May 7, 2024

Bhavana Tv

Its Your Channel

ತೌಕ್ತೆ ಚಂಡಮಾರುತದ ಪ್ರಭಾವ, ತೇಲಿಬಂದ ಕಡಲ(ನೀರ)ಹಂದಿ

ಹೊನ್ನಾವರ ; ತಾಲ್ಲೂಕಿನ ಮಂಕಿ ಬಣಸಾಲೆ ಮಾರ್ಕೆಟ್ ರೋಡ್‌ನ ಸಮಿಪ ಹೊಳೆಯಲ್ಲಿ ಅಪರೂಪದ ಕಡಲ ಹಂದಿ ತೆಲಿಬಂದ ಘಟನೆ ನಡೆದಿದೆ.
ತೌಕ್ತೆ ಚಂಡಮಾರುತದ ಪ್ರಭಾವದಿಂದಾಗಿ ಅರಬ್ಬಿ ಸಮುದ್ರದಲ್ಲಿ ನೀರಿನ ಅಲೆಯ ಪ್ರವಾಹದ ಹೆಚ್ಚಾಗಿ ಸಮುದ್ರದ ನೀರು ಇಲ್ಲಿನ ಹೊಳೆಗೆ ಬಂದು ತುಂಬಿಕೊAಡಿದೆ. ಆ ನೀರಿನೊಂದಿಗೆ ನೀರು ಹಂದಿ ತೆಲಿ ಬಂದಿದ್ದು. ಇದು ಸತ್ತು ಹೋಗಿರುವುದರಿಂದ ಸಮುದ್ರದ ಅಲೆಯೊಂದಿಗೆ ಹೊಳೆಗೆ ಬಂದು ಸೇರಿಕೊಂಡಿದೆ. ಇದು ಗಾತ್ರದಲ್ಲಿ ಬಹಳ ದೊಡ್ಡದಾಗಿದ್ದು ಸ್ಥಳೀಯರಿಗೆ ಕೂತುಹಲ ಮೂಡಿಸಿದೆ, ಬಿಡದೆ ಸುರಿಯುವ ಮಳೆಯಿಂದಾಗಿ ಮತ್ತು ಸಮುದ್ರದ ನೀರಿನ ಅಲೆಯ ರಭಸವು ಅಧಿಕವಾಗಿರುವುದರಿಂದ ಹೊಳೆಯ ಆಸುಪಾಸಿನ ತೋಟ ಗದ್ದೆಗಳೆಲ್ಲ ಜಲಾವ್ರತವಾಗಿದೆ. ಜೊತೆಗೆ ನೀರಿನೊಂದಿಗೆ ಸಮುದ್ರದ ಕಸ ಕಡ್ಡಿ,ಪ್ಲಾಸ್ಟಿಕ್ ವಸ್ತುಗಳು,ಹಾಗೂ ನೀರಿನ ನೊರೆಯು ಬಂದು ಸೇರಿಕೊಂಡಿದೆ.
ಇದು ಹೀಗೆ ಮುಂದುವರೆದರೆ ರಸ್ತೆ ಹಾಗೂ ಇಲ್ಲಿಯ ಇನ್ನಷ್ಟು ಭಾಗವು ಜಲಾವ್ರತವಾಗಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ ; ನವೀನ ಶೇಟ. ಬಣಸಾಲೆ

error: