April 27, 2024

Bhavana Tv

Its Your Channel

ಅಕ್ಷರ ದೀಪ ಫೌಂಡೇಶನ್ ಹಾಗೂ ಅಕ್ಷರ ದೀಪ ಸಾಹಿತ್ಯ ಕಲಾ ವೇದಿಕೆಯಿಂದ ರಾಜ್ಯಮಟ್ಟದ ವಾರ್ಷಿಕೋತ್ಸವ ಸಂಭ್ರಮಾಚರಣೆ

ಧಾರವಾಡ: ಸಾಹಿತಿ ಸುಭಾಷ್ ಚವ್ಹಾಣ ರವರಿಗೆ ‘ಸಿರಿಗನ್ನಡ ಸಾಹಿತ್ಯ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು

15 ಅಕ್ಟೋಬರ್ 2022ರ ಶನಿವಾರ ಮಧ್ಯಾನ 2:00 ಗಂಟೆಗೆ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜರುಗಿದ ‘ಅಕ್ಷರ ದೀಪ ಫೌಂಡೇಶನ್’ ವಾರ್ಷಿಕ ಸಂಭ್ರಮಾಚರಣೆಯಲ್ಲಿ ಸುಹೇಚ ಕಾವ್ಯನಾಮದ ರಜತ ಕವಿ ಸಾಹಿತಿ ಸುಭಾಷ್ ಹೇ. ಚವ್ಹಾಣ ರವರಿಗೆ ‘ಸಿರಿಗನ್ನಡ ಸಾಹಿತ್ಯ ರತ್ನ’ ರಾಜ್ಯ ಪ್ರಶಸ್ತಿಯನ್ನು ಧಾರವಾಡ ಕಸಾಪ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರದಾನ ಮಾಡಿ ಸತ್ಕರಿಸಿದರು.

ಲೇಖಕ ಸುಭಾಷ್ ಚವ್ಹಾಣ ರವರು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ, ಮಕ್ಕಳ ಸಾಹಿತ್ಯ ಪರಿಷತ್ತು, ಶರಣು ವಿಶ್ವ ವಚನ ಫೌಂಡೇಶನ್ ಮುಂತಾದ ಸಂಘಟನೆಗಳ ಆಜೀವ ಸದಸ್ಯರಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕನ್ನಡ ನಾಡು ನುಡಿ ಸಂಸ್ಕೃತಿಯ ಸೇವೆಯನ್ನು ಮಾಡುತ್ತಾ ಕನ್ನಡ ಸಾಹಿತ್ಯದ ಕುರಿತು ಕವನ, ಕಥೆ, ಲೇಖನಗಳನ್ನು ಗುಬ್ಬಚ್ಚಿ ಗೂಡು, ಜೀವನ ಶಿಕ್ಷಣ, ಜನಮಿಡಿತ, ಕ್ರಾಂತಿ ಧ್ವನಿ, ಸಂಜೆ ಮಿತ್ರ, ಕೋಲಾರ ಅಗ್ನಿ, ನವ ವೈಭವ, ಸಿಂಹಧ್ವನಿ ಮುಂತಾದ ಪತ್ರಿಕೆಯಲ್ಲಿ ಪ್ರಕಟಿಸಿ ನಾಡಿನಲ್ಲಿ ವೈಚಾರಿಕತೆ ಹರಡುವಲ್ಲಿ ಚಿಂತನಶೀಲರಾಗಿದ್ದಾರೆ.

ಶಿಕ್ಷಕರಾಗಿ ಮಕ್ಕಳಿಗೆ ಸಂತಸದಾಯಕ ಕಲಿಕೆಗೆ ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೇದಿಕೆ ಕಲ್ಪಸಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ.

ಕವಿ ಶಿಕ್ಷಕ ಸುಭಾಷ್ ರವರ ಸಾಹಿತ್ಯದ ದ್ವಿದಶಕಗಳ ಸಾಧನೆ ಮತ್ತು ಶಿಕ್ಷಕ ವೃತ್ತಿಯ 16 ವರ್ಷಗಳ ಅನುಪಮ ಸೇವೆಯನ್ನು ಪರಿಗಣಿಸಿ ಧಾರವಾಡ – ಬೆಂಗಳೂರಿನ ‘ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ’ ಮತ್ತು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ, ಪರಿಷತ್ತಿನ ಆಶ್ರಯದಲ್ಲಿ 2022ನೇ ಸಾಲಿನ”ಸಿರಿಗನ್ನಡ ಸಾಹಿತ್ಯ ರತ್ನ’ ರಾಜ್ಯ ಪ್ರಶಸ್ತಿಯನ್ನು ಕೊಡಮಾಡಲಾಗಿದೆ ಎಂದು ಅಕ್ಷರ ದೀಪ ಸಂಸ್ಥಾಪಕ ಅಧ್ಯಕ್ಷರಾದ ಪ್ರವೀಣ ಕುಮಾರ ಕನ್ಯಾಳ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಪ್ರಸ್ತುತ ಪಡಿಸಿದರು.

ಹಿರಿಯ ಧುರೀಣರಾದ ಚನ್ನಬಸಪ್ಪ ಅಂಗಡಿ ಅಧ್ಯಕ್ಷತೆ ವಹಿಸಿ ನಾಡಿನ ಪ್ರತಿಭಾವಂತ ಸಾಹಿತಿಗಳಿಗೆ ಗೌರವಿಸುತ್ತಿರುವುದಕ್ಕೆ ಅಕ್ಷರ ದೀಪದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೂಖ್ಯ ಅತಿಥಿಗಳಾಗಿ ಕುಮಟಾ ಡಯಟನ ಅಧಿಕ್ಷಕರಾದ ಜ್ಯೋತಿ ಹೆಬ್ಬಾರ್, ಅತಿಥಿಗಳಾದ ಶಾಹಿರಿ ಕವಿ ಮರುಳಸಿದ್ದಪ್ಪ ದೊಡ್ಡಮನಿ, ಶೈಲಜಾ ಪಾಟೀಲ್, ಶುಭಾ ವಿಷ್ಣು ಸಭಾಹಿತ, ರಾಘವೇಂದ್ರ ಕೋಲಕಾರ, ಮಹೇಶ ವಡ್ಡಿನ ಗಣ್ಯಮಾನ್ಯರು ನಾಡು ನುಡಿ ಸಾಹಿತ್ಯ ಸೇವೆಗೆ ಟೊಂಕಕಟ್ಟಿ ನಿಂತಿರುವ ಅಕ್ಷರ ದೀಪ ಫೌಂಡೇಶನ್ ಕಾರ್ಯವೈಖರಿಯನ್ನು ಬೆಂಬಲಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಜನ ಸಾಧಕ ಬಂಧುಗಳಿಗೆ ಸಿರಿಗನ್ನಡ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನಮಾಡಲಾಯಿತು. ಪ್ರಮೋದ ಜೋಶಿ, ಬಸವರಾಜ ಹಡಪದ, ನಾಗರಾಜ ತಳವಾರ, ಶಿವು ಖನ್ಙೂರ, ವಂದನಾ ಕರಾಳೆ, ಕಸ್ತೂರಿ ಭೀರಪ್ಪನವರ ಭುವನೇಶ್ವರಿ ಅಂಗಡಿ ಕವಿ ಮಹನೀಯರು ಕವಿಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಅಭಿನಂದನಾ ಪತ್ರ ಮತ್ತು ಮರುಳಸಿದ್ದಪ್ಪ ವಿರಚಿತ ‘ಹನಿ ಹನಿ ಭಾವ ದನಿ’ ಚುಟುಕು ಸಂಕಲನವ ಸ್ಮರಿಣಿಕೆ ಗೌರವವನ್ನು ಅತಿಥಿಗಳಿಂದ ಪಡೆದರು.
ಸಂಘಟಕ ಪತ್ರಕರ್ತ ಚಂದ್ರಶೇಖರ ಮಾಡಲಗೇರಿ, ಗಣಪತಿ ಹೆಗಡೆ, ವಿ. ವಿ. ಹಿರೇಮಠ, ಪ್ರತಿಭಾ ಪಾಟೀಲ್, ಸವಿತಾ ಕುಸುಗಲ್, ಚಂದ್ರಕಲಾ ಇಟಗಿಮಠ ಇನ್ನೂ ಹಲವರು ಗಣ್ಯಮಾನ್ಯರ ಸಂಘಟನಾ ಸೇವೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

error: