ರೋಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಲಪ್ರಭಾ ನದಿ ದಡದ ವಿವಿಧ ಗ್ರಾಮಗಳಿಗೆ ಹಾಗೂ ವಿವಿಧೆಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಗಳಿಗೆ ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್. ಬುಧವಾರ ಭೇಟಿ ನೀಡಿದರು.
ಇದೇ ವೇಳೆ ಬೆನಹಾಳ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಪರಿಶಿಷ್ಟ ಸಮುದಾಯದ ಸಣ್ಣ ರೈತರಿಗಾಗಿ ನಡೆದ ಶೇಂಗಾ ಮತ್ತು ತೊಗರಿ ಬೀಜದ ಕಿಟ್ ಗಳ ವಿತರಣೆಯಲ್ಲಿ ಪಾಲ್ಗೊಂಡರು. ಅಲ್ಲಿಂದ ಮುದೇನಗುಡಿ ಗ್ರಾಮದ ರೈತ ಮಹಾನಂದೇಶ ಉಳ್ಳಾಗಡ್ಡಿ ಕೃಷಿ ಹೊಂಡದ ಸಹಾಯದಿಂದ ಬೆಳೆಯಲಾದ ತೋಟಗಾರಿಕೆ ಬೆಳೆಗಳನ್ನು ವೀಕ್ಷಣೆ ಮಾಡಿದರು.
ರೈತ ಮನಸು ಮಾಡಿದರೆ ಯಾವುದೇ ಸಾಧನೆಯನ್ನು ಮಾಡಬಲ್ಲ ಎಂದು ಬೆನಹಾಳ ರೈತ ಸಾಧಿಸಿ ತೋರಿಸಿದ್ದಾರೆ ಎಂದರು. ಇದೇ ಮಾದರಿಯಲ್ಲಿ ಸರ್ಕಾರಿ ಯೋಜನೆ ಬಳಕೆ ಮಾಡಿಕೊಳ್ಳಲು ಎಲ್ಲಾ ರೈತರು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕ ರವೀಂದ್ರ ಪಾಟೀಲ, ರಾಮನಗೌಡ ಪಾಟೀಲ, ಮುತ್ತಣ್ಣ ಜಂಗಣ್ಣವರ, ಶಶಿಧರ ಪಾಟೀಲ, ಶರಣು ಚಲವಾದಿ, ರುದ್ರಗೌಡ ಪರಸನಗೌಡ್ರ, ವೀರಪ್ಪ ಲಕ್ಕುಂಡಿ, ಶಂಕ್ರಪ್ಪ ಚಲವಾದಿ, ಶೇಖರಯ್ಯ ಅಜ್ಜಾರ, ಲಕ್ಷ್ಮವ್ವ ಚಲವಾದಿ, ಲೆಂಕೆಪ್ಪ ಹೊಸಮನಿ ಇದ್ದರು.
ವೀರಣ್ಣ ಸಂಗಲದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ