December 22, 2024

Bhavana Tv

Its Your Channel

ಪ್ರವಾಹ ಬರುವ ಮೊದಲು ಮುಂಜಾಗ್ರತರಾಗಿ ವಿಪತ್ತು ನಿರ್ವಹಣೆಗೆ ಸಿದ್ದರಾಗಿರಿ ಜಿ.ಪಂ. ಸಿಇಓ ಭರತ ಎಸ್ ಸೂಚನೆ

ರೋಣ: ಯಾವುದೇ ಸಂದರ್ಭದಲ್ಲಿ ಪ್ರವಾಹ ಬಂದರು ನಿರ್ವಹಣೆ ಮಾಡಲು ಎಲ್ಲಾ ರೀತಿಯಲ್ಲೂ ಸಿದ್ದರಾಗಿರಬೇಕು ಎಂದು ಅಧಿಕಾರಿಗಳಿಗೆ ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್. ಸೂಚಿಸಿದರು.

ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ನಗರದ ತಾಲ್ಲೂಕಾ ಪಂಚಾಯ್ತಿ ಸಭಾ ಭವನದಲ್ಲಿ ಬುಧವಾರ ನಡೆದ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.
ಈ ಹಿಂದೆ ಪ್ರವಾಹ ಆದಾಗ ನಡೆದ ಹಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿ ತಯಾರಿ ಮಾಡಿಕೊಳ್ಳಬೇಕು. ಮನೆ ಹಾನಿ, ಆಸ್ತಿ ಹಾನಿ, ಬೆಳೆ ಹಾನಿ ಎಲ್ಲದರ ಬಗ್ಗೆ ಜಾಗೃತರಾಗಿರಿ. ನದಿ ದಡದಲ್ಲಿ ವಾಸಿಸುವ ಗ್ರಾಮಗಳ ಬಗ್ಗೆ ಸತತವಾಗಿ ನೀಗಾ ಇಡಬೇಕು ಹಾಗೂ ದನಕರುಗಳ ಬಗ್ಗೆ, ಅವುಗಳ ಮೇವಿನ ಬಗ್ಗೆ ಜಾಗೃತರಾಗಿರಬೇಕು ಅದಕ್ಕೆ ಅವಶ್ಯಕತೆ ಇರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
 ತಾಲ್ಲೂಕಿನ  ನದಿ ದಡದ ಗ್ರಾಮಗಳಿಗೆ ೧ಲಕ್ಷ ಕ್ಯೂಸೆಕ್ ನೀರು ಬಂದರೆ ಮಾತ್ರ ತೊಂದರೆ ಆಗುತ್ತದೆ. ಮೆಣಸಗಿ, ಕೊಣ್ಣೂರು, ಶಿರೋಳ, ಕಪಲಿ, ಕಲ್ಲಾಪುರ, ರಡ್ಡೇರ ನಾಗನೂರ, ಗಂಗಾಪುರ ಗ್ರಾಮಗಳು ಸೇರಿದಂತೆ ವಿವಿಧ ಪ್ರವಾಹ ಆಗುವ ಗ್ರಾಮಗಳಲ್ಲಿ ಜನರು ಹೊಸ ಗ್ರಾಮಗಳಿಗೆ ಸ್ಥಳಾಂತರವಾಗಿದ್ದಾರೆ. ಕೆಲವು ಕುಟುಂಬಗಳು ಮಾತ್ರ ಅಲ್ಲೆ ವಾಸಿಸುತ್ತಿವೆ. ಈಗಾಗಲೇ ಕಾಳಜಿ ಕೇಂದ್ರದ ಸಿದ್ದತೆಯನ್ನು ಮಾಡಿಕೊಂಡಿದ್ದೇವೆ.  ಹದ್ಲಿಗೆ ಗ್ರಾಮಕ್ಕೆ ಪೂರ್ವ ಭಾಗದಲ್ಲಿ ಆತಂಕ  ಬಿಟ್ಟರೆ ಬೇರೆ ಯಾವುದೇ ಭಯವಿಲ್ಲ ಎಂದು ಪಿಡಿಓಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮಾಹಿತಿ ನೀಡಿದರು.
ನವ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಭರತ ಅವರು ಪ್ರಶ್ನಿಸಿದಾಗ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರ ಮಹಾದೇವಪ್ಪ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿದೆ. ಎಂದು ಮಾಹಿತಿ ನೀಡಿದರು. . 

ಕ್ರೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನರ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮೇಲ್ವಿಚಾರಕರನ್ನು ನೇಮಕ ಮಾಡಿದ್ದು ಪರೀಕ್ಷೆಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನೀರಾವರಿ ಸಹಾಯಕ ಅಭಿಯಂತರು ಮಹದೇವಪ್ಪ ಹೊಸಮನಿ, ರೋಣ ತಾ.ಪಂ, ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಸಾತೇನಹಳ್ಳಿ, ನರಗುಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ. ಆರ್. ಕುರ್ತುಕೋಟಿ, ಗಜೇಂದ್ರಗಡ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ವರದಿ ವೀರಣ್ಣ ಸಂಗಲದ ರೋಣ

error: