Honavar (N.K)ಗ್ರಾಮೀಣ ಭಾಗದಲ್ಲಿ ಕ್ರೀಡೆ ಜೊತೆ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಆ ಕ್ಷೇತ್ರದ ಸಾಧಕರಿಗೆ ವೇದಿಕೆ ಕಲ್ಪಿಸುವ ಕಾರ್ಯ ಮಾಡುತ್ತಿರುವ ಸಾಲ್ಕೋಡ್ ಯುವ ಸಮುದಾಯ ಮಾದರಿಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಗೆಳೆಯರ ಬಳಗ ಸಾಲ್ಕೋಡ್ ಇವರ ವತಿಯಿಂದ ಪ್ರಾಥಮಿಕ ಶಾಲೆ ಸಾಲ್ಕೋಡ್ ಕ್ರೀಡಾಂಗಣದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕ್ರೀಡೆಯಿಂದ ಮನಸ್ಸಿಗೆ ಮುದ ಸಿಗುತ್ತದೆ. ದೈಹಿಕವಾಗಿ ಸದೃಡವಾಗಬಹುದು ಹಾಗೇಯೇ ಸಾಂಸ್ಕ್ರತಿಕ ಕಾರ್ಯಕ್ರಮದಿಂದ ಮನೊರಂಜನೆ ದೊರೆಯುವುದು ಇದರಿಂದ ಮನಸ್ಸಿನ ದುಗುಡ ದೂರವಾಗುತ್ತದೆ. ಅಂತಹ ಉತ್ತಮ ಕಾರ್ಯಕ್ರಮ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಕ್ರೀಡಾಪಟುಗಳಿಗೆ ಕರೆ ನೀಡಿದರು. ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ ಅನೇಕ ಯೋಜನೆಗಳು ಅನುಷ್ಟಾನಗೊಂಡಿದೆ. ಅದರಲ್ಲಿ ನಿಮ್ಮ ಗ್ರಾಮದ ರಸ್ತೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದೇನೆ ಮುಂಬರುವ ದಿನದಲ್ಲಿ ನಿಮ್ಮ ಗ್ರಾಮದ ಸಮಸ್ಯೆಗೆ ಸದಾ ಕಾಲ ಸ್ಪಂದಿಸುತ್ತೇನೆ ಎಂದರು.
ಕ್ರೀಡಾAಗಣ ಉದ್ಗಾಟಿಸಿದ ಯುವ ಉದ್ಯಮಿ ರವಿಕುಮಾರ ಶೆಟ್ಟಿ ಮಾತನಾಡಿ, ಯುವಕರು ಒಗ್ಗಟ್ಟಾಗಿದ್ದರೆ ಎಂತಹ ಕಾರ್ಯಕ್ರಮವಾದರೂ ಯಶ್ವಸಿ ಮಾಡಬಹುದು ಎನ್ನುವುದಕ್ಕೆ ಇಲ್ಲಿಯ ಯುವಸೈನ್ಯವೇ ಸಾಕ್ಷಿಯಾಗಿದೆ. ಗ್ರಾಮದ ಪ್ರತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವ ಮೂಲಕ ಯುವ ಸಮುದಾಯ ರಾಜಕೀಯ ಮರೆತು ಎಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಾರೆ. ಗ್ರಾಮದ ಸಮಸ್ಯೆಗೆ ಸದಾ ಕಾಲ ಧ್ವನಿಯಾಗಿರುತ್ತೇನೆ ಎಂದರು.
ಕ್ರೀಡಾಫಲಕ ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ ಇಲ್ಲಿಯ ಯುವಕರು ಶಿಕ್ಷಣ, ಕ್ರೀಡೆ, ಸಾಂಸ್ಕ್ರತಿಕವಾಗಿ ಅನೇಕ ಸಾಧಕರಿದ್ದು ಅವರ ಸಾಧನೆಗೆ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿದೆ. ನನ್ನ ರಾಜಕೀಯ ಜೀವನಕ್ಕೆ ಹೊಸ ದಿಕ್ಕನ್ನು ಪರಿಚಯಿಸಿದ ಈ ಗ್ರಾಮದ ಸಮಸ್ಯೆ ಬಗೆಹರಿಸಲು ಸದಾ ಸಿದ್ದನಿದ್ದೇನೆ. ನಿಮ್ಮ ಸುಖ ದುಃಖದಲ್ಲಿ ನಾನಿರುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಬಾಲಚಂದ್ರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯತ ಸದಸ್ಯೆ ಶಾಂತಲಾ ನಾಯ್ಕ, ಗ್ರಾಮಸ್ಥರಾದ ಕೃಷ್ಣ ನಾಯ್ಕ, ಶ್ರೀನಿವಾಸ ನಾಯ್ಕ ಉಪಸ್ತಿತರಿದ್ದರು. ರಾಮ ನಾಯ್ಕ ಸ್ವಾಗತಿಸಿ ಶಿಕ್ಷಕರಾದ ಸತೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು
ಸಭಾ ಕಾರ್ಯಕ್ರಮದ ಬಳಿಕ ಮನೊರಂಜನಾ ಕಾರ್ಯಕ್ರಮ ನಂತರ ವಾಲಿಬಾಲ್ ಪಂದ್ಯ ಜರುಗಿತು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.