May 4, 2024

Bhavana Tv

Its Your Channel

ಬಾಲಕಿಯ ಅತ್ಯಚಾರ ಪ್ರಕರಣ : ಪೊಲೀಸರಿಂದ ಆರೋಪಿಯ ಬಂಧನ..

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯನ್ನಾಗಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧನವಾದ ಆರೋಪಿ ವಳಚ್ಚಿಲ್ ನಿವಾಸಿ ಲವಕುಮಾರ್ ಅಲಿಯಾಸ್ ಶ್ರವಣ್ ಎಂದು ತಿಳಿದು ಬಂದಿದೆ.

ಆರೋಪಿಯು ತೊಕ್ಕೊಟ್ಟಿನ ಫಾಸ್ಟ್ ಫುಡ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ.ಆ ಕ್ಯಾಂಟೀನ್ ಮಾಲೀಕಿಯ ಪುತ್ರಿಯನ್ನು ಅತ್ಯಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಇದರಿಂದ ಬಾಲಕಿ ಗರ್ಭಿಣಿ ಆಗಿದ್ದು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಲವ ಕುಮಾರ್ ಕ್ಯಾಂಟೀನ್ ನಲ್ಲಿ‌ ಕೆಲಸ ಮಾಡುವಾಗ ಮಾಲೀಕಿಯ ಮನೆಯಲ್ಲಿ ಉಳಿಯುತ್ತಿದ್ದ.ಆಗ ಬಾಲಕಿಯ ಪರಿಚಯವಾಗಿ ಸಲುಗೆ ಬೆಳೆಸಿಕೊಂಡು ದುರ್ಬಳಕೆ ಮಾಡಿಕೊಂಡ. ನಂತರ ಆಕೆ ಗರ್ಭಿಣಿಯಾಗಿದ್ದಾಳೆ.ಮನೆಯವರು ಅತ್ಯಚಾರ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಪ್ರಕರಣದ ಬಗ್ಗೆ ಉಳ್ಳಾಲ ಪೊಲೀಸ್ ದೂರು ದಾಖಲಾಗಿದೆ.ಪೊಲೀಸರು ‌ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

error: