October 5, 2024

Bhavana Tv

Its Your Channel

ಮಾರ್ಚ್ ೩ ಮತ್ತು ೪ ರಂದು ಭಟ್ಕಳ ಮಾರಿಕಾಂಬಾ ದೇವಿಯ ಪುನರ್ ಪ್ರತಿಪ್ಠಾ ಮಹೋತ್ಸವ ಹಾಗೂ ವರ್ಧಂತ್ಯೋತ್ಸವ

ಭಟ್ಕಳ ತಾಲೂಕಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ವರ್ಧಂತ್ಯೋತ್ಸವ ಕಾರ್ಯಕ್ರಮ ಮಾರ್ಚ್ ೪ರಂದು ಬೆಳಿಗ್ಗೆ ೭.೪೫ಕ್ಕೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಮಾದ್ಯಮ ಗೋಷ್ಟಿಯಲ್ಲಿ ಹೇಳಿದರು.

ಅವರು ದೇವಸ್ಥಾನದಲ್ಲಿ ಕರೆಯಲಾದ ಮಾದ್ಯಮ ಗೋಪ್ಠಿಯಲ್ಲಿ ಮಾತನಾಡಿ ಪುನರ್ ಪ್ರತಿಷ್ಠಾ ಮುನ್ನಾ ದಿನವಾದ ಮಾ೩ ರಂದು ಬೆಳಿಗ್ಗೆ ಗಣಪತಿ ಪೂಜೆ,ಪುಣ್ಯಾಹ,ಬ್ರಹ್ಮಕೂರ್ಚ,ಹೋಮ,ನಿರ್ವಿಘ್ನತಾ ಗಣಪತಿ ಹೋಮ,ದೇವತಾ ಪ್ರಾರ್ಥನೆ, ದೇವಣಾಂದಿ,ಅAಕುರಾರ್ಪಣಾ,ಕೌತುಕ ಬಂಧನ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.ಸಂಜೆ ೪ ಗಂಟೆಗೆ ಮಾರಿಕಾಂಬಾ ದೇವಿಯನ್ನು ಮತ್ತು ಸ್ವರ್ಣ ಲೇಪಿತ ಶಿಖರ ಕಲಶವನ್ನು ಮೆರವಣಿಗೆ ಮೂಲಕ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಕರೆ ತರಲಾಗುತ್ತದೆ.೫ ಗಂಟೆಗೆ ಗಣಪತಿ ಪೂಜೆ ಪುಣ್ಯಾಹ, ಋತ್ವಿಸ್ವರ್ಣನೆ,ಮಧುಪರ್ಕ ಸಪ್ತಶುದ್ದಿ, ಮಂಡಳ ದರ್ಶನ, ಕಲಶಸ್ಥಾಪನೆ,ಮಂಡಲದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ ೪ ರಂದು ಬೆಳಗ್ಗೆ ೭:೪೫ಕ್ಕೆ ದೇವಿಯ ಪುನರ್ ಪ್ರತಿಪ್ಠೆ ಕಾರ್ಯಕ್ರಮದ ನಂತರ ೯ ಘಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ,೧ ಘಂಟೆಗೆ ಮಹಾಅನ್ನಸಂತರ್ಪಣೆ,ಸAಜೆ ರಂಗಪೂಜೆ,ಅಷ್ಷಾವಧಾನ ಸೇವೆ ಮಹಾಪೂಜೆ ,ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲುವಂತೆ ಅವರು ತಿಳಿಸಿದರು.ಹಾಗೂ ಹೊರೆಕಾಣಿಕೆ ಸಲ್ಲಿಸುವ ಭಕ್ತಾಧಿಗಳು ಮಾರ್ಚ೨ರ ರಿಂದ ದೇವಲಯಕದಕ್ಕೆ ಸಲ್ಲಿಸಬೇಕು ವಿನಂತಿಸಿದ್ದಾರೆ.
ಸAದರ್ಭದಲ್ಲಿ ಎನ್.ಡಿ.ಖಾರ್ವಿ,ಶಂಕರ ಶೆಟ್ಟಿ, ನರೇಂದ್ರ ನಾಯಕ್,ಶ್ರೀಧರ ನಾಯ್ಕ ಆಸರಕೇರಿ,ಬಾಬಣ್ಣ,ಶ್ರೀಪಾದ ಕಂಚುಗಾರ,ಸುರೇಶ ಆಚಾರ್ಯ,ವಾಮನ ಮುಂತಾದವರು ಉಪಸ್ಥಿತರಿದ್ದರು.

error: