September 16, 2024

Bhavana Tv

Its Your Channel

ಲಯನ್ಸ್ನಿಂದ ಮಾದಕ ವಸ್ತು ಕುರಿತ ಜಾಗೃತಿ ಶಿಬಿರ

ಲಯನ್ಸ್ಕ್ಲಬ್ ಮುರ್ಡೇಶ್ವರ ಹಾಗೂ ಆರ್.ಎನ್.ಎಸ್ ಪ್ರಥಮ ದರ್ಜೆಕಾಲೇಜು ಮುರ್ಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾದಕವಸ್ತುಗಳ ಕುರಿತಾದಜಾಗೃತಿ ಶಿಬಿರವನ್ನು ನಡೆಸಲಾಯಿತು.
ಮುರ್ಡೇಶ್ವರ ಲಯನ್ಸ್ಕ್ಲಬ್‌ನ ಡ್ರಗ್ ಅವೇರ್‌ನೆಸ್ ಜಿಲ್ಲಾ ಚೇರ್ ಪರ್ಸನ್ ಡಾ.ಸುನೀಲ್ ಜತ್ತನ್‌ರವರು ಕಾರ್ಯಕ್ರಮ ಆಯೋಜಿಸಿದ್ದರು. ಉಡುಪಿಯಡಾ.ಎ.ವಿಬಾಳಿಗಾ ಸಂಸ್ಥೆಯ ನಿರ್ದೇಶಕರು ಹಾಗೂ ಮನಃಶಾಸ್ತçಜ್ಞರಾದಡಾ. ಪಿ.ವಿ ಭಂಡಾರಿಯವರು ಮಾದಕವಸ್ತುಗಳ ನಿಷೇಧ ಹಾಗೂ ಜಾಗೃತಿಯಕುರಿತಾಗಿಕಾಲೇಜು ವಿದ್ಯಾರ್ಥಿಗಳಲ್ಲಿ ಹಲವಾರುಉದಾಹರಣೆ ಹಾಗೂ ಜೀವನಾನುಭವಗಳ ಘಟನೆಗಳ ಮೂಲಕ ತಿಳುವಳಿಕೆ ಮೂಡಿಸಿದರು.
ಲಯನ್ಸ್ ರೀಜನ್ ಚೇರ್‌ಪರ್ಸನ್ ಕಾರವಾರದ ವಿನೋದ್ ನಾಯ್ಕ, ಲಯನ್ಸ್ ಜೋನ್ ಚೇರ್‌ಪರ್ಸನ್ ಎಮ್.ವಿ ಹೆಗಡೆ, ಲಯನ್ ಇಮೇಜ್ ಬಿಲ್ಡಿಂಗ್ ಜಿಲ್ಲಾ ಚೇರ್ ಪರ್ಸನ್ ನಾಗರಾಜ ಭಟ್ಟ, ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರಾಮದಾಸ ಶೇಟ್, ಆರ್.ಎನ್.ಎಸ್ ಕಾಲೇಜಿನ ಪ್ರಾಂಶುಪಾಲರಾದ ಮಾಧವಿ ಪಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಮೊದಲುರಾಷ್ಟಿçÃಯ ಹೆದ್ದಾರಿಯ ಮೂಲಕ ಜಾಥಾ ನಡೆಸಿ ಮಾದಕವಸ್ತು ನಿಷೇಧ ಫಲಕ ಪ್ರದರ್ಶನ ಹಾಗೂ ಘೋಷಣೆಗಳ ಮೂಲಕ ಜನರಲ್ಲಿಜಾಗೃತಿ ಮೂಡಿಸಲಾಯಿತು.ಲಯನ್ಸ್ಕ್ಲಬ್ ಸದಸ್ಯರು, ಶಿಕ್ಷಕರು ಹಾಜರಿದ್ದು ಸಹಕರಿಸಿದರು.

error: