May 30, 2023

Bhavana Tv

Its Your Channel

ಅಗ್ನಿ ದುರಂತಕ್ಕೆ ಒಳಗಾದ ಕುಟುಂಬಕ್ಕೆ ಮಾಜಿ ಶಾಸಕರಿಂದ ಚೆಕ್ ವಿತರಣೆ.

ಹೊನ್ನಾವರ ತಾಲೂಕಿನ ಮಾಳಕೋಡಿನಲ್ಲಿ ಅಗ್ನಿದುರಂತಕ್ಕೀಡಾದ ಮನೆಗಳಿಗೆ ತೆರಳಿ ಕೆ.ಡಿ.ಸಿ.ಸಿ. ಬ್ಯಾಂಕ್ ಮತ್ತು ‌ಜನತಾ ಕೋಆಪರೇಟಿವ್ ಬ್ಯಾಂಕ್ ಭಟ್ಕಳ ಇವರಿಂದ ನಾಲ್ಕು ಕುಟುಂಬಗಳಿಗೆ ತಲಾ 10,000.00 ರದಂತೆ ಒಟ್ಟೂ 80,000.00 ಚೆಕ್ಕನ್ನು ನೀಡಿ ಸಾಂತ್ವನ ಹೇಳಿದ ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಜನತಾ ಕೊ ಆಪರೇಟೀವ್ ಬ್ಯಾಂಕ್ ಅಧ್ಯಕ್ಷರು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಆಗಿರುದರಿಂದ ಬ್ಯಾಂಕಿನಿಂದ ಧನಸಹಾಯ ಒದಗಿಸುವ ಮೂಲಕ ಸ್ಪಂದಿಸಿದ್ದಾರೆ. ಅಗ್ನಿ ದುರಂತ ಸಂಭವಿಸಿದ ದಿವಸ ವೈಯಕ್ತಿಕವಾಗಿ ತಲಾ 10,000.00ದಂತೆ ರೂ. 40,000.00 ನೀಡಿದ್ದು ಇಲ್ಲಿ ಸ್ಮರಿಸಬಹುದು.

.
ಈ ಸಂದರ್ಭದಲ್ಲಿ ಕೆಳಗಿನೂರು ಗ್ರಾಮ ಪಂಚಾಯತ ಸದಸ್ಯರಾದ ಗಂಗಾಧರ ನಾಯ್ಕ, ಬಾಲಚಂದ್ರ ನಾಯ್ಕ ಮತ್ತಿತರರು ಉಪಸ್ತಿತರಿದ್ದರು

About Post Author

error: