December 19, 2024

Bhavana Tv

Its Your Channel

ಹಿರೇಹಾಳ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸಂಟ್ರೇಟರ ದೇಣಿಗೆ

ರೋಣ ತಾಲೂಕು ಹಿರೇಹಾಳದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕರೋನ ೩ ನೆ ಅಲೆಯ ಮುಂಜಾಗ್ರತವಾಗಿ ಮತ್ತು ಉಸಿರಾಟದಿಂದ ತೊಂದರೆ ಆಗುತ್ತಿರುವ ರೋಗಿಗಳನ್ನು ಗುಣ ಪಡಿಸಲು, ಮಾಡಲಗೇರಿ ಗ್ರಾಮದ ಸಮಾಜ ಸೇವಕ ಮತ್ತು ಬೆಂಗಳೂರಿನ ಖಾಸಗಿ MNC ಕಂಪನಿಯಲ್ಲಿ ಇಂಜನೀಯರ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಜಗದೀಶ ಶಂಕರಗೌಡ ಅಮಾತಿಗೌಡ್ರ ತಮ್ಮ ಸತತ ಪ್ರಯತ್ನ ದಿಂದ ವಿಸ್ಟಿಯಾನ ಕಂಪನಿಯ ಡೆಪ್ಯುಟಿ ಮ್ಯಾನೇಜರ್ ಜೊತೆ ಮಾತನಾಡಿ ಸುಮಾರು ೨೫೦೦೦ ಸುತ್ತ ಮುತ್ತಲಿನ ಜನಸಂಖ್ಯೆ ಆವರಿಸಿದ ಹಿರೇಹಾಳ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಆಕ್ಸಿಜನ್ concentrator (ಕಾನ್ಸಂಟ್ರೇಟರ) ಗಳನ್ನು ತರುವದರಲ್ಲ ಯಶಸ್ವಿ ಆದರು.

ಈಗಾಗಲೇ ಕರೋನ ಸಂದರ್ಭದಲ್ಲಿ ಒಂದನೇ ಮತ್ತು ೨ ನೆ ಅಲೆಗಳಲ್ಲಿ ಕಠಿಣ ಶ್ರಮದಿಂದ ಕೆಲಸ ಮಾಡಿದ ಜಗದೀಶ ಅಮಾತಿಗೌಡ್ರ , ವಿಸ್ಟಿಯಾನ್ ಕಂಪನಿ, ವಿದ್ಯಾ ಪೋಷಕ, ನಮ್ಮ ಆಶಾ ಕಿರಣ ಹಾಗೂ ತಾವುಗಳು ಸೇವೆ ಸಲ್ಲಿಸಿದ ಯುರೋಪ್ ನ ಬೆಲ್ಜಿಯಂ ಹಾಗೂ ಜರ್ಮನಿ ಯ ಕನ್ನಡ ಸಂಘ, ಜರ್ಮನಿಯ ರೈನ್ ಮೈನ್ ಸಂಘ, ಅಮೇರಿಕಾದ, ಆಸ್ಟ್ರೇಲಿಯಾ ಹಾಗೂ ದೇಶದ ಮುಲೇ ಮೂಲೆ ಗಳಿಂದ ನೆರವು ಪಡೆದು ಸುಮಾರು ೫೦೦ ಜನಕ್ಕೆ,, ಒಂದು ಕುಟುಂಬಕ್ಕೆ ೧೫ ದಿನ ಆಗುವಂತ ರೇಷನ್ ಕಿಟ್,೫೦ ಜನಕ್ಕೆ ಕೃತಕ ಕಾಲು ಮತ್ತು ಕೈ ಜೋಡಣೆ,೨೫ ಬೆಡ್ ಕಾಟ, ಥರ್ಮೋಗನ್, ಆಕ್ಸಿಜನ್ ಮೀಟರ್ ,೧೦೦೦ ಜನಕ್ಕೆ ಗುವ ಕೋವಿಡ ಮೆಡಿಸಿನ್, ಸ್ಯಾನಿಟೈಜರ, ಹತ್ತಾರು ಯೋಜನೆಗಳನ್ನು ರೋಣ ತಾಲೂಕಿನ ೨೦ ಹಳ್ಳಿಗಳು, ಬಾಗಲಕೋಟೆ ಜಿಲ್ಲೆಯ ೬ ಹಳ್ಳಿಗಳು ಮತ್ತು ಕುಷ್ಟಗಿ,, ಬಾದಾಮಿ ತಾಲೂಕಿನ ಹಳ್ಳಿಗಳಿಗೆ ವಿತರಣೆ ಮಾಡಿದರು. ಗ್ರಾಮದ ಹಿರಿಯರು, ಯುವಕರು, ಆರೋಗ್ಯ ಸಿಬ್ಬಂದಿಗಳು,.. ಜಗದೀಶ ಅಮಾತಿಗೌಡ್ರ ಮಾಡುತ್ತಿರುವ ಕೆಲಸಗಳಗೆ ಶ್ಲಾಘನೆ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ, ಶಂಕರಗೌಡ ಃ ಅಮಾತಿಗೌಡ್ರ ಮಾಜಿ ಅಧ್ಯಕ್ಷರು, ನಾಗನಗೌಡ ವಿ ಅಮಾತಿಗೌಡ್ರ ಮಾತನಾಡಿ ೩ ನೆ ಅಲೆಯಲ್ಲಿ ನಮ್ಮ ಪಾತ್ರ ಏನಂತ ವಿವರವಾಗಿ ಸೃಷ್ಟನೇ ಮಾಡಿದರು, ಗ್ರಾಮ ಪಂಚಾಯತ್ ಸದಸ್ಯ ರಮೇಶ ವಕ್ಕರ, ಸುರೇಶ್ ಉಮಚಗಿ, ಹನುಮಗೌಡ ರಾಯನಗೌಡ್ರ, ಇಂಜನೀಯರ ಶರಣು ಅಮಾತಿಗೌಡ್ರ ಅರೋಗ್ಯ ಸಿಬ್ಬಂದಿಗಳು, ಸಿದ್ದೇಶ, ಹಿರಿಯರು ಯುವಕರು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: