May 19, 2024

Bhavana Tv

Its Your Channel

ವಿಜೃಂಭಣೆಯಿಂದ ನಡೆದ ನೀಲಗೋಡ ಉತ್ಸವ.

sdr

ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ ವಾಗಿರುವ ಹೊನ್ನಾವರದ ಬಳ್ಕೂರು ಗ್ರಾಮದ ನೀಲಗೋಡ ಶ್ರೀ ಯಕ್ಷಿಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿಯ ವಾರ್ಷಿಕೋತ್ಸವ ಹಾಗೂ ನೀಲಗೋಡ ಉತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

dav

ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಮಾದೇವ ಸ್ವಾಮಿಯವರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆದವು. ಕೇವಲ ಕೆಲವೇ ವರ್ಷಗಳಲ್ಲಿ ಅತ್ಯಂತ ಪ್ರಸಿದ್ಧ ಪಡೆದಿರುವ ಈ ದೇವಾಲಯದಲ್ಲಿ ಪ್ರತಿನಿತ್ಯವೂ ನೂರಾರು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ದರ್ಶನ ನಡೆಯುತ್ತಿದ್ದು ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯಿಂದ ಮಾರ್ಗದರ್ಶನ ಪಡೆಯುತ್ತಾರೆ. ಶ್ರಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಹಾಗೂ ಅವರ ತತ್ಕರ ಕಮಲ ಸಂಜಾತ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯ ಆಶೀರ್ವಾದ ಹಾಗೂ ಮಾರ್ಗ ದರ್ಶನಗಳೊಂದಿಗೆ ಈ ಕ್ಷೇತ್ರ ದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ದಿವಗಿಯ ಅವಧೂತರಾದ ಶ್ರೀ ಶ್ರೀ ರಮಾನಂದ ಸ್ವಾಮೀಜಿಯವರ ವಿಶೇಷ ಆಶೀರ್ವಾದ ಈ ಕ್ಷೇತ್ರದ ಮೇಲಿದ್ದು ಪ್ರತಿನಿತ್ಯವೂ ಅನ್ನದಾನ ನಡೆಯುತ್ತವೆ. ಪ್ರತಿ ಅಮಾವಾಸ್ಯೆ ಯೆಂದು ತೀರ್ಥ ಸ್ನಾನ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆಯುತ್ತಾರೆ. ದೇವಿಯ ಪ್ರತಿಷ್ಠಾಪನೆಯ ನಿಮಿತ್ತ ಶನಿವಾರ ವೇದಮೂರ್ತಿ ಪ್ರಸನ್ನ ಭಟ್ಟರವರ ಅರ್ಚಕತ್ವದಲ್ಲಿ ಶನಿವಾರ ಹಾಗೂ ರವಿವಾರ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿದವು. ಸಾಮೂಹಿಕ ಸತ್ಯನಾರಾಯಣ ಪೂಜೆ, ಪಲ್ಲಕ್ಕಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

dav

ಈ ಕುರಿತು ವೇದಮೂರ್ತಿ ಪ್ರಸನ್ನ ಗೋಪಾಲಕೃಷ್ಣ ಭಟ್ಟರವರು ಭಾವನಾ ಟಿವಿಯೊಂದಿಗೆ ಮಾತನಾಡಿ ವಿವರ ನೀಡಿದರು…. ಶ್ರೀ ಯಕ್ಷಿ ಹಾಗೂ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಗಳನ್ನು ಉತ್ಸವ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಸಾವಿರಾರು ಭಕ್ತರು ನೀಲಗೋಡ ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು. ವಿಶೇಷ ಚಂಡೆ ವಾದನ ಹಾಗೂ ಶ್ರೀ ರಾಮನಾಥ ಕ್ರಪಾಪೋಷಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಪ್ರದರ್ಶನ ಗೊಂಡಿತು. ## ವೆಂಕಟೇಶ ಮೇಸ್ತ ಹೊನ್ನಾವರ

error: