May 14, 2024

Bhavana Tv

Its Your Channel

ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ

ರೋಣ: ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ ಕನಸನ್ನು ನನಸಾಗಿಸಲು ಪ್ರಯತ್ನಿಸುವಂತೆ ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ತಿಳಿಸಿದರು.

ರೋಣ ತಾಲೂಕಿನ ಸೋಮನಕಟ್ಟಿ ಗ್ರಾಮದ ೬೮೭ ಮನೆಗಳಿಗೆ ಜಲಜೀವನ ಮೀಷನ್ ಯೋಜನೆಯಡಿ ಅಂದಾಜು ೮೩.೩೩ ಲಕ್ಷಗಳ ಅನುದಾನದಡಿ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮತ್ತು ನೂತನ ಶಾಲಾ ಕಟ್ಟಡಗಳ ಉದ್ಘಾಟನೆ ಹಾಗೂ ಹುಲ್ಲೂರ ಗ್ರಾಮದಲ್ಲಿ ೧೬೩೮ ಮನೆಗಳಿಗೆ ಜಲಜೀವನ ಮೀಷನ್ ಯೋಜನೆಯಡಿ ಅಂದಾಜು ೧೫೭.೭೮ ಲಕ್ಷಗಳ ಅನುದಾನದಡಿ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಮತ್ತು ಹುಲ್ಲೂರದಿಂದ ಬೆನಹಾಳ ಗ್ರಾಮಕ್ಕೆ ಅಂದಾಜು ೪೧ ಲಕ್ಷ ರೂ ಗಳ ಅನುದಾನದಡಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಜಲ ಜೀವನ್ ಮೀಷನ್ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ಜಾರಿಗೊಳಿಸದ್ದು ಇದರಿಂದಾಗಿ ಮಹಿಳೆಯುರು ಕೊಡ ಹೊತ್ತು ಮೈಲುಗಟ್ಟಲೆ ನಡೆಯುವ ತಾಪತ್ರಯ ತಪ್ಪಲಿದೆ ಎಂದರು. ಗ್ರಾಮಗಳಲ್ಲಿ ಜರಗುವ ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಚುನಾಯಿತ ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಂಬAಧಿಪಟ್ಟAತೆ ಯಾವುದೇ ಅಡೆತಡೆಗಳಿದ್ದರೆ ಅವುಗಳನ್ನು ತಮ್ಮ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಂತೆ ತಿಳಿಸಿದರು. ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರಕಿಸಿಕೊಡಲಾಗುತ್ತಿದ್ದು ಇದರ ಸದುಪಯೋಗವಾಗುವಂತೆ ನೋಡಿಕೊಳ್ಳುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ.

ಕೋವಿಡ್ ಸೊಂಕಿನಿAದಾಗಿ ಇಡೀ ಪ್ರಪಂಚದ ಆರ್ಥಿಕತೆ ಮೇಲೆ ಭೀಕರ ಪರಿಣಾಮ ಬೀರಿದ್ದು ಇದರಲ್ಲಿ ರಾಜ್ಯ ಸರ್ಕಾರದ ಆದಾಯವು ಕುಂಠಿತಗೊAಡಿದ್ದರೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮಗಳಿಗೆ ಮಂಜೂರಾಗುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಸ್ವ ಪ್ರತಿಷ್ಠೆಯನ್ನು ಬದಿಗೊತ್ತಿ ಗ್ರಾಮಗಳ ಅಭಿವೃದ್ಧಿಯತ್ತ ಗಮನಹರಿಸಲು ಸೂಚಿಸಿದರು.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾನ್ನುಡಿಯನ್ನು ಸಾಕಾರಗೊಳಿಸಲು ಇಂದಿನ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಒದಗಿಸುವದು ಶಿಕ್ಷಕರ ಆಧ್ಯ ಕರ್ತವ್ಯವಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಮೌಲ್ಯಯುತ ಶಿಕ್ಷಣ, ನಾಡು, ನುಡಿ, ನೆಲ ಸಂರಕ್ಷಣೆಯ ಕುರಿತು ಶಿಕ್ಷಣ ನೀಡಿ ಪ್ರತಿ ವಿಧ್ಯಾರ್ಥಿಗಳನ್ನು ಆದರ್ಶ ವಿಧ್ಯಾರ್ಥಿಗಳನ್ನಾಗಿಸುವಂತೆ ಶಿಕ್ಷಕರಿಗೆ ಕರೇ ನೀಡಿದರು.

ಕೋವಿಡ್ ೨ನೇ ಅಲೆಯಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದ್ದು ಇದಕ್ಕೆ ರಾಜ್ಯವು ಹೊರತಾಗಿಲ್ಲ. ಜಿಲ್ಲೆಯಲ್ಲಿ ಕೋವಿಡ್ ೨ ನೇ ಅಲೆಯನ್ನು ನಿಯಂತ್ರಿಸಲಾಗಿದ್ದು ಇದಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಸೇನಾನಿಗಳಿಗೆ ಅಭಿನಂದಿಸಿದರು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ ಧಾರಣ ಹಾಗೂ ದೈಹಿಕ ಅಂತರ ಕಾಪಾಡಿಕೊಂಡು ತಜ್ಞರ ವರದಿಯಂತೆ ಮೂರನೇ ಅಲೆ ಈಗಾಗಲೇ ರಾಜ್ಯದ ಅಕ್ಕ ಪಕ್ಕದ ರಾಜ್ಯಗಳಲ್ಲಿ ಪ್ರಾರಂಭವಾಗಿದ್ದು ರಾಜ್ಯದಲ್ಲೂ ಇದರ ಪರಿಣಾಮ ಬೀರಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರು ಈ ಕುರಿತು ಅಗತ್ಯದ ಮುಂಜಾಗೃತಾ ಕ್ರಮಗಳಾದ ಕಡ್ಡಾಯ ಮಾಸ್ಕ ಧಾರಣೆ, ದೈಹಿಕ ಅಂತರ ಕಾಪಾಡಿಕೊಳ್ಳುವದು ಹಾಗೂ ಅನಾವಶಕವಾಗಿ ಮನೆಯಿಂದ ಹೊರ ಬರದೆ ಸಂಭಾವ್ಯ ಮೂರನೇ ಅಲೆಯನ್ನು ನಿಯಂತ್ರಿಸುವAತೆ ಸಾರ್ವಜನಿಕರಲ್ಲಿ ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹುಲ್ಲೂರು ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ನಂದಾ ಬರಡ್ಡಿ, ಉಪಾಧ್ಯಕ್ಷ ಬಸವರಾಜ ಬ್ಯಾಳಿ, ಸದಸ್ಯರುಗಳಾದ ಬಸವರಾಜ ಅವರಾದ, ಶ್ರೀಮತಿ ವಿಜಯಲಕ್ಷ್ಮೀ ಹುಬ್ಬಳ್ಳಿ, ರೋಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಪಲ್ಲವಿ ಸಾತೇನಹಳ್ಳಿ ಸೇರಿದಂತೆ ಗ್ರಾಮಗಳ ಗಣ್ಯರು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ ವೀರಣ್ಣ ರೋಣ

error: