May 14, 2024

Bhavana Tv

Its Your Channel

ಪರಿಸರ ಸಂರಕ್ಷಣೆ ಎಲ್ಲರ ಹೊಣೆ- ಭರತ ಎಸ್.

ರೋಣ : ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಕರ್ತವ್ಯವಾಗದೆ ಪ್ರತಿಯೊಬ್ಬರ ಜವ್ಹಾಬ್ದಾರಿಯಾಗಿದೆ ಎಂದು ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್. ಹೇಳಿದರು.

ರೋಣ ತಾಲ್ಲೂಕಾ ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಹೊಳೆಆಲೂರ ನವಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಡೆದಿರುವ ನೆಡುತೋಪು ನಿರ್ಮಾಣ ವೀಕ್ಷಣೆ ಮಾಡಿದರು, 
ಸರ್ಕಾರದ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ರೋಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಸಿಗಳನ್ನು ನೆಟ್ಟು ಬೆಳಸಲು ಪಣ ತೊಟ್ಟಿರುವುದು ಖುಷಿ ನೀಡಿದೆ. ಪರಿಸರ ರಕ್ಷಣೆ ಕೇವಲ ಅರಣ್ಯ ಇಲಾಖೆಯ ಕಾರ್ಯವಾಗದೆ  ನೆಟ್ಟಿರುವ ಗಿಡಗಳು ಹಾಳಾಗದಂತೆ ಕಾಪಾಡಲು ಸ್ಥಳೀಯ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ರೋಣ ಉಪವಲಯ ಅರಣ್ಯ ಅಧಿಕಾರಿ ಅನ್ವರ ಕೋಲ್ಹಾರ ಮಾತನಾಡಿ, ಹೊಳೆಆಲೂರ ವ್ಯಾಪ್ತಿಯಲ್ಲಿ 2700 ಸಸಿಗಳನ್ನು ನೆಡಲಾಗಿದೆ. ಇದರಲ್ಲಿ ಅರಳಿ, ಬೇವು, ಬಸರಿ, ನೇರಳೆ, ಮಲ್ನಾಡ್ ಹುಣಸೆ, ಹೊಳೆಮಟ್ಟಿ, ತಪಸಿ, ಹೊಂಗೆ ಹೊಳೆದಾಸವಾಳ, ಬಸವನಪಾದ ಜಾತಿಯ ಸಸಿಗಳು ಒಳಗೊಂಡಿವೆ ಎಂದರು. ಸಸಿಗಳ ಸಂರಕ್ಷಣೆಗೆ ಮೂರು ಜನರನ್ನು ಕಾವಲುಗಾರರಾಗಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ರೋಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಸಾತೇನಹಳ್ಳಿ, ಪಿಡಿಓ ಜಿ. ಬಸವರಾಜ, ಅರಣ್ಯ ರಕ್ಷಕ ಪುಟ್ಟರಾಜ ಬಿಂಗಿ,  ಹೊಳೆಆಲೂರ ಗ್ರಾ.ಪಂ ಅಧ್ಯಕ್ಷ, ಸದಸ್ಯರು ಇದ್ದರು.
error: