈನ್ಸ್ ಫೆಸ್ಟ್-2020

ಪೀಣ್ಯ ದಾಸರಹಳ್ಳಿ : ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಕಮ್ಮನಹಳ್ಳಿಯ ಐನ್ ಸ್ಟೀನ್ ಐ ಇಂಟರ್ನ್ಯಾಷನಲ್ ಶಾಲೆಯಲ್ಲಿ ಈ ವರ್ಷದ ಶೀರ್ಷಿಕೆಯಾದ ಇನ್ವೇಶನ್ ಅಂಡ್‌ ಡೈವರ್ಸೆಸ್ ಹೆಸರಿನಲ್ಲಿ ಸೈನ್ಸ್ ಫೆಸ್ಟ್-2020 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜೂನಿಯರ್ ಎಲ್ ಕೆಜಿ, ಸಿನಿಯರ್ ಕೆಜಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಸೈನ್ಸ್ ಫೆಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲಾ ಮಕ್ಕಳು ಕ್ಯಾಮೆರಾ, ದೂರವಾಣಿ, ಸೂಕ್ಷ್ಮ ದರ್ಶಕ, ಮಾನವ ಕೋಶ, ಸೂಕ್ಷ್ಮ ಜೀವಿಗಳು, ಶಿಲೀಂಧ್ರಗಳು, ಪಾಚಿ, ಬ್ಯಾಕ್ಟೀರಿಯಾ, ಪ್ರೊಟೊಜೋವಾ, ವೈರಸ್, ಆಲೂಗಡ್ಡೆ ಚಿಪ್ಸ್ ಆವಿಷ್ಕಾರ, ಕಾರ್ನ್ ಫ್ಲಕ್ಸ್ ಆವಿಷ್ಕಾರ, ಚಾಕೊಲೇಟ್ ಆವಿಷ್ಕಾರ, ಅಹಾರ ಪಿರಮಿಡ್ ಗಳ ಕುರಿತು ಶಾಲಾ ಮಕ್ಕಳು ಕುತೂಹಲಕಾರಿ ಮಾಹಿತಿಯನ್ನು ಶಿಕ್ಷಕರಿಂದ ತಿಳಿದುಕೊಂಡರು.

ವಿದ್ಯಾರ್ಥಿ ಅಸಿಂ ಮಾತನಾಡಿ, ಕ್ಯಾಮರಾ ಆಧುನಿಕರಣಗೊಂಡಂತೆ ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಕೂಡ ಹೆಚ್ಚಾಗುತ್ತದೆ. ಕ್ಯಾಮರಾ ಆವಿಷ್ಕಾರದ ಬಗ್ಗೆ ಮಾಹಿತಿ ಪಡೆದುಕೊಂಡು ಖುಷಿ ಅನುಭವಿಸಿದ್ದೇನೆ ಎಂದು ತಿಳಿಸಿದನು.
ಶಾಲೆಯ ನಿರ್ದೇಶಕ ಅಂಜುಂ ಸಬ ಮಾತನಾಡಿ ನಮ್ಮ ಶಾಲೆ ಸ್ಥಾಪನೆಯಾಗಿ ಎಂಡು ವರ್ಷಗಳು ಹಾಗಿದೆ .ನಮ್ಮ ಶಾಲೆಯಲ್ಲಿ ಎರಡು ವರ್ಶಗಳಿಂದ ಸೈನ್ಸ್ ಫೆಸ್ಟ್ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ ಇನ್ನೂ ಮುಂದೆಯೂ ಕೂಡ ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ನೀಡುತ್ತೇವೆ ಎಂದು ಹೇಳಿದರು .

ವಿದ್ಯಾರ್ಥಿ ಶಿವಾನ್ಸ್, ಅಲೆಕ್ಸಾಂಡರ್ ಗ್ರಹಾಂ ಬೆಲ್‌ ಕಂಪನಗಳನ್ನು ವಿದ್ಯುತ್ ಆಗಿ ಸಂಕೇತಗಳನ್ನು ಪರಿವರ್ತಿಸಲು ಪ್ರಯತ್ನಿಸಿದರು. ಅನೇಕ ಪ್ರಯತ್ನಗಳ ಮೂಲಕ ತನ್ನ ಯಶಸ್ಸು ಕಂಡು ಖುಷಿ ಪಟ್ಟಿದ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ನಿರ್ದೇಶಕ ಅಂಜುಂ ಸಬ ಶಾಲಾ ವ್ಯವಸ್ಥಾಪಕ ತಹಸೀನ್ ಅಹಮದ್ ಶಾಲೆಯ ಮಕ್ಕಳು,ಶಿಕ್ಷಕರು,ಪೋಷಕರು ಇನ್ನೂ ಮುಂತಾದವರು ಇದ್ದರು.

error: