June 20, 2024

Bhavana Tv

Its Your Channel

20 ರಿಂದ 30 ನಿಮಿಷಗಳ ಕಾಲ ಸ್ಕೂಬಾ ಡೈವಿಂಗ್ ಮಾಡಿದ 12ರ ಬಾಲಕಿ :ಬಾಲಕಿಯ ಸಾಹಸಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ

ಭಟ್ಕಳ: ಪುಟ್ಟ ಮಕ್ಕಳನ್ನ ಒಬ್ಬರಿಗೆ ಆಟ ಆಡೋದಕ್ಕೆ ಬಿಡೋದಕ್ಕೆ ಎಲ್ಲ ಪಾಲಕರು ಭಯಪಡತ್ತಾರೆ. ಆದರೆ ಇಲ್ಲೋರ್ವ ಬಾಲಕಿ ಸಮುದ್ರದ ಆಳದಲ್ಲಿ ಸರಿಸುಮಾರು 20 ರಿಂದ 30 ನಿಮಿಷಗಳ ಕಾಲ ನೀರಿ ಒಳಗೆ ಇದ್ದು ಅಲ್ಲಿನ ಸುಂದರ ಪ್ರಪಂಚವನ್ನ ನೋಡುವ ಮೂಲಕ ಸಹಾಸ ಮೆರೆದಿದ್ದಾಳೆ ಹಾಗಾದ್ರೆ ಆ ಸಾಹಸಿ ಬಾಲಕಿ ಯಾರು ಅಂತೀರಾ.? ಈ ಸ್ಟೋರಿ ನೋಡಿ

ಉತ್ತರಕನ್ನಡ ಜಿಲ್ಲಾಢಳಿತ ಭಟ್ಕಳ ತಾಲೂಕಿ ಮುರುಡೇಶ್ವರ ನೇತ್ರಾಣಿ ನಡುಗಡ್ಡೆಯಲ್ಲಿ ಆಯೋಜನೆ ಮಾಡಿದ ಸ್ಕೂಬಾ ಉತ್ಸವದಲ್ಲಿ ಪಾಲ್ಗೊಂಡ ಕುಮಟ ಪಟ್ಟಣ ಗುಡಿಗಾರಗಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಶ್ರೀಧರಕುಟಾಕರ್ ಅವರ ಪುತ್ರಿ ಋತು ಎಲ್ಲರಂತೆ ಸಮುದ್ರದ ಆಳಕ್ಕೆ ಇಳಿದು ಸುಮಾರು 20 ರಿಂದ 30 ನಿಮಿಷಗಳ ಕಾಲ ನೀರಿನಲ್ಲಿ ಇದ್ದು ಅಲ್ಲಿ ಜಲಚರಗಳನ್ನ ನೋಡುವ‌ ಮೂಲಕ ಸಾಹಸ ಮೆರೆದಿದ್ದಾಳೆ.
ಈ ಬಾಲಕಿಯ ಸಾಹಸಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೆಷ್ಟೋ ಮಂದಿ ವಯಸ್ಕರರು ಈ ಸ್ಕೂಬಾ ಡೈವಿಂಗ್ ಮಾಡೋದಕ್ಕೆ ಭಯಪಡುತ್ತಿರುವಾಗ ಈ ಪುಟ್ಟ ಬಾಲಕಿ ಆಳ ಸಮುದ್ರದಲ್ಲಿ ಇಳಿಯುವ ಮೂಲಕ ಸ್ಕೂಬಾ ಡೈವಿಂಗ್ ಮಾಡಲು ಭಯ ಪಡಬೇಕಾಗಿಲ್ಲ ಎಂಬುದನ್ನ ತೋರಿಸಿಕೊಟ್ಟಿದ್ದಾಳೆ

error: