
ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಮಾಂಸದಂಗಡಿ ಮಾಲಕನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಇಂದು ತಡರಾತ್ರಿ ನಡೆದಿದೆ.
ಬೈಕ್ ನಲ್ಲಿ ಬಂದ ಇಬ್ಬರು ಅಂಗಡಿ ಮಾಲೀಕ ನಝೀರ್(47) ಎಂಬವರ ಹತ್ಯೆಗೆ ಯತ್ನಿಸಿದ್ದಾರೆ. ಹಳೆಕೋಟೆ ನಿವಾಸಿಯಾಗಿರುವ ಇವರು ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಘಟನೆ ನಡೆದಿದೆ.
ಗಾಯಾಳುವನ್ನು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸಿದ್ದಾರೆ
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ