October 5, 2024

Bhavana Tv

Its Your Channel

ಸಕ್ಕರೆ ನಾಡಿನಲ್ಲಿ ಜಿಲ್ಲಾಧಿಕಾರಿಗಳಿಂದ ಹೊಸ ಅಧ್ಯಾಯ ಪ್ರಾರಂಭ

ಮಂಡ್ಯ : ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳ ಮನವಿ ಮೇರೆಗೆ ರೌಡಿಗಳ ವಿಚಾರಣೆ ನಡೆಸಲಾಯಿತು. ಸಕ್ಕರೆನಾಡಿನಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾದ ಹಿನ್ನೆಲೆಯಲ್ಲಿ ಗಡೀಪಾರು ಸಂಬAಧ ರೌಡಿಗಳ ವಿಚಾರಣೆ ಮಂಡ್ಯ ಡಿಸಿ ಕೋರ್ಟ್ನಲ್ಲಿ ನಡೆಯುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ೩೮ ರೌಡಿಗಳಿಗೆ ಪೋಲಿಸರು ನೋಟಿಸ್ ನೀಡಿದ್ದರು. ವಿಚಾರಣೆಗಾಗಿ ಡಿಸಿ ಕಚೇರಿಗೆ ರೌಡಿಶೀಟರ್ ಆಗಮಿಸಿದ್ದರು.
ಕಳೆದ ೨-೩ ತಿಂಗಳಿAದ ರೌಡಿ ಚಟುವಟಿಕೆ ಹೆಚ್ಚಾಗಿದ್ದು, ಹಾಡು ಹಗಲೇ ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಅಪರಾಧ ಕೃತ್ಯ ನಡೆಯುತಿತ್ತು, ಈ ಅಪರಾಧ ಕೃತ್ಯ ತಗ್ಗಿಸಲು ವಿನೂತನ ಅಸ್ತ್ರ ಪ್ರಯೋಗಕ್ಕೆ ಜಿಲ್ಲಾಧಿಕಾರಿಗಳು ಮುಂದಾಗಿದ್ದು ಗೆಜೆಟೆಡ್ ಅಧಿಕಾರಿಗಳ ಶ್ಯೂರಿಟಿ ಬಾಂಡ್ ನೀಡುವಂತೆ ಸೂಚಿಸಿದ್ದಾರೆ, ಇದರಿಂದ ರೌಡಿ ಶೀಟರ್ಗಳು ವಿಚಲಿತರಾಗಿದ್ದಾರೆ. ೩೮ ರೌಡಿಗಳ ಗಡಿಪಾರಿಗೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ.
ಪೊಲೀಸ್ ಕಾಯ್ದೆ ೧೯೬೩ರ ೫೫ ಮತ್ತು ೫೭ರನ್ವಯ ಗಡಿಪಾರಿಗೆ ಮನವಿ ಮಾಡಲಾಗಿದೆ.
ಸಾರ್ವಜನಿಕ ವಲಯದಲ್ಲಿ ಅಪರಾಧ ಕೃತ್ಯಗಳಲ್ಲಿ ತಮ್ಮದೇ ಪ್ರಭಾವ ಬೀರಲು ಮುಂದಾದ ರೌಡಿ ಶೀಟರ್ಗಳ ವಿಚಾರಣೆ ನಡೆಯಿಸಿ ಪ್ರಕರಣಗಳ ಹಾಗೂ ರೌಡಿಗಳ ಅನುಗುಣವಾಗಿ ಗಡಿಪಾರು ಅವಧಿ ವಿಸ್ತಾರ ಮಾಡುವುದಾಗಿ ತಿಳಿಸಿದ್ದಾರೆ.
ಮುಂದಿನ ಶುಕ್ರವಾರದಂದು ಗಡಿಪಾರಿನ ಬಗ್ಗೆ ಆದೇಶ ಪ್ರಕಟವಾಗಲಿದೆ.

error: